ಬುಲಂದ್‌ಶಹರ್ : ರಾಜ್ಯಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವಿನ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್’ನ ಫರಾನಾ ಗ್ರಾಮದ ನಿವಾಸಿ ಸೋಲಂಕಿ, ತಾನು ರಕ್ಷಿಸಿದ ನಾಯಿಮರಿ ಕಚ್ಚಿ ರೇಬೀಸ್’ನಿಂದ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಹೃದಯವಿದ್ರಾವಕ ಘಟನೆ ಮೂರು ದಿನಗಳ ಹಿಂದೆ ನಡೆದಿದೆ.
ರೇಬೀಸ್ ಪರಿಣಾಮದಿಂದ ಬಳಲುತ್ತಿರುವ ಬ್ರಿಜೇಶ್ ಸೋಲಂಕಿಯ ಮನಕಲಕುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕಬಡ್ಡಿ ಆಟಗಾರನು ತೀವ್ರ ರೇಬೀಸ್ ದಾಳಿಯನ್ನ ಅನುಭವಿಸುತ್ತಿರುವುದನ್ನು, ಹಾಸಿಗೆಯ ಮೇಲೆ ಮಲಗಿ ನೋವಿನಿಂದ ನರಳುತ್ತಿರುವುದನ್ನ ದೃಶ್ಯಗಳು ತೋರಿಸುತ್ತವೆ. ವೀಡಿಯೊದಲ್ಲಿ, ಸೋಲಂಕಿ ನೋವಿನಿಂದ ಕಿರುಚುತ್ತಿರುವುದನ್ನು ಕಾಣಬಹುದು.
ಮಾರ್ಚ್ ತಿಂಗಳ ಆರಂಭದಲ್ಲಿ, ಅವರ ಹಳ್ಳಿಯಲ್ಲಿ ಒಂದು ನಾಯಿಮರಿ ಚರಂಡಿಗೆ ಬಿದ್ದಿತ್ತು. ಅದನ್ನ ರಕ್ಷಿಸಲು ಬ್ರಿಜೇಶ್ ಕೈ ಚಾಚಿದ್ದು, ಈ ವೇಳೆ ನಾಯಿಮರಿ ಆತನ ಬಲಗೈ ಬೆರಳನ್ನ ಕಚ್ಚಿದೆ. ಇದು ಸಣ್ಣ ಗಾಯ ಎಂದು ಭಾವಿಸಿ ಬ್ರಿಜೇಶ್ ಅದನ್ನ ನಿರ್ಲಕ್ಷಿಸಿದ್ದು, ರೇಬೀಸ್ ವಿರೋಧಿ ಲಸಿಕೆ ಪಡೆಯಲಿಲ್ಲ.
ಕಳೆದ ಗುರುವಾರ ರೇಬೀಸ್ ಲಕ್ಷಣಗಳು ಕಾಣಿಸಿಕೊಂಡ ನಂತ್ರ ಬ್ರಿಜೇಶ್ ಸೋಲಂಕಿ ಸ್ಥಿತಿ ವೇಗವಾಗಿ ಹದಗೆಟ್ಟಿತು. ಆ ದಿನ ಬೆಳಿಗ್ಗೆ ಎದ್ದಾಗ, ಅವರ ಬಲಗೈಯಲ್ಲಿ ಮರಗಟ್ಟುವಿಕೆ ಕಂಡುಬಂದಿದ್ದು, ಮಧ್ಯಾಹ್ನದ ಹೊತ್ತಿಗೆ, ಮರಗಟ್ಟುವಿಕೆ ದೇಹದಾದ್ಯಂತ ಹರಡಿತ್ತು. ಹೀಗಾಗಿ ಆಟಗಾರರನ್ನ ಮೊದಲು ಅಲಿಘರ್ ಜಿಲ್ಲೆಯ ಜೀವನ್ ಜ್ಯೋತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಿದರು.
ನಂತರ ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಆದರೆ ರೇಬೀಸ್’ನ ಸ್ಪಷ್ಟ ಲಕ್ಷಣಗಳನ್ನ ಗಮನಿಸಿದ ನಂತರ, ಅಲ್ಲಿನ ವೈದ್ಯರು ಆ ಹಂತದಲ್ಲಿ ರೋಗದ ತೀವ್ರತೆ ಮತ್ತು ಗುಣಪಡಿಸಲಾಗದ ಕಾರಣ ನೀಡಿ ಅವರನ್ನ ದಾಖಲಿಸಿಕೊಳ್ಳಲು ನಿರಾಕರಿಸಿದರು. ಬೇರೆ ದಾರಿಯಿಲ್ಲದೆ, ಕುಟುಂಬವು ಅವರನ್ನ ಮಥುರಾದ ಆಯುರ್ವೇದ ಔಷಧ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿ ಗಿಡಮೂಲಿಕೆ ಚಿಕಿತ್ಸೆ ಪಡೆದ ನಂತ್ರ ಬ್ರಿಜೇಶ್ ಸ್ವಲ್ಪ ಸಮಯದವರೆಗೆ ಚೇತರಿಕೆಸಿಕೊಂಡರು. ಆದರೆ, ಅವರ ಸ್ಥಿತಿ ಮತ್ತೆ ಹದಗೆಟ್ಟಿತು, ಬಳಿಕ ಅವರನ್ನ ದೆಹಲಿಯ ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ಅವರ ಲಕ್ಷಣಗಳ ಆಧಾರದ ಮೇಲೆ, ವೈದ್ಯರು ರೇಬೀಸ್ ದೃಢಪಡಿಸಿದರು ಮತ್ತು ಚಿಕಿತ್ಸೆಯು ಇನ್ನು ಮುಂದೆ ಪರಿಣಾಮಕಾರಿಯಾಗುವುದಿಲ್ಲ ಎಂದು ಕುಟುಂಬಕ್ಕೆ ತಿಳಿಸಿದರು.
ಶುಕ್ರವಾರ ಬೆಳಿಗ್ಗೆ, ಕುಟುಂಬವು ಬ್ರಿಜೇಶ್’ರನ್ನ ಅವರ ಹಳ್ಳಿಗೆ ಮರಳಿ ಕರೆತರುತ್ತಿದ್ದಾಗ, ದಾರಿಯಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ.
रैबीज से स्वर्ण पदक विजेता कबड्डी खिलाड़ी ब्रजेश सोलंकी की जान चली गई…
UP के बुलंदशहर में युवा एथलीट स्वर्ण पदक विजेता कबड्डी खिलाड़ी ब्रजेश सोलंकी की रैबीज़ के असर से मौत हो गई। कुछ दिन पहले नाले में गिरे पिल्ले को निकालने के चक्कर में पिल्ले ने उसके हाथ में काट लिया था।… pic.twitter.com/Kfr9N0ybMw
— TRUE STORY (@TrueStoryUP) June 30, 2025
BREAKING: ಇನ್ಫೋಸಿಸ್ ಮಹಿಳಾ ಉದ್ಯೋಗಿಗಳ ರಹಸ್ಯ ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಆರೋಪಿ ಅರೆಸ್ಟ್
BIG NEWS : ಹಾಸನದಲ್ಲಿ ‘ಹೃದಯಾಘಾತದಿಂದ’ 25 ಜನ ಸಾವು ಪ್ರಕರಣ : ಮಾಹಿತಿ ಸಂಗ್ರಹಕ್ಕೆ ಮುಂದಾದ ತನಿಖಾ ತಂಡ