ಬೆಂಗಳೂರು: 2024ರ ವರ್ಷದ ಜೆಇ ವರ್ಗಾವಣೆಯಲ್ಲೂ ಕೆಪಿಟಿಸಿಎಲ್ ಗೊಂದಲ ನಿರ್ಮಾಣ ಮಾಡಿ, ನೌಕರರು ಕೋರ್ಟು ಕಚೇರಿ ಅಲೆಯುವಂತೆ ಮಾಡಿತ್ತು. ಈ ಕುರಿತಂತ ‘ಕೆಪಿಟಿಸಿಎಲ್ 226 ಜೆಇ ವರ್ಗಾವಣೆ’ಯಲ್ಲಿ ಪಾಲನೆಯಾಗದ ‘ನೀತಿ-ನಿಯಮ’: ‘ಷರತ್ತು’ ಮೀರಿ ‘ಪೋಸ್ಟಿಂಗ್’ ಎಂಬುದಾಗಿ ಸುದ್ದಿ ಪ್ರಕಟಿಸಿತ್ತು. ಈಗ ಕಿರಿಯ ಇಂಜಿನಿಯರ್ ( ವಿದ್ಯುತ್ ) ಅವರುಗಳ 2025ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕಿದ್ದಂತ ಇಲಾಖೆ, ಮಾಡಿಕೊಂಡಿಲ್ಲ. ಈ ಬಾರಿಯೂ ಷರತ್ತಿನಲ್ಲಿ ಸ್ಪಷ್ಟತೆ ನೀಡಿ, ಅವುಗಳನ್ನೇ ಉಲ್ಲಂಘಿಸಿ ಜೆಇ ವರ್ಗಾವಣೆ ಮಾಡಿ ನೌಕರರನ್ನು ಗೊಂದಲಕ್ಕೆ ದೂಡಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರು 233 ಜೆಇಗಳನ್ನು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಈ ವರ್ಗಾವಣೆಯಲ್ಲಿ ಹಲವು ಗೊಂದಲಕ್ಕೆ ಕಾರಣವಾಗಿದೆ. ಒಬ್ಬರಿಗೆ ಎರಡು ವರ್ಗಾವಣೆ ಸ್ಥಳವನ್ನು ತೋರಿಸಿದ್ದರೇ, ಮತ್ತೆ ಕೆಲವರು ಕಾರ್ಯ ನಿರ್ವಹಿಸುತ್ತಿರುವಂತ ಹುದ್ದೆಗೂ ವರ್ಗಾವಣೆಗೆ ಅರ್ಹರಿಲ್ಲದಿದ್ದರೂ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಜೆಇ ವರ್ಗಾವಣೆಯ ಷರತ್ತು ಹಾಗೂ ಸೂಚನೆಗಳಲ್ಲಿ ಏನಿದೆ.?
1. ಬದಲಾವಣೆಗೆ ಅನುಮತಿ ನೀಡಲಾದ ಗ್ರೂಪ್ “ಸಿ” ಪದವೃಂದದ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವೃತ್ತದಲ್ಲಿ ಕನಿಷ್ಠ 4 ವರ್ಷಗಳ ಸೇವೆಯನ್ನು ಹಾಗೂ ಗ್ರೂಪ್ “ಡಿ” ಪದವೃಂದದ ನೌಕರರು ವಿಭಾಗದಲ್ಲಿ ಕನಿಷ್ಠ 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಲ್ಲಿ ಮಾತ್ರ ಬದಲಾವಣೆಗೆ ಅರ್ಹರಾಗಿರುತ್ತಾರೆ.
2. ಗ್ರೂಪ್ ಸಿ” ಪದವೃಂದದ ನೌಕರರಿಗೆ ಬದಲಾವಣೆಗೆ ಅನುಮತಿ ನೀಡಲಾದ ವೃತ್ತದಲ್ಲಿ ಕೋರಿರುವ ಹುದ್ದೆಯು ಖಾಲಿ ಇಲ್ಲದಿದ್ದಲ್ಲಿ, ಅದೇ ವೃತ್ತ ವ್ಯಾಪ್ತಿಯಲ್ಲಿ ಹುದ್ದೆಗಳು ಖಾಲಿ ಇದ್ದ ಪಕ್ಷದಲ್ಲಿ ಮರು ಸ್ಥಳ ನಿಯುಕ್ತಿ ಆದೇಶವನ್ನು ಹೊರಡಿಸಲು ಸಂಬಂಧಪಟ್ಟ ಕಂಪನಿಗಳ ಪ್ರಧಾನ ವ್ಯವಸ್ಥಾಪಕರು(ಆ ಮತ್ತು ಮಾಸಂಅ) ರವರು ನಿಯಮಾನುಸಾರ ಕ್ರಮ ವಹಿಸುವುದು.
3. ಗ್ರೂಪ್ “ಡಿ” ಪದವೃಂದದ ನೌಕರರಿಗೆ ಬದಲಾವಣೆಗೆ ಅನುಮತಿ ನೀಡಲಾದ ವಿಭಾಗದಲ್ಲಿ ಕೋರಿರುವ ಹುದ್ದೆಯು ಖಾಲಿ ಇಲ್ಲದಿದ್ದಲ್ಲಿ, ಅದೇ ವಿಭಾಗ ವ್ಯಾಪ್ತಿಯಲ್ಲಿ ಹುದ್ದೆಗಳು ಖಾಲಿ ಇದ್ದ ಪಕ್ಷದಲ್ಲಿ, ಮರು ಸ್ಥಳ ನಿಯುಕ್ತಿ ಆದೇಶವನ್ನು ಹೊರಡಿಸಲು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳು ನಿಯಮಾನುಸಾರ ಕ್ರಮ ವಹಿಸುವುದು.
4. ಬದಲಾವಣೆಗೆ ಅನುಮತಿ ಕೋರಿರುವ ಕಚೇರಿಯಲ್ಲಿ ಈಗಾಗಲೇ ಬೇರೆ ನೌಕರರು ಕರ್ತವ್ಯನಿರ್ವಹಿಸುತ್ತಿದ್ದಲ್ಲಿ, ಸದರಿ ಕರ್ತವ್ಯನಿರ್ವಹಿಸುತ್ತಿರುವ ನೌಕರರನ್ನು ಅದೇ ವೃತ್ತ ವ್ಯಾಪ್ತಿಯಲ್ಲಿ ಖಾಲಿ ಇರುವ ಬೇರೆ ಕಚೇರಿಗೆ ನಿಯುಕ್ತಿಗೊಳಿಸಬೇಕಾದಲ್ಲಿ, ಸದರಿಯವರು ಗ್ರೂಪ್ “ಸಿ” ಪದವೃಂದದ ನೌಕರರಾಗಿದ್ದಲ್ಲಿ, ಪ್ರಸುತ್ತ ಕಾರ್ಯನಿರ್ವಹಿಸುತ್ತಿರುವ ವೃತ್ತದಲ್ಲಿ ಕನಿಷ್ಟ 4 ವರ್ಷಗಳ ಸೇವೆಯನ್ನು ಹಾಗೂ ಗ್ರೂಪ್ “ಡಿ” ಪದವೃಂದದ ನೌಕರರಾಗಿದ್ದಲ್ಲಿ, ಪ್ರಸುತ್ತ ಕಾರ್ಯನಿರ್ವಹಿಸುತ್ತಿರುವ ವಿಭಾಗದಲ್ಲಿ ಕನಿಷ್ಟ 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.
5. ಬದಲಾವಣೆಗೆ ಅನುಮತಿ ನೀಡಲಾದ ನೌಕರರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇದ್ದಲ್ಲಿ ಅಥವಾ ಪರೀಕ್ಷಾರ್ಥ ಅವಧಿ ಇನ್ನೂ ಘೋಷಣೆಯಾಗದೇ ಇದ್ದಲ್ಲಿ ಬದಲಾವಣೆಗೆ ಅರ್ಹರಲ್ಲ.
6. ಬದಲಾವಣೆ ಅನುಮತಿಯು ಹಾಲಿ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಸೀಮಿತವಾಗಿದ್ದು, ನೌಕರರು ಸದರಿ ಬದಲಾವಣೆಯನ್ನು ತಮ್ಮ ಹಕ್ಕು ಎಂದು ಪರಿಗಣಿಸುವಂತಿಲ್ಲ.
7. ಸಂಬಂಧಿಸಿದ ಕಚೇರಿಗಳಿಂದ ಮರುತೈನಾತು ಆದೇಶ ಬಂದ ನಂತರ, ಬದಲಾವಣೆಗೊಂಡ ನೌಕರರ ಹುದ್ದೆಯ ಬಗ್ಗೆ ದೃಢೀಕರಿಸಿಕೊಂಡ ನಂತರವೇ ನೌಕರನನ್ನು ಕೆಲಸದಿಂದ ಬಿಡುಗಡೆಗೊಳಿಸುವುದು.
8. ಕೆಲಸದಿಂದ ಬಿಡುಗಡೆ ಮಾಡುವ ಪೂರ್ವದಲ್ಲಿ ಬದಲಾವಣೆ ಹೊಂದಿರುವ ವೃತ್ತವಿಭಾಗದಲ್ಲಿ ಸಂಬಂಧಿಸಿದ ಪದವೃಂದದ ಹುದ್ದೆಯ ಸೇವಾ ಹಿರಿತನದಲ್ಲಿ ಕಿರಿಯವರಾಗಿ ಸೇವೆ ಸಲ್ಲಿಸಲು ಸೇವಾ ಹಿರಿತನವನ್ನು ಬಿಟ್ಟುಕೊಡುವ ಬಗ್ಗೆ ಸಂಬಂಧಪಟ್ಟ ನೌಕರರ ಮೇಲಾಧಿಕಾರಿಯು ಬದಲಾವಣೆಗೊಂಡ ನೌಕರರಿಂದ ಲಿಖಿತ ಒಪ್ಪಿಗೆಯನ್ನು ಪಡೆದು ಅದನ್ನು ನೌಕರರ ಸೇವಾ ಪುಸ್ತಕದಲ್ಲಿ ತಪ್ಪದೇ ದಾಖಲಿಸಿ ದೃಢೀಕರಿಸುವುದು.
9. ಬದಲಾವಣೆಗೆ ಸಂಬಂಧಪಟ್ಟ ಯಾವುದೇ ಭತ್ಯೆಗಳಿಗೆ ಅರ್ಹರಲ್ಲ.
10. ಕಲ್ಯಾಣ ಕರ್ನಾಟಕ ಮೀಸಲಾತಿಯಡಿಯಲ್ಲಿ ನೇಮಕಾತಿ ಹೊಂದಿದ ಗ್ರೂಪ್ ಸಿ ಮತ್ತು ಡಿ ದರ್ಜೆ ನೌಕರರು ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವುದು. ಕನಿಷ್ಠ ಸೇವಾವಧಿಯನ್ನು ಪೂರೈಸದಿದ್ದಲ್ಲಿ ಅಂತರ ಕಂಪನಿ/ವೃತ್ತಕ್ಕೆ ಬದಲಾವಣೆಗೆ ಅರ್ಹರಲ್ಲ.
ಜೆಇ ವರ್ಗಾವಣೆಯ ಗೊಂದಲವೇನು?
ಕೆಪಿಟಿಸಿಎಲ್ ಜೆಇ ವರ್ಗಾವಣೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಗೊಂದಲವನ್ನುಂಟು ಮಾಡಿದೆ. ಕೆಪಿಟಿಸಿಎಲ್ ವಿಧಿಸಿದಂತ ಷರತ್ತು ಹಾಗೂ ಸೂಚನೆಯಲ್ಲಿ ಬದಲಾವಣೆಗೆ ಅನುಮತಿ ನೀಡಲಾದ ಗ್ರೂಪ್ “ಸಿ” ಪದವೃಂದದ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವೃತ್ತದಲ್ಲಿ ಕನಿಷ್ಠ 4 ವರ್ಷಗಳ ಸೇವೆಯನ್ನು ಹಾಗೂ ಗ್ರೂಪ್ “ಡಿ” ಪದವೃಂದದ ನೌಕರರು ವಿಭಾಗದಲ್ಲಿ ಕನಿಷ್ಠ 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಲ್ಲಿ ಮಾತ್ರ ಬದಲಾವಣೆಗೆ ಅರ್ಹರಾಗಿರುತ್ತಾರೆ ಎಂಬುದಾಗಿ ತಿಳಿಸಿದೆ. ಆದರೇ ವರ್ಗಾವಣೆಗೊಂಡು, ಸ್ಥಳ ಸೂಚಿಸಿರುವ ನೌಕರರಲ್ಲಿ ಅನೇಕರು ಕನಿಷ್ಠ 4 ವರ್ಷಗಳ ಸೇವೆಯನ್ನೇ ಪೂರೈಸಿಲ್ಲ. ಇಂತಹ ಸ್ಥಳಕ್ಕೂ ಮತ್ತೋರ್ವರನ್ನು ವರ್ಗಾವಣೆಯನ್ನು ಮಾಡಿ, ಸ್ಥಳ ಸೂಚಿಸಿದೆ.
ಈ ಷರತ್ತುಗಳನ್ನು ವಿಧಿಸಿ ವರ್ಗಾವಣೆ ಏಕೆ?
ಜೆಇ ವರ್ಗಾವಣೆಗೆ ಷರತ್ತು ಹಾಗೂ ಸೂಚನೆಯಲ್ಲಿ ಸ್ಪಷ್ಟವಾಗಿ ಸೂಚಿಸಿರುವಂತ ಕೆಪಿಟಿಸಿಎಲ್ ವರ್ಗಾವಣೆಯ ವೇಳೆಯಲ್ಲಿ ಮಾತ್ರ ಈ ನಿಯಮವನ್ನೇ ಪಾಲಿಸುತ್ತಿಲ್ಲ. ಯಾರು 4 ವರ್ಷ ಹುದ್ದೆಯನ್ನು ಪೂರೈಸಿದ್ದಾರೆ ಎಂಬ ಕನಿಷ್ಠ ಮಾಹಿತಿಯನ್ನು ಪಡೆಯದೇ ನೌಕರರು ವರ್ಗಾವಣೆಗೆ ಕೋರಿರುವ ಸ್ಥಳ ಎಂಬುದಾಗಿ ತಿಳಿಸಿ, ಅನೇಕರನ್ನು ಮಾನದಂಡ ಮೀರಿ ವರ್ಗಾವಣೆ ಮಾಡಿದೆ.
ವರ್ಗಾವಣೆ ಕೋರಿರುವ ಸ್ಥಳ ತೋರಿಸಿರುವಲ್ಲಿ ಕೆಲವರು 2-3 ವರ್ಷ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೇ, ಮತ್ತೆ ಕೆಲವರು ಒಂದು ವರ್ಷದ ಹಿಂದೆ ವರ್ಗಾವಣೆಗೊಂಡವರು ಇದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಕೆಪಿಟಿಸಿಎಲ್ ವರ್ಗಾವಣೆ ವೇಳೆಯಲ್ಲಿ ಷರತ್ತು ವಿಧಿಸಿ, ನಿಯಮ ಮೀರಿ ವರ್ಗಾವಣೆ ಮಾಡುವುದು ಏಕೆ ಎಂಬುದು ನೊಂದ ನೌಕರರ ಆಕ್ರೋಶವಾಗಿದೆ.
ಜೆಇಗಳಿಗೆ ಈಗ ಕೋರ್ಟ್, ಕಚೇರಿ ಅಲೆಯುವ ಪರಿಸ್ಥಿತಿ
ಕೆಪಿಟಿಸಿಎಲ್ ಗೊಂದಲಕಾರಿ ವರ್ಗಾವಣೆಯಿಂದಾಗಿ ಈಗ ಅನೇಕ ಜೆಇಗಳು ಸರ್ ನಮ್ಮದು 4 ವರ್ಷ ಮುಗಿದಿಲ್ಲ. ನಾವು ವರ್ಗಾವಣೆಗೆ ಅರ್ಹರಿಲ್ಲ. ನಾವು ಇರುವಂತ ಸ್ಥಳದಲ್ಲೇ ಮುಂದುವರೆಸಿ ಎಂಬುದಾಗಿ ಎಸ್ಕಾಂ ಕಚೇರಿಗಳನ್ನು ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ವೇಳೆ ಕೆಪಿಟಿಸಿಎಲ್ ವರ್ಗಾವಣೆ ಆದೇಶದಂತೆ, ಎಸ್ಕಾಂಗಳಲು ಚಾಲನಾದೇಶ ಮಾಡಿದಲ್ಲಿ ಷರತ್ತನ್ನು ಮೀರಿ ವರ್ಗಾವಣೆ ಮಾಡಿದ್ದಕ್ಕಾಗಿ ಜೆಇಗಳು ಕೋರ್ಟ್ ಮೊರೆ ಹೋಗುವಂತ ಸಾಧ್ಯತೆ ಇದೆ. ಈ ಮೂಲಕ ಪ್ರತಿ ವರ್ಷವೂ ಕೆಪಿಟಿಸಿಎಲ್ ಸರಿಯಾದ ಮಾಹಿತಿ ಪಡೆಯದೇ ಇಂತಹ ಗೊಂದಲಕಾರಿ ವರ್ಗಾವಣೆ ಮಾಡುತ್ತಿರುವ ಹಿಂದಿನ ಉದ್ದೇಶವೇನು ಎಂಬುದಾಗಿ ನೌಕರರ ಪ್ರಶ್ನೆಯಾಗಿದೆ.
ಒಬ್ಬನೇ ನೌಕರ, ಎರಡು ಜೆಇ ಹುದ್ದೆಗಳಿಗೆ ವರ್ಗಾವಣೆ
ಕೆಪಿಟಿಸಿಎಲ್ ಹೊರಡಿಸಿರುವಂತ ಜೆಇ ವರ್ಗಾವಣೆಯ ಆದೇಶದ ಕ್ರಮ ಸಂಖ್ಯೆ 43ರಲ್ಲಿ ಕೆ.ಬಿ ರಾಜಪ್ಪ, ಮತ್ತೋಡು ಶಾಕೆ, ಕಾರ್ಯ ಮತ್ತು ಶ್ರೀರಾಂಪುರ ಉಪ ವಿಭಾಗ, ಬೆಸ್ಕಾ, ಚಿತ್ರದುರ್ಗ ಇವರನ್ನು ಎರಡು ಜೆಇ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಕಾರ್ಯ ಮತ್ತು ಪಾಲನ ವೃತ್ತ, ಬೆಸ್ಕಾಂ, ದಾವಣಗೆರೆಯ 66/11 ಕೆವಿ ಉಪ ಕೇಂದ್ರ, ಕೆಪಿಟಿಸಿಎಲ್, ಚಿತ್ರದುರ್ಗ ಈ ಜೆಇ ಹುದ್ದೆಗೆ ವರ್ಗಾವಣೆ ಕೋರಿರುವಂತ ಸ್ಥಳವೆಂದು ತೋರಿಸಲಾಗಿದೆ.
ಇದಲ್ಲದೇ ಕ್ರಮ ಸಂಖ್ಯೆ 56ರಲ್ಲಿಯೂ ಕಾರ್ಯ ಮತ್ತು ಪಾಲನಾ ವೃತ್ತ, ಬೆಸ್ಕಾ, ದಾವಣಗೆರೆ ವೃತ್ತ ವಿಭಾಗದ ಖಾಲಿ ಇರುವ ಹುದ್ದೆಗೆ ಕಾರ್ಯಾಚರಣೆ ವಿಭಾಗ, ಕೆಪಿಟಿಸಿಎಲ್, ಚಿತ್ರದುರ್ಗದ ಜೆಇ ಹುದ್ದೆಗೂ ವರ್ಗಾವಣೆ ಗೊಳಿಸಿ ಆದೇಶಿಸಿಲಾಗಿದೆ. ಈ ಮೂಲಕ ಒಬ್ಬನೇ ನೌಕರನಿಗೆ ಎರಡು ಜೆಇ ಹುದ್ದೆಯನ್ನು ಕೆಪಿಟಿಸಿಎಲ್ ಕರುಣಿಸಿದೆ. ಹಾಗಾದ್ರೇ ಯಾವ ಹುದ್ದೆಗೆ ಜೆಇ ಕೆಲಸ ಮಾಡಿಕೊಳ್ಳಲು ವರದಿ ಮಾಡಿಕೊಳ್ಳಬೇಕು.?
ಎಸ್ಕಾಂಗಳಾದರೂ ಚಾಲನಾದೇಶದ ವೇಳೆ ಗೊಂದಲ ನಿವಾರಿಸಿ ಆದೇಶ ಮಾಡುತ್ತಾ?
ಕೆಪಿಟಿಸಿಎಲ್ ಅಧಿಕಾರಿಗಳು ಮನಬಂದಂತೆ ಜೆಇಗಳನ್ನು ಷರತ್ತು ಹಾಗೂ ಸೂಚನೆಯಲ್ಲಿ ಸ್ಪಷ್ಟತೆ ನೀಡಿ, ವರ್ಗಾವಣೆ ಆದೇಶದಲ್ಲಿ ಮಾತ್ರ ಮೀರಿ ಮಾಡಿದ್ದಾರೆ. ಈ ಗೊಂದಲಕಾರಿ ವರ್ಗಾವಣೆ ಆದೇಶದ ಅನುಸಾರ ಎಸ್ಕಾಂಗಳು ಚಾಲನಾದೇಶ ಮಾಡುವ ಕೆಲಸ ಮಾಡಬಾರದು. ಷರತ್ತಿನಲ್ಲಿ ವಿಧಿಸಿರುವಂತ ನಿಯಮಗಳನುಸಾರ ಚಾಲನಾದೇಶ ಮಾಡಬೇಕು ಎಂಬುದು ನೌಕರರ ಒತ್ತಾಯವಾಗಿದೆ.
4 ವರ್ಷ ಮೀರಿದ್ದರೇ ಮಾತ್ರವೇ ಆ ಸ್ಥಳಗಳಿಗೆ ವರ್ಗಾವಣೆ ಕೋರಿರುವಂತ ಸ್ಥಳವೆಂದು ತೋರಿಸಬೇಕು. ಅದರ ಹೊರತಾಗಿ ವರ್ಗಾವಣೆ ಕೋರಿದಂತ ಸ್ಥಳವನ್ನು ತೋರಿಸದೇ, ವರ್ಗಾವಣೆ ಕೋರಿರುವಂತ ನೌಕರರನ್ನು ವರ್ಗಾವಣೆ ಮಾಡಿ ಚಾಲನಾದೇಶ ಮಾಡಬಾರದು. ಆ ಸ್ಥಳಗಳನ್ನು ಬಿಟ್ಟು, ಬೇರೆಡೆಗೆ ನೌಕರರನ್ನು ವರ್ಗಾವಣೆ ಮಾಡಬೇಕು. ಈ ಬಾರಿಯಾದರೂ ಕೋರ್ಟ್, ಕಚೇರಿ ಅಲೆಸುವಂತ ಕೆಲಸ ಮಾಡದಿರಲಿ ಎಂಬುದು ನೊಂದ ನೌಕರರ ಆಗ್ರಹ. ಈ ಬಗ್ಗೆ ಎಸ್ಕಾಂ ಹಿರಿಯ ಅಧಿಕಾರಿಗಳು ಗಮನಿಸಿ ಕ್ರಮವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ರಾಜ್ಯ ಸರ್ಕಾರದಿಂದ ‘101 RFO ವರ್ಗಾವಣೆ’ ಮಾಡಿ ಆದೇಶ | RFO Transfer
BREAKING : ಛೆ…ಇದೆಂತಾ ರಕ್ಷಾಸಿಯ ಕೃತ್ಯ : 5 ಹುಲಿಗಳ ಬೆನ್ನಲ್ಲೆ 20 ಕೋತಿಗಳ ‘ಮಾರಣಹೋಮ’!