ಕೆಎನ್ಎನ್‍ಡಿಜಿಟಲ್ ಡೆಸ್ಕ್ : ‘ಫೌಜಿ’ ಸಿನಿಮಾ ಚಿತ್ರೀಕರಣದ ವೇಳೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.
ಪ್ರಭಾಸ್ ‘ಫೌಜಿ’ ಚಿತ್ರದಲ್ಲಿ ಹಲವಾರು ದೃಶ್ಯಗಳ ಚಿತ್ರೀಕರಣದಲ್ಲಿದ್ದಾಗ ಅವರು ಗಂಭೀರ ಗಾಯಗೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಅವರ ಕಾಲು ಮುರಿತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದ್ರೆ, ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಅಂದ್ಹಾಗೆ, ಈ ಹಿಂದೆ ನಟನ ಕಾಲಿಗೆ ಗಾಯವಾಗಿತ್ತು. ನಂತ್ರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಅವ್ರು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲು ಇಟಲಿಗೆ ಹೋಗಿದ್ದರು. ಆದ್ರೆ, ಸಧ್ಯ ಪ್ರಭಾಸ್ ಅವರ ಇನ್ನೊಂದು ಕಾಲಿಗೆ ಗಾಯವಾಗಿದೆ ಎಂಬ ಸುದ್ದಿಗಳು ಓಡಾಡುತ್ತಿವೆ. ಆದಾಗ್ಯೂ, ಗಾಯವಾಗಿದ್ಯೋ.? ಅಥವಾ ಇನ್ನೊಂದು ಕಾಲಿನ ಮುರಿತವೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದರ ಸತ್ಯಾಸತ್ಯತೆ ತಿಳಿದಿಲ್ಲವಾದ್ರು ವೈರಲ್ ಆಗುತ್ತಿರುವ ಸುದ್ದಿಗಳ ಬಗ್ಗೆ ಅಭಿಮಾನಿಗಳು ಚಿಂತಿತರಾಗಿದ್ದಾರೆ. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ಪೋಸ್ಟ್’ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಆತಂಕದಲ್ಲಿದ್ದಾರೆ.
ಜೈಲುಗಳಲ್ಲಿರುವ ತಮ್ಮ ನಾಗರಿಕರ ಪಟ್ಟಿ ಪರಸ್ಪರ ವಿನಿಮಯ ಮಾಡಿಕೊಂಡ ಭಾರತ –ಪಾಕಿಸ್ತಾನ ; ‘MEA’ ಮಾಹಿತಿ
BREAKING: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ‘SIT ರದ್ದು’ ಮಾಡಿ ‘CBI’ಗೆ ವಹಿಸಿ ಹೈಕೋರ್ಟ್ ಆದೇಶ