Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘UPSC’ ಪ್ರಿಲಿಮ್ಸ್ ಫಲಿತಾಂಶ ಪ್ರಕಟ :13,343 ಮಂದಿ ಅರ್ಹರು | UPSC prelims 2026 result

​ರಾಮ ಮಂದಿರ ದೇಣಿಗೆ ವಿವಾದಕ್ಕೆ ಬಿಗ್ ಟ್ವಿಸ್ಟ್: ಕಣಕ್ಕಿಳಿದ ಎಸ್‌ಐಟಿ! ರಾಜಕೀಯ ಜಿದ್ದಾಜಿದ್ದಿ ತೀವ್ರ

BREAKING: ಅಮೆರಿಕ ವಾಯುಪಡೆಯ B-52 ಬಾಂಬರ್ ವಿಮಾನ ಪತನಗೊಂಡು 8 ಮಂದಿ ಸಜೀವ ದಹನ : ವಿಡಿಯೋ ವೈರಲ್ | WATCH VIDEO

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮಲೆಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವು ಕೇಸ್ : ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ.!
KARNATAKA

BIG NEWS : ಮಲೆಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವು ಕೇಸ್ : ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ.!

By kannadanewsnow57

ಬೆಂಗಳೂರು: ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದಲ್ಲಿ ಐದು ಹುಲಿಗಳ ಅಸಹಜ ಸಾವಿನ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದೆ.

ಹೌದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ರಕರಣದ ತನಿಖೆ ನಡೆಸಲು ಇಬ್ಬರು ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ.ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ವೃತ್ತ ನಿರೀಕ್ಷಕಿ ವಿ. ಹರಿಣಿ ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಕೇಂದ್ರದ ದಕ್ಷಿಣ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಉಪನಿರ್ದೇಶಕಿ ವಿ. ಥೆನ್ಮೋಜಿ ಅವರನ್ನು ನೇಮಕ ಮಾಡಲಾಗಿದೆ. ಈ ತಂಡವು ಹುಲಿ ಸಾವಿನ ಕುರಿತಾಗಿ ತನಿಖೆ ನಡೆಸಲಿದೆ. 14 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಇದರೊಂದಿಗೆ ಹುಲಿಗಳ ಸಾವಿನ ಕುರಿತು ಮೂರು ಸಮಿತಿಗಳು ರಚನೆಯಾಗಿವೆ.

ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯದ ಮೀಣ್ಯಂ ಬೀಟ್ನ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ನಾಲ್ಕು ಮರಿಗಳು ಸಾವನ್ನಪ್ಪಿದ್ದು, ಬುಧವಾರ ಬೆಳಕಿಗೆ ಬಂದಿದೆ.ಹುಲಿ ಮತ್ತು ಮರಿಗಳ ಈ ಅಸಹಜ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಿಸಿಸಿಎಫ್ ನೇತೃತ್ವದ ತಂಡದ ತನಿಖೆಗೆ ಆದೇಶ ನೀಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆ ಅಧಿಕಾರಿಗಳು ಐವರನ್ನು ಅರೆಸ್ಟ್ ಮಾಡಿದ್ದಾರೆ.

ಹಸುವಿಗೆ ಇಬ್ಬರು ವಿಷಪ್ರಾಶನ ಮಾಡಿರುವ ಬಗ್ಗೆ ಇದೀಗ ಶಂಕೆ ವ್ಯಕ್ತವಾಗುತ್ತಿದೆ. ಹಸುವಿಗೆ ಇಟ್ಟ ವಿಷಯದಿಂದ ಹುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಐವರನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಹುಲಿ ಸಾವು ಸಂಬಂಧ ಐವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ಹಿನ್ನೆಲೆ?

ಕಳೆದ ಬುಧವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ಈ ಹುಲಿಗಳ ಅಸಹಜ ಸಾವನ್ನಪ್ಪಿರುವುದು ಗೊತ್ತಾಗಿದೆ. ಮೇಲ್ನೋಟಕ್ಕೆ ತಾಯಿ ಹುಲಿ ಮತ್ತು ಮರಿಗಳು ವಿಷಪ್ರಾಶನದಿಂದ ಅಸುನೀಗಿರುವ ಶಂಕೆ ವ್ಯಕ್ತವಾಗಿದೆ. ಹುಲಿಗಳು ಮೃತಪಟ್ಟ ಅಣತಿ ದೂರದಲ್ಲಿ ಹಸುವೊಂದರ ಕಳೇಬರ ಸಹ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಾಥಮಿಕ ವರದಿಗಳ ಪ್ರಕಾರ, ವಿಷಪ್ರಾಶನವೇ ಹುಲಿಗಳ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಸತ್ಯಾಂಶ ಕಂಡುಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಖಂಡ್ರೆ ತಿಳಿಸಿದ್ದಾರೆ.

BIG NEWS: The case of the unnatural death of 5 tigers in Malemahadeshwar Hills: The central government has ordered an investigation.!
Share. Facebook Twitter LinkedIn WhatsApp Email

Related Posts

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

2 Mins Read

ALERT : `ATM’ ಗ್ರಾಹಕರೇ ಎಚ್ಚರ: ಬ್ಯಾಂಕ್ ಖಾತೆ ಖಾಲಿ ಮಾಡಬಲ್ಲ 5 ವಂಚನೆಗಳ ಬಗ್ಗೆ ನೀವು ತಿಳಿಯಲೇಬೇಕು.!

3 Mins Read

ರಾಜ್ಯದ ರೈತರೇ ಗಮನಿಸಿ: ಸಬ್ಸಿಡಿ ರಸಗೊಬ್ಬರಕ್ಕೆ ಹೆಚ್ಚು ಹಣ ಕೇಳಿದರೆ ತಕ್ಷಣ ದೂರು ನೀಡಿ

2 Mins Read
Recent News

BREAKING : ‘UPSC’ ಪ್ರಿಲಿಮ್ಸ್ ಫಲಿತಾಂಶ ಪ್ರಕಟ :13,343 ಮಂದಿ ಅರ್ಹರು | UPSC prelims 2026 result

​ರಾಮ ಮಂದಿರ ದೇಣಿಗೆ ವಿವಾದಕ್ಕೆ ಬಿಗ್ ಟ್ವಿಸ್ಟ್: ಕಣಕ್ಕಿಳಿದ ಎಸ್‌ಐಟಿ! ರಾಜಕೀಯ ಜಿದ್ದಾಜಿದ್ದಿ ತೀವ್ರ

BREAKING: ಅಮೆರಿಕ ವಾಯುಪಡೆಯ B-52 ಬಾಂಬರ್ ವಿಮಾನ ಪತನಗೊಂಡು 8 ಮಂದಿ ಸಜೀವ ದಹನ : ವಿಡಿಯೋ ವೈರಲ್ | WATCH VIDEO

ALERT : `ITR’ ಫೈಲ್ ಮಾಡುವಾಗ ಈ 7 ತಪ್ಪು ಮಾಡಬೇಡಿ; ಇಲ್ಲದಿದ್ದರೆ `ಐಟಿ ಇಲಾಖೆ’ಯಿಂದ ನೋಟಿಸ್ ಬರಬಹುದು!

State News
KARNATAKA

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

By kannadanewsnow57 KARNATAKA 2 Mins Read

ಬೆಂಗಳೂರು : ನೀವು ಭಾರತ ಗ್ಯಾಸ್ (Bharat Gas) ಗ್ರಾಹಕರಾಗಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಅತ್ಯಂತ ಪ್ರಮುಖ ಹಾಗೂ ಗಡುವಿನ ಮಾಹಿತಿಯಿದೆ.…

ALERT : `ATM’ ಗ್ರಾಹಕರೇ ಎಚ್ಚರ: ಬ್ಯಾಂಕ್ ಖಾತೆ ಖಾಲಿ ಮಾಡಬಲ್ಲ 5 ವಂಚನೆಗಳ ಬಗ್ಗೆ ನೀವು ತಿಳಿಯಲೇಬೇಕು.!

ರಾಜ್ಯದ ರೈತರೇ ಗಮನಿಸಿ: ಸಬ್ಸಿಡಿ ರಸಗೊಬ್ಬರಕ್ಕೆ ಹೆಚ್ಚು ಹಣ ಕೇಳಿದರೆ ತಕ್ಷಣ ದೂರು ನೀಡಿ

ರಾಜ್ಯದ ರೈತರಿಗೆ ಬಿಗ್ ಶಾಕ್ : ರಾಜ್ಯಾದ್ಯಂತ `ಮುಂಗಾರು ಮಳೆ’ ಶೇ.21 ರಷ್ಟು ಕೊರತೆ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.