Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇ-ಪೌತಿ ಖಾತಾ ಆಂದೋಲನದ ಪ್ರಯೋಜನ ಪಡೆಯಿರಿ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ

18/08/2025 7:35 PM

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಛಾಯ್ಸ್ ಆಯ್ಕೆಗೆ ಸಮಯ ವಿಸ್ತರಿಸಿದ ಕೆಇಎ

18/08/2025 7:31 PM

‘MLC ದಿನೇಶ್ ಗೂಳಿಗೌಡ’ಗೆ ‘ರಾಜ್ಯ ಸಚಿವರ ಸ್ಥಾನಮಾನ’ ನೀಡಿ ಸರ್ಕಾರ ಆದೇಶ

18/08/2025 7:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ, ನಿರ್ವಹಣೆಗೆ ‘ಇ-ಉಪಕರಣ ತಂತ್ರಾಂಶ’ ಅನುಷ್ಠಾನ
KARNATAKA

ರಾಜ್ಯ ಸರ್ಕಾರದಿಂದ ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ, ನಿರ್ವಹಣೆಗೆ ‘ಇ-ಉಪಕರಣ ತಂತ್ರಾಂಶ’ ಅನುಷ್ಠಾನ

By kannadanewsnow0924/06/2025 4:38 PM

ಬೆಂಗಳೂರು: ರಾಜ್ಯ ಸರ್ಕಾದಿಂದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆಗಾಗಿ ಇ-ಉಪಕರಣ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಆದೇಶಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ, ಬೆಂಗಳೂರು ಇವರು ಪ್ರಸ್ತಾಪಿಸಿರುವಂತೆ 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-150ರಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಔಷಧಿಗಳನ್ನು ವಿತರಿಸಲು KSMSCL ಸಂಸ್ಥೆಯನ್ನು ಬಲಪಡಿಸಲಾಗುವುದು. ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ “ಇ-ಉಪಕರಣ ತಂತ್ರಾಂಶ” ವನ್ನು ಪರಿಚಯಿಸಲಾಗುವುದೆಂದು ಘೋಷಿಸಲಾಗಿದೆ.

ಇ-ಉಪಕರಣ ತಂತ್ರಾಂಶ ಆರೋಗ್ಯ ಸಂಸ್ಥೆಗಳಲ್ಲಿ ಅವಶ್ಯಕ ಉಪಕರಣಗಳ ಪರಿಣಾಮಕಾರಿ ನಿರ್ವಹಣೆ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ವ್ಯವಸ್ಥಿತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಭಿವೃದ್ಧಿಪಡಿಸಲಾದ ಸಮಗ್ರ ಡಿಜಿಟಲ್ ಪರಿಹಾರವಾಗಿದ್ದು, ಇದನ್ನು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಈ ತಂತ್ರಾಂಶದ ಉಪಕರಣಗಳ ದಾಸ್ತಾನು ನಿರ್ವಹಣೆ, ದೂರುಗಳ ನಿರ್ವಹಣೆ, ಉಪಕರಣಗಳ ಕಾರ್ಯಕ್ಷಮತೆಯನ್ನು ಪತ್ತೆಹಚ್ಚುವುದು, ಸೇವಾ ಇತಿಹಾಸಗಳನ್ನು ನಿರ್ವಹಿಸುವುದು ಮತ್ತು ಡೌನ್‌ಟೈಮ್ ಅನ್ನು ಕಡಿಮೆ ಮಾಡಲು ಪರಿಕರಗಳನ್ನು ಒದಗಿಸುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಉಪಕರಣಗಳ ನಿರ್ವಹಣೆ, ಉಪಕರಣಗಳ ಸ್ಥಿತಿ, ವಾರಂಟಿ (Warranty), ಉಪಕರಣಗಳ ಸ್ಥಳ, ಇತ್ಯಾದಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಂಗ್ರಹಣೆಯನ್ನು ಹೊಂದಿಲ್ಲ. ಆದ್ದರಿಂದ ಕೇಂದ್ರೀಕೃತ ದತ್ತಾಂಶ ನಿರ್ವಹಣೆ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ಎಚ್ಚರಿಕೆಗಳು, ಹೊಣೆಗಾರಿಕೆ ಮತ್ತು ಪಾರದರ್ಶಕತೆ, ಸುಧಾರಿತ ನಿಖರತೆ ಇತ್ಯಾದಿಗಳನ್ನು ಹೊಂದಿರುವ C-DAC ನಿಂದ ಸಾಫ್ಟ್‌ವೇರ್ ಖರೀದಿಸಲು ನಿರ್ಧರಿಸಲಾಯಿತು.

ಆರ್ಥಿಕ ಇಲಾಖೆಯ ಅಧಿಸೂಚನೆ ಸಂಖ್ಯೆ: 681 2-12/2023, ದಿನಾಂಕ:30.09.2023ರಲ್ಲಿ KSMSCL ಸಂಸ್ಥೆಯಲ್ಲಿನ ಔಷಧಗಳು ಉಪಭೋಗ್ಯ ವಸ್ತುಗಳು ಮತ್ತು ಸಲಕರಣೆಗಳ ಸ್ಥಿತಿ, ವಾರಂಟಿ ವಿವರಗಳು, AMC ಮತ್ತುCMC ಇತ್ಯಾದಿಗಳ ಬಗ್ಗೆ ನಿಗಾವಹಿಸಲು ಕೇಂದ್ರ ಸರ್ಕಾರದ ಸ್ನಾಯುತ್ತ ಸಂಸ್ಥೆಯಾದ C-DMC ಸಂಸ್ಥೆಯಿಂದ ರೂ.139.06 ಲಕ್ಷಗಳ ವೆಚ್ಚದಲ್ಲಿ ಇ-ಉಪಕರಣ ತಂತ್ರಾಂಶ ವನ್ನು ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ)ರಡಿ ವಿನಾಯಿತಿ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆ ಕುರಿತು ಇ-ಉಪಕರಣ ತಂತ್ರಾಂಶ’ ಅಭಿವೃದ್ಧಿಗಾಗಿ ಭಾರತ ಸರ್ಕಾರದ C-DAC ಗೆ ವಹಿಸಲಾಗಿದೆ.

2025-26 ನೇ ಸಾಲಿನ ಆಯವ್ಯಯ ಕಂಡಿಕೆ 150 ರಲ್ಲಿ, ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಔಷಧಿಗಳನ್ನು ವಿತರಿಸಲು ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆಯನ್ನು ಬಲಪಡಿಸಲಾಗುವುದು. ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ತಂತ್ರಾಂಶವನ್ನು ಪರಿಚಯಿಸಲಾಗುವುದು ಎಂದು ಘೋಷಿಸಲಾಗಿದೆ. ಆದ್ದರಿಂದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಇ-ಉಪಕರಣ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ ಅನುಮೋದನೆ ನೀಡುವಂತೆ ಕೋರಲಾಗಿದೆ.

ಮೇಲೆ ಓದಲಾದ (2) ರ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿಯಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-150ನ್ನು ಹೇಳಿಕೆ ಆಡಳಿತಾತ್ಮಕ ಕ್ರಮ ಎಂದು ತಿಳಿಸಲಾಗಿದೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ರಾಜ್ಯದ ಆರೋಗ್ಯ ಸಂಸ್ಥೆಗಳು ಈ ಕೆಳಕಂಡ ಕಾರ್ಯಗಳಿಗಾಗಿ ಇ-ಉಪಕರಣ ತಂತ್ರಾಂಶವನ್ನು ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ.

  • ಎಲ್ಲಾ ಆರೋಗ್ಯ ಸಂಸ್ಥೆಗಳು ಪ್ರಸ್ತುತ ಅಸ್ತಿತ್ವದಲ್ಲಿರುವ ವೈದ್ಯಕೀಯ ಉಪಕರಣಗಳ ವಿವರಗಳಾದ ಉಪಕರಣಗಳ ಹೆಸರು, ಮಾದರಿ, ತಯಾರಕರ ವಿವರ, ಕ್ರಮ ಸಂಖ್ಯೆ, ಪೂರೈಕೆದಾರರ ವಿವರಗಳು, ವಾರಂಟಿ (Warranty) ವಿವರಗಳು, ಉಪಕರಣಗಳ ಚಿತ್ರ ಉಪಕರಣಗಳನ್ನು ಬುನದಿಗೊಳಿಸಿದ ಸ್ಥಳದ ಅಕ್ಷಾಂಶ-ರೇಖಾಂಶ ಮತ್ತು ಇತರೆ ವಿವರಗಳನ್ನು ಇ-ಉಪಕರಣ ತಂತ್ರಾಂಶದಲ್ಲಿ ನಮೂದಿಸತಕ್ಕದ್ದು.
  • HFR ID (ಆರೋಗ್ಯ ಸೌಲಭ್ಯ ನೋಂದಣಿ ID) ಆಧಾರದ ಮೇಲೆ ಆರೋಗ್ಯ ಇಲಾಖೆಯಿಂದ ನೀಡಲಾದ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ದಾಸ್ತಾನು ವಿವರಗಳನ್ನು ನವೀಕರಿಸತಕ್ಕದ್ದು.
  • ಆರೋಗ್ಯ ಸಂಸ್ಥೆಗಳು ವೈದ್ಯಕೀಯ ಉಪಕರಣಗಳ ಬೇಡಿಕೆಗಳನ್ನು ಇ-ಉವಕರಣ ತಂತ್ರಾಂಶದ ಮೂಲಕವೇ ಸಲ್ಲಿಸತಕ್ಕದ್ದು.
    ಯಾವುದೇ ದೋಷಪೂರಿತ ಅಥವಾ ಸ್ಥಗಿತಗೊಂಡ ಉಪಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ಇ-ಉಪಕರಣ ತಂತ್ರಾಂಶದಲ್ಲಿ ಸಲ್ಲಿಸತಕ್ಕದ್ದು.
  • ಇಲಾಖೆಯಿಂದ/ಸ್ಥಳೀಯವಾಗಿ ಖರೀದಿಸಿದ ಮಾಡಲಾಗುವ ವೈದ್ಯಕೀಯ ಉಪಕರಣಗಳನ್ನು ಸಂಸ್ಥೆಗಳು ಇ-ಉಪಕರಣ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ಸ್ವೀಕರಿಸತಕ್ಕದ್ದು.
  • ಆರೋಗ್ಯ ಸಂಸ್ಥೆಗಳು ಅನುಷ್ಠಾನ ವರದಿಯನ್ನು ಇ-ಉಪಕರಣ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡತಕ್ಕದ್ದು.
  • ಆರೋಗ್ಯ ಸಂಸ್ಥೆಗಳು ದಾಸ್ತಾನು ಧೃಡೀಕರಣ ಪ್ರಮಾಣ ಪತ್ರವನ್ನು ಇ-ಉಪಕರಣ ತಂತ್ರಾಂಶದ ಮೂಲಕವೇ ಸೃಜಿಸತಕ್ಕದ್ದು.
  • ಅನುಷ್ಠಾನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೊಂದಿಗೆ KSMSCLನ PMU ಪರಿಹರಿಸಲು ಸಮನ್ವಯಗೊಳಿಸಲು ಸಹಾಯಕ/ ಉಪ ನಿರ್ದೇಶಕರು, ಇ- ಆರೋಗ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರನ್ನು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯಾಗಿ ಮತ್ತು ಪ್ರತಿ ಜಿಲ್ಲೆಯ ಜಿಲ್ಲಾ ವೆಕ್ಟರ್ ಆಶ್ರಿತ ರೋಗ ನಿಯಂತ್ರಣ Daffa (District Vector Borne Disease Control Programme Officer) ಯನ್ನು ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಮತ್ತು ಆಯಾ ಜಿಲ್ಲೆಯ ಬಯೋ ಮೆಡಿಕಲ್ ಎಂಜಿನಿಯರ್ ಅಥವಾ DHO ಕಚೇರಿಯ ಫಾರ್ಮಾಸಿಸ್ಟ್ ನ್ನು ಜಿಲ್ಲಾ ಮಟ್ಟದ ತಾಂತ್ರಿಕ ವ್ಯಕ್ತಿಯಾಗಿ (Technical Person) ನೇಮಿಸಿದೆ.
  • ಸಂಬಂಧಪಟ್ಟ ಆಸ್ಪತ್ರೆಗಳ ಆಡಳಿತ ಮುಖ್ಯಸ್ಥರು (District Surgeon in district hospital/AMO in taluk hospital/Sr.MO or MO in CHC/PHC) -K ತಂತ್ರಾಂಶವನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಜವಾಬ್ದಾರಾಗಿರುತ್ತಾರೆ.
  • ಇ-ಉಪಕರಣ ತಂತ್ರಾಂಶದ ಮೇಲ್ವಿಚಾರಣೆ ಮತ್ತು ತಾಂತ್ರಿಕ ಸಹಾಯ ನೀಡಲು KSMSCL ನಲ್ಲಿ ಗುತ್ತಿಗೆ ಆಧಾರದ ಮೇಲೆ Software Developer ಮತ್ತು ರಾಜ್ಯ ಮಟ್ಟದ ಸಂಯೋಜಕರನ್ನು ಒಳಗೊಂಡ PMU ತಂಡವನ್ನು ರಚಿಸುವುದು.
  • KSMSCL ಸಂಸ್ಥೆಯು ಇ-ಉಪಕರಣ ತಂತ್ರಾಂಶದ ಒಟ್ಟಾರೆ ಉಸ್ತುವಾರಿಯನ್ನು ಹೊಂದಿರತಕ್ಕದ್ದು ಮತ್ತು ತಂತ್ರಾಂಶದ ನಿರ್ವಹಣೆ, ಸಾಫ್ಟ್‌ವೇರ್‌ನಲ್ಲಿನ ಯಾವುದೇ ಬದಲಾವಣೆಗಳನ್ನು ಕಾಲಕಾಲಕ್ಕೆ ಖಾತ್ರಿಪಡಿಸಿಕೊಳ್ಳತಕ್ಕದ್ದು.

ದೊಡ್ಡರಂಗೇಗೌಡ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ: ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸುವುದಾಗಿ ಘೋಷಣೆ

ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

Share. Facebook Twitter LinkedIn WhatsApp Email

Related Posts

ಇ-ಪೌತಿ ಖಾತಾ ಆಂದೋಲನದ ಪ್ರಯೋಜನ ಪಡೆಯಿರಿ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ

18/08/2025 7:35 PM1 Min Read

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಛಾಯ್ಸ್ ಆಯ್ಕೆಗೆ ಸಮಯ ವಿಸ್ತರಿಸಿದ ಕೆಇಎ

18/08/2025 7:31 PM1 Min Read

‘MLC ದಿನೇಶ್ ಗೂಳಿಗೌಡ’ಗೆ ‘ರಾಜ್ಯ ಸಚಿವರ ಸ್ಥಾನಮಾನ’ ನೀಡಿ ಸರ್ಕಾರ ಆದೇಶ

18/08/2025 7:03 PM1 Min Read
Recent News

ಇ-ಪೌತಿ ಖಾತಾ ಆಂದೋಲನದ ಪ್ರಯೋಜನ ಪಡೆಯಿರಿ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ

18/08/2025 7:35 PM

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಛಾಯ್ಸ್ ಆಯ್ಕೆಗೆ ಸಮಯ ವಿಸ್ತರಿಸಿದ ಕೆಇಎ

18/08/2025 7:31 PM

‘MLC ದಿನೇಶ್ ಗೂಳಿಗೌಡ’ಗೆ ‘ರಾಜ್ಯ ಸಚಿವರ ಸ್ಥಾನಮಾನ’ ನೀಡಿ ಸರ್ಕಾರ ಆದೇಶ

18/08/2025 7:03 PM

BREAKING : ಏರ್ಟೆಲ್ ಬಳಿಕ ‘ಜಿಯೋ, ವೊಡಾಫೋನ್ ಐಡಿಯಾ’ ನೆಟ್ವರ್ಕ್ ಡೌನ್ | Jio, vodafone idea network down

18/08/2025 6:49 PM
State News
KARNATAKA

ಇ-ಪೌತಿ ಖಾತಾ ಆಂದೋಲನದ ಪ್ರಯೋಜನ ಪಡೆಯಿರಿ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ

By kannadanewsnow0918/08/2025 7:35 PM KARNATAKA 1 Min Read

ಮಂಡ್ಯ : ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇ- ಪೌತಿ ಖಾತಾ ಆಂದೋಲನ ಆರಂಭಿಸಲಾಗಿದ್ದು,…

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಛಾಯ್ಸ್ ಆಯ್ಕೆಗೆ ಸಮಯ ವಿಸ್ತರಿಸಿದ ಕೆಇಎ

18/08/2025 7:31 PM

‘MLC ದಿನೇಶ್ ಗೂಳಿಗೌಡ’ಗೆ ‘ರಾಜ್ಯ ಸಚಿವರ ಸ್ಥಾನಮಾನ’ ನೀಡಿ ಸರ್ಕಾರ ಆದೇಶ

18/08/2025 7:03 PM

ಸಿನಿ ಪ್ರಿಯರ ಗಮನಕ್ಕೆ: PVR ಐನಾಕ್ಸ್ ಬೆಂಗಳೂರು, ಮುಂಬೈನಲ್ಲಿ 18 ಹೊಸ ತಲೆಮಾರಿನ ಪರದೆ ಪ್ರಾರಂಭ

18/08/2025 6:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.