ವಾಷಿಂಗ್ಟನ್ : ಕದನ ವಿರಾಮ ಈಗ ಜಾರಿಯಲ್ಲಿದೆ. ದಯವಿಟ್ಟು ಅದನ್ನು ಉಲ್ಲಂಘಿಸಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್ ವಿರುದ್ಧ ಇರಾನ್ ಕದನ ವಿರಾಮ ಘೋಷಿಸಿದ್ದು, ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಬೆನ್ನಲ್ಲೇ ಇರಾನ್ ಸಹ ಯುದ್ಧ ವಿರಾಮ ಘೋಷಿಸಿದೆ.
#IsraelIranConflict | "The ceasefire is now in effect. Please do not violate it…," posts US President Donald Trump pic.twitter.com/1cMaJ4C7qv
— ANI (@ANI) June 24, 2025
ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. 12 ದಿನಗಳ ಯುದ್ಧ ಮುಗಿದಿದ್ದು, ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿದ್ದಾರೆ.