ಇರಾನ್ : ಅಮೆರಿಕದ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ ನಡೆಸಲು ಇರಾನ್ ಬಿಗ್ ಪ್ಲ್ಯಾನ್ ನಡೆಸಿದೆ ಎಂದು ವರದಿಯಾಗಿದೆ.
ಇರಾನ್ ನ ಅನುಸ್ಥಾವರಗಳ ಮೇಲಿನ ದಾಳಿಗೆ ಇರಾನ್ ತಕ್ಕ ಪ್ರತ್ಯುತ್ತರ ನೀಡಲಿದೆ. ನಾವು ಅಮೆರಿಕದ ಮೇಲೆ ದಾಳಿ ನಡೆಸುವುದು ಖಚಿತ ಎಂದು ಇರಾನ್ ಎಚ್ಚರಿಕೆ ಸಂದೇಶ ರವಾನಿಸಿದೆ. ಅಮೆರಿಕ ಪರಮಾಣು ನೆಲೆಗಳಾದ ಪೋರ್ಡೋ, ನಟಾಂಜ್, ಎಸ್ಟಹಾನ್ ಮೇಲೆ ದಾಳಿ ನಡೆಸಿದೆ
ಇನ್ನು ಇಸ್ರೇಲ್-ಇರಾನ್ ಸಂಘರ್ಷ ಮುಂದುವರೆದಿದ್ದು, ಅಮೆರಿಕ ದಾಳಿಯ ಬೆನ್ನಲ್ಲೇ ಇದೀಗ ಇಸ್ರೇಲ್ ಇರಾನ್ ನ 6 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇಂದು ಇರಾನ್ ಮೇಲೆ ಕ್ಷಿಪಣಿ ಹಾಗೂ ಬಾಂಬ್ ದಾಳಿ ನಡೆಸಿರುವ ಇಸ್ರೇಲ್, ಪ್ರಮುಖವಾಗಿ 6 ವಾಯುನೆಲೆಗಳನ್ನು ಗುರಿಯಿಟ್ಟು ದಾಳಿ ನಡೆಸಿದೆ.ಇಸ್ರೇಲ್ ನಿಂದ ಇರಾನ್ ನ 6 ಸೇನಾ ವಿಮಾನ ನಿಲ್ದಾಣಗಳ ಮೇಲೆ ದಾಳಿ, 15 ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಧ್ವಂಸ ಮಾಡಿದೆ.