ಇರಾನ್ : ಇಸ್ರೇಲ್-ಇರಾನ್ ಸಂಘರ್ಷ ಮುಂದುವರೆದಿದ್ದು, ಅಮೆರಿಕ ದಾಳಿಯ ಬೆನ್ನಲ್ಲೇ ಇದೀಗ ಇಸ್ರೇಲ್ ಇರಾನ್ ನ 6 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಇಂದು ಇರಾನ್ ಮೇಲೆ ಕ್ಷಿಪಣಿ ಹಾಗೂ ಬಾಂಬ್ ದಾಳಿ ನಡೆಸಿರುವ ಇಸ್ರೇಲ್, ಪ್ರಮುಖವಾಗಿ 6 ವಾಯುನೆಲೆಗಳನ್ನು ಗುರಿಯಿಟ್ಟು ದಾಳಿ ನಡೆಸಿದೆ.ಇಸ್ರೇಲ್ ನಿಂದ ಇರಾನ್ ನ 6 ಸೇನಾ ವಿಮಾನ ನಿಲ್ದಾಣಗಳ ಮೇಲೆ ದಾಳಿ, 15 ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಧ್ವಂಸ ಮಾಡಿದೆ.
ಅಮೆರಿಕ ಪರಮಾಣು ನೆಲೆಗಳಾದ ಪೋರ್ಡೋ, ನಟಾಂಜ್, ಎಸ್ಟಹಾನ್ ಮೇಲೆ ದಾಳಿ ನಡೆಸಿದೆ. ಇರಾನ್ ನ ಪರಮಾಣು ಸೌಲಭ್ಯಗಳ ಮೇಲೆ ಶನಿವಾರ ನಡೆದ ದಾಳಿಗಳಲ್ಲಿ ಬಿ-2 ಸ್ಟೆಲ್ತ್ ಬಾಂಬರ್ಗಳನ್ನು ಬಳಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ.