ಟೆಲ್ ಅವೀವ್ : ಅಮೆರಿಕವು ಇರಾನ್ ನ ಮೂರು ಪರಮಾಣು ನೆಲೆಗಳ ಮೇಲೆ ದಾಳಿ ಬೆನ್ನಲ್ಲೇ ಇದೀಗ ಇಸ್ರೇಲ್ ಮೇಲೆ ಇರಾನ್ ವಾಯುಸೇನೆಯು ಪ್ರತಿದಾಳಿ ನಡೆಸಿದೆ.
ಇರಾನ್ ವಾಯು ಸೇನೆಯಿಂದ ಟೆಲ್ ಅವೀವ್, ಹೈಫಾ ನಗರದ ಮೇಲೆ ಏರ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ. ಇರಾನ್ ನಡುವಿನ ಯುದ್ಧಕ್ಕೆ ಇದೀಗ ಅಮೇರಿಕ ಅಧಿಕೃತ ಪ್ರವೇಶ ಪಡೆದಿದ್ದು, ಅಮೆರಿಕ ಪರಮಾಣು ನೆಲೆಗಳಾದ ಪೋರ್ಡೋ, ನಟಾಂಜ್, ಎಸ್ಟಹಾನ್ ಮೇಲೆ ದಾಳಿ ನಡೆಸಿದೆ.
ಇರಾನ್ ನ ಪರಮಾಣು ಸೌಲಭ್ಯಗಳ ಮೇಲೆ ಶನಿವಾರ ನಡೆದ ದಾಳಿಗಳಲ್ಲಿ ಬಿ-2 ಸ್ಟೆಲ್ತ್ ಬಾಂಬರ್ಗಳನ್ನು ಬಳಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.