Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾಕ್ ನಲ್ಲಿ 16,500 ಮಂದಿ ಸಾವು: ಪ್ರತಿಭಟನಾಕಾರರಿಗೆ ಗುಂಡೇಟು, ಹಲವರಿಗೆ ಗಾಯ- ವರದಿ

18/01/2026 5:10 PM

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ನಾಳೆ ಬೆಂಗಳೂರಿಗೆ ತಲುಪಲಿದೆ ಹಳದಿ ಮಾರ್ಗದ 8ನೇ ರೈಲು | Namma Metro

18/01/2026 4:35 PM

ವಾರ್ತಾ ಇಲಾಖೆ ಸಂಬಂಧಿತ ಶ್ರೀನಿವಾಸಮೂರ್ತಿ ಸಮಿತಿಯ ವರದಿ ಜಾರಿಗೆ ಸಿಎಂ ಉತ್ಸುಕ: ಶೀಘ್ರವೇ ಆಯುಕ್ತರ ಜತೆ ಚರ್ಚೆ

18/01/2026 4:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಪದವಿ ಕಾಲೇಜುಗಳ 310 ಪ್ರಾಂಶಪಾಲರ ನೇರ ನೇಮಕಾತಿ : ಅರ್ಹರ ಪಟ್ಟಿ ಪ್ರಕಟ
KARNATAKA

BIG NEWS : ರಾಜ್ಯದ ಪದವಿ ಕಾಲೇಜುಗಳ 310 ಪ್ರಾಂಶಪಾಲರ ನೇರ ನೇಮಕಾತಿ : ಅರ್ಹರ ಪಟ್ಟಿ ಪ್ರಕಟ

By kannadanewsnow5719/06/2025 7:13 AM

ಬೆಂಗಳೂರು : ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಕಾಲೇಜುಗಳಲ್ಲಿ 310 ಪ್ರಾಂಶುಪಾಲರು (ಯು.ಜಿ.) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಶಿಕ್ಷಣ ಇಲಾಖಾ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು 2020 ಮತ್ತು ತಿದ್ದುಪಡಿ ನಿಯಮಗಳು 2022 ನ್ನು ಉಲ್ಲೇಖ-(1)ರ ಸರ್ಕಾರದ ಅಧಿಸೂಚನೆಗಳಲ್ಲಿ ಪ್ರಕಟಿಸಲಾಗಿದ್ದು, ಸದರಿ ವಿಶೇಷ ನಿಯಮಗಳನ್ವಯ 310 ಪ್ರಾಂಶುಪಾಲರು (ಯು.ಜಿ.) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದೆ.

ಯು.ಜಿ.ಸಿ. ನಿಯಾಮವಳಿಗಳನ್ನು ಅಳವಡಿಸಿಕೊಂಡು ಅಧಿಸೂಚಿಸಿರುವ ಪ್ರಾಂಶುಪಾಲರ ನೇಮಕಾತಿಯ ವಿಶೇಷ ನಿಯಮಗಳು, 2020 ರ ನಿಯಮ 3(1) ರಲ್ಲಿ ಪ್ರಾಂಶುಪಾಲರ ಹುದ್ದೆಯ ನೇಮಕಾತಿಗೆ ಶೈಕ್ಷಣಿಕ ಅರ್ಹತೆಯನ್ನು ಈ ಕೆಳಕಂಡಂತೆ ನಿಗಧಿಪಡಿಸಲಾಗಿರುತ್ತದೆ.

(ಎ) ಕಾನೂನು ರೀತ್ಯಾ ಸ್ಥಾಪಿಸಿರುವ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ವಿದ್ಯಾರ್ಹತೆಯನ್ನು ಪಡೆದಿರಬೇಕು ಮತ್ತು;

(ಬಿ) ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಸಂಯೋಜನೆಗೊಂಡಿರುವ ಯಾವುದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಥವಾ ಖಾಸಗಿ ಪದವಿ ಕಾಲೇಜಿನಲ್ಲಿ ಬೋಧನೆ ಅಥವಾ ಸಂಶೋಧನೆ ಅಥವಾ ಆಡಳಿತದಲ್ಲಿ ಪೂರ್ಣಕಾಲಿಕ ಬೋಧಕ ಸಿಬ್ಬಂದಿಯಾಗಿ ಒಟ್ಟು ಹದಿನೈದು ವರ್ಷಗಳ ಸೇವಾನುಭವ ಹೊಂದಿರುವ ಪ್ರಾಧ್ಯಾಪಕ/ಸಹ ಪ್ರಾಧ್ಯಾಪಕರಾಗಿರಬೇಕು;

(ಸಿ) ಪ್ರೌಢ ಸಂಶೋಧನಾ ಪತ್ರಿಕೆಗಳು (ಪೀರ್ ರಿವ್ಯೂಡ್) ಅಥವಾ ಯು.ಜಿ.ಸಿ. ಪಟ್ಟಿ ಮಾಡಿರುವ ಪತ್ರಿಕೆಗಳಲ್ಲಿ ಕನಿಷ್ಠ 10 ಸಂಶೋಧನಾ ಲೇಖನಗಳನ್ನು ಪ್ರಕಟಿಸಿರಬೇಕು;

(ಡಿ) ಈ ನಿಯಮಗಳ ಅನುಬಂಧ-1 ರಲ್ಲಿ ನಿಗದಿಪಡಿಸಿರುವಂತೆ, ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಬೋಧಕರ ಮತ್ತು ಇತರ ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿಗಾಗಿ ಕನಿಷ್ಠ ವಿದ್ಯಾರ್ಹತೆಗಳ ಮೇರೆಗೆ ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟಗಳ ನಿರ್ವಹಣೆಗೆ ಸಂಬಂಧಿಸಿದ ಕ್ರಮಗಳ ಕುರಿತ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ವಿನಿಮಯಗಳು, 2018 ರ ಅನುಬಂಧ-11 ರ ಕೋಷ್ಠಕ-2 ರಲ್ಲಿನ ಅನುಸಾರವಾಗಿ ಕನಿಷ್ಠ 110 ಸಂಶೋಧನಾ ಅಂಕಗಳನ್ನು ಹೊಂದಿರಬೇಕು.

ಉಲ್ಲೇಖ(2) ರ ಸರ್ಕಾರದ ಅಧಿಸೂಚನೆಯನ್ವಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆ.ಇ.ಎ) ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಸ್ಥಳೀಯ ವೃಂದದ (ಹೆಚ್.ಕೆ) 141 ಹಾಗೂ ಉಳಿಕೆ ಮೂಲ ವೃಂದದ (ನಾನ್ ಹೆಚ್.ಕೆ) 813 ಅಭ್ಯರ್ಥಿಗಳ ಅಂತಿಮ ಮೆರಿಟ್ ಪಟ್ಟಿಯನ್ನು ಕೆ.ಇ.ಎ. ವೆಬ್ಸೈಟ್ (https://cetonline.karnataka.gov.in) ದಿನಾಂಕ:05.03.2024 ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುತ್ತದೆ. ,

ಕರ್ನಾಟಕ ಶಿಕ್ಷಣ ಇಲಾಖಾ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು 2020 ರ ನಿಯಮ (4) ರನ್ವಯ ಕಾಲೇಜು ಶಿಕ್ಷಣ ಆಯುಕ್ತರ ಅಧ್ಯಕ್ಷತೆಯಲ್ಲಿನ ಆಯ್ಕೆ ಪ್ರಾಧಿಕಾರವು ಶೈಕ್ಷಣಿಕ ಹಾಗೂ ಮೀಸಲಾತಿ ದಾಖಲಾತಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಸಲ್ಲಿಸುವಂತೆ ಉಲ್ಲೇಖ-(4)ರ ಸರ್ಕಾರದ ಪತ್ರದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಲಾಗಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರಕಟಿಸಲ್ಪಟ್ಟ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿಯಲ್ಲಿ ದಾಖಲಿಸಿದ ಮಾಹಿತಿಗಳಿಗನುಗುಣವಾಗಿ ವಿದ್ಯಾರ್ಹತೆ, ಮೀಸಲಾತಿ ಮತ್ತಿತರೆ ಅಗತ್ಯ ದೃಢೀಕೃತ ಪ್ರತಿಗಳನ್ನು ದಿನಾಂಕ:28-08-2024 ರೊಳಗಾಗಿ ಸಲ್ಲಿಸುವಂತೆ 34, (https://dce.karnataka.gov.in) ໖, ໙-(6) ໖:13-08-20240 ಈ ಕಛೇರಿಯ ಅಧಿಕೃತ ಜ್ಞಾಪನದೊಂದಿಗೆ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ತದನಂತರದಲ್ಲಿ ಉಲ್ಲೇಖ-(6)ರ ದಿನಾಂಕ:26-08-2024ರ ಈ ಕಛೇರಿಯ ಅಧಿಕೃತ ಜ್ಞಾಪನದಲ್ಲಿ ಕೊನೆಯ ದಿನಾಂಕವನ್ನು ದಿನಾಂಕ:31-08-2024ರವರೆಗೆ ವಿಸ್ತರಿಸಲಾಯಿತು. ಅದರನ್ವಯ ಒಟ್ಟು 742 ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸಿದ್ದರು. ತದನಂತರ, ನಿಗಧಿತ ಅವಧಿಯೊಳಗಾಗಿ ದಾಖಲೆಗಳನ್ನು ಸಲ್ಲಿಸದ ಅಭ್ಯರ್ಥಿಗಳಿಗೆ, ಉಲ್ಲೇಖ-(6)ರ ದಿನಾಂಕ:05-11-2024ರ ಅಧಿಕೃತ ಜ್ಞಾಪನದನ್ವಯ ಹಾಗೂ ಪ್ರಮುಖ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವುದರ ಮೂಲಕ ಮಾಹಿತಿ ನೀಡಿ, ದಿನಾಂಕ:15-11-2024 ರೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮತ್ತೊಮ್ಮೆ ಅವಕಾಶವನ್ನು ನೀಡಲಾಗಿತ್ತು. ಅದರನ್ವಯ ಒಟ್ಟು 37 ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸಿದ್ದು ಒಟ್ಟು 954 ಅಭ್ಯರ್ಥಿಗಳಲ್ಲಿ 779 ಅಭ್ಯರ್ಥಿಗಳಿಂದ ದಾಖಲೆಗಳು ಸ್ವೀಕೃತವಾಗಿರುತ್ತವೆ. ಉಳಿದಂತೆ 175 ಅಭ್ಯರ್ಥಿಗಳ ದಾಖಲೆಗಳು ಸ್ವೀಕೃತವಾಗಿರುವುದಿಲ್ಲ.

ಅದರಂತೆ, ಒಟ್ಟು 779 ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ದಾಖಲೆಗಳಲ್ಲಿ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆಗಳ ಪರಿಶೀಲನೆಯನ್ನು ಉಲ್ಲೇಖ-(5)ರ ಸರ್ಕಾರದ ಆದೇಶದನ್ವಯ ರಚಿಸಲಾಗಿರುವ ಉನ್ನತಮಟ್ಟದ ಇಲಾಖಾ ಪರಿಶೀಲನಾ ಸಮಿತಿಯು ಕೈಗೊಂಡಿರುತ್ತದೆ. ಸದರಿ ಸಮಿತಿಯು ಅಭ್ಯರ್ಥಿಗಳು ಸಲ್ಲಿಸಿರುವ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ಕರ್ನಾಟಕ ಶಿಕ್ಷಣ ಇಲಾಖಾ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು 2020 ರ ನಿಯಮ 3(1) ರಲ್ಲಿ ತಿಳಿಸಿರುವಂತೆ ಪರಿಶೀಲಿಸಿ, ಸದರಿ ನಿಯಮಗಳ ನಿಯಮ (4)ರನ್ವಯ ರಚಿಸಲಾಗಿರುವ ಆಯ್ಕೆ ಪ್ರಾಧಿಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯನ್ನು ಪರಿಶೀಲಿಸಿದ ಆಯ್ಕೆ ಪ್ರಾಧಿಕಾರವು ತೀರ್ಮಾನಿಸಿದಂತೆ, ಶೈಕ್ಷಣಿಕವಾಗಿ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅನುಬಂಧ-1 ರಲ್ಲಿ ಹಾಗೂ ಶೈಕ್ಷಣಿಕವಾಗಿ ಅನರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅನುಬಂಧ-2 ರಲ್ಲಿ ಈ ಮೂಲಕ ಪ್ರಕಟಿಸಲಾಗುತ್ತಿದೆ.

ಸೂಚನೆಗಳು:

1) ಈ ಮೂಲಕ ಅನುಬಂಧ-1 ರಲ್ಲಿ ಪ್ರಕಟಿಸಲಾಗುತ್ತಿರುವ ಶೈಕ್ಷಣಿಕವಾಗಿ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯು ತಾತ್ಕಾಲಿಕ ಆಯ್ಕೆ ಪಟ್ಟಿಯಾಗಿರುವುದಿಲ್ಲ. ಕರ್ನಾಟಕ ಶಿಕ್ಷಣ ಇಲಾಖಾ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು 2020 ರ ನಿಯಮ 3(1) ರಲ್ಲಿ ತಿಳಿಸಿರುವ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳ ಪಟ್ಟಿ ಮಾತ್ರ ಆಗಿರುತ್ತದೆ ಎಂಬ ಅಂಶವನ್ನು ಗಮನಿಸತಕ್ಕದ್ದು.

2) ಈ ಮೂಲಕ ಪ್ರಕಟಿಸಲಾಗುತ್ತಿರುವ ಶೈಕ್ಷಣಿಕವಾಗಿ ಅರ್ಹರಾಗಿರುವ ಹಾಗೂ ಶೈಕ್ಷಣಿಕವಾಗಿ ಅನರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸದರಿ ಆಕ್ಷೇಪಣೆಗಳನ್ನು ಲಗತ್ತಿಸಿರುವ ನಮೂನೆಯಲ್ಲಿ (ಅನುಬಂಧ-3) ಭರ್ತಿ ಮಾಡಿ, ಸದರಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ Scan ಮಾಡಿ pdf file ಅನ್ನು ಅಭ್ಯರ್ಥಿಗಳು ಕೆ.ಇ.ಎ.ಗೆ ನೀಡಿರುವ ತಮ್ಮ ಅಧಿಕೃತ ಇ-ಮೇಲ್ ವಿಳಾಸದ ಮೂಲಕ ಈ ಕಛೇರಿಯ ಇ-ಮೇಲ್ ವಿಳಾಸ dceprincipals@gmail.com ಗೆ ಈ ಅಧಿಕೃತ ಜ್ಞಾಪನ ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು. ನಿಗಧಿತ ದಿನಾಂಕದ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು, ಈ ಪಟ್ಟಿಗೆ ಸಂಬಂಧಿಸದೇ ಇರುವ ಆಕ್ಷೇಪಣೆಗಳನ್ನು ಮೇಲೆ ತಿಳಿಸಿದಂತೆ ಅಧಿಕೃತ ಇ-ಮೇಲ್ ವಿಳಾಸದಿಂದ ಸ್ವೀಕೃತವಾಗದ ಆಕ್ಷೇಪಣೆಗಳನ್ನು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸದೇ ಇರುವ ಹಾಗೂ ಅಧಿಕೃತ ಇ-ಮೇಲ್ ಹೊರತುಪಡಿಸಿ ಇತರ ಯಾವುದೇ ಸಂವಹನ ಮಾರ್ಗಗಳ ಮೂಲಕ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

3) ಮೇಲೆ ತಿಳಿಸಿದಂತೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಉನ್ನತಮಟ್ಟದ ಇಲಾಖಾ ಪರಿಶೀಲನಾ ಸಮಿತಿಯು ಪರಿಶೀಲಿಸಲಿದ್ದು, ಪರಿಶೀಲನಾ ಸಂದರ್ಭದಲ್ಲಿ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಿರತಕ್ಕದ್ದು. ಈ ಸಂಬಂಧ ಅಭ್ಯರ್ಥಿಗಳು ಪರಿಶೀಲನೆಗೆ ಹಾಜರಾಗುವ ದಿನಾಂಕ ಹಾಗೂ ಸಮಯವನ್ನು ನಿಗಧಿಪಡಿಸಿ, ಸಂಬಂಧಿಸಿದ ಅಭ್ಯರ್ಥಿಗಳ ಅಧಿಕೃತ ಇ-ಮೇಲ್ ವಿಳಾಸಕ್ಕೆ ಮಾಹಿತಿಯನ್ನು ನೀಡುವುದರೊಂದಿಗೆ, ಇಲಾಖಾ ವೆಬ್ಸೈಟ್ನಲ್ಲಿಯೂ ಕೂಡ ಪ್ರಕಟಿಸಲಾಗುವುದು. ಪರಿಶೀಲನಾ ಸಂದರ್ಭದಲ್ಲಿ ಖುದ್ದು ಹಾಜರಾಗದ ಅಭ್ಯರ್ಥಿಗಳಿಗೆ, ಪ್ರಕಟಿಸಿದ ಪಟ್ಟಿಗಳ ಬಗ್ಗೆ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲ ಎಂದು ತೀರ್ಮಾನಿಸಲಾಗುವುದು.

4) ಶೈಕ್ಷಣಿಕವಾಗಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರವರ್ಗ-2ಎ ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿ ಮೀಸಲಾತಿಯನ್ನು ಕ್ಲಂ ಮಾಡಿರುವ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರವನ್ನು ಪಡೆದು 30 ದಿನಗಳ ಒಳಗಾಗಿ ಈ ಕಛೇರಿಗೆ ಸಲ್ಲಿಸತಕ್ಕದ್ದು. (ಅವಧಿ ಮೀರಿದ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವ ಕಾರಣ, ಜಾತಿ ಪ್ರಮಾಣ ಪತ್ರದ ಕುರಿತು ತಹಶೀಲ್ದಾರ್ರಿಂದ ನೀಡಲಾಗಿರುವ ಹಿಂಬರಹವನ್ನು ಸಲ್ಲಿಸಿರುವ ಕಾರಣ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಅಭ್ಯರ್ಥಿಗಳು)

5) ಈ ಮೂಲಕ ಪ್ರಕಟಿಸಲಾಗುತ್ತಿರುವ ಎರಡೂ ಪಟ್ಟಿಗಳಲ್ಲಿ ದಿನಾಂಕ:31-05-2025 ರೊಳಗಾಗಿ ನಿವೃತ್ತಿ ಹೊಂದಿರುವ ಒಟ್ಟು 14 ಅಭ್ಯರ್ಥಿಗಳನ್ನು ಹೊರತು ಪಡಿಸಲಾಗಿದೆ.

BIG NEWS: Direct recruitment of 310 principals of degree colleges in the state: List of eligible candidates published
Share. Facebook Twitter LinkedIn WhatsApp Email

Related Posts

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ನಾಳೆ ಬೆಂಗಳೂರಿಗೆ ತಲುಪಲಿದೆ ಹಳದಿ ಮಾರ್ಗದ 8ನೇ ರೈಲು | Namma Metro

18/01/2026 4:35 PM1 Min Read

ವಾರ್ತಾ ಇಲಾಖೆ ಸಂಬಂಧಿತ ಶ್ರೀನಿವಾಸಮೂರ್ತಿ ಸಮಿತಿಯ ವರದಿ ಜಾರಿಗೆ ಸಿಎಂ ಉತ್ಸುಕ: ಶೀಘ್ರವೇ ಆಯುಕ್ತರ ಜತೆ ಚರ್ಚೆ

18/01/2026 4:27 PM2 Mins Read

SHOCKING : ಆನ್ಲೈನ್ ಬೆಟ್ಟಿಂಗ್ ನಲ್ಲಿ ಲಕ್ಷಾಂತರ ರೂ. ಸಾಲ : ತಂದೆ ಬೈದು ಬುದ್ದಿ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣು!

18/01/2026 4:07 PM1 Min Read
Recent News

ಇರಾಕ್ ನಲ್ಲಿ 16,500 ಮಂದಿ ಸಾವು: ಪ್ರತಿಭಟನಾಕಾರರಿಗೆ ಗುಂಡೇಟು, ಹಲವರಿಗೆ ಗಾಯ- ವರದಿ

18/01/2026 5:10 PM

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ನಾಳೆ ಬೆಂಗಳೂರಿಗೆ ತಲುಪಲಿದೆ ಹಳದಿ ಮಾರ್ಗದ 8ನೇ ರೈಲು | Namma Metro

18/01/2026 4:35 PM

ವಾರ್ತಾ ಇಲಾಖೆ ಸಂಬಂಧಿತ ಶ್ರೀನಿವಾಸಮೂರ್ತಿ ಸಮಿತಿಯ ವರದಿ ಜಾರಿಗೆ ಸಿಎಂ ಉತ್ಸುಕ: ಶೀಘ್ರವೇ ಆಯುಕ್ತರ ಜತೆ ಚರ್ಚೆ

18/01/2026 4:27 PM

“ವಿರಾಟ್ ಮತ್ತು ಎಂಎಸ್ ಫ್ರಮ್ ಮೀಶೋ” : ಧೋನಿ, ಕೊಹ್ಲಿಯ ಹೋಲುವ ಜೋಡಿಗಳ ವೀಡಿಯೊ ವೈರಲ್!

18/01/2026 4:15 PM
State News
KARNATAKA

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ನಾಳೆ ಬೆಂಗಳೂರಿಗೆ ತಲುಪಲಿದೆ ಹಳದಿ ಮಾರ್ಗದ 8ನೇ ರೈಲು | Namma Metro

By kannadanewsnow0918/01/2026 4:35 PM KARNATAKA 1 Min Read

ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹಳದಿ ಮಾರ್ಗದಲ್ಲಿ ಸಂಚರಿಸಲಿರುವಂತ 8ನೇ ರೈಲು ಜನವರಿ.19ರ ನಾಳೆ ಬೆಂಗಳೂರಿಗೆ ತಲುಪಲಿದೆ.…

ವಾರ್ತಾ ಇಲಾಖೆ ಸಂಬಂಧಿತ ಶ್ರೀನಿವಾಸಮೂರ್ತಿ ಸಮಿತಿಯ ವರದಿ ಜಾರಿಗೆ ಸಿಎಂ ಉತ್ಸುಕ: ಶೀಘ್ರವೇ ಆಯುಕ್ತರ ಜತೆ ಚರ್ಚೆ

18/01/2026 4:27 PM

SHOCKING : ಆನ್ಲೈನ್ ಬೆಟ್ಟಿಂಗ್ ನಲ್ಲಿ ಲಕ್ಷಾಂತರ ರೂ. ಸಾಲ : ತಂದೆ ಬೈದು ಬುದ್ದಿ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣು!

18/01/2026 4:07 PM

ಬೆಂಗಳೂರಲ್ಲಿ ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು : ಅದೃಷ್ಟವಶಾತ್ ಮೂವರು ಪಾರು!

18/01/2026 4:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.