ಹರಿಯಾಣ : ಹರಿಯಾಣದ ಸೋನಿಪತ್ನ ಖಾರ್ಖೋಡಾ ಪ್ರದೇಶದಲ್ಲಿ ರೂಪದರ್ಶಿ ಶೀತಲ್ ಅವರನ್ನು ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಅವರ ಗಂಟಲು ಸೀಳಿ ಹತ್ಯೆ ಮಾಡಲಾಗಿದ್ದು, ಖಾಂಡಾ ಗ್ರಾಮದ ಬಳಿಯ ರಿಲಯನ್ಸ್ ಕಾಲುವೆಯ ಬಳಿ ಅವರ ಶವ ಪತ್ತೆಯಾಗಿದೆ.
ಇಂದು ಹರಿಯಾಣ ಪೊಲೀಸರು ಶೀತಲ್ ಅವರ ಸ್ನೇಹಿತ ಸುನಿಲ್ ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಅವರನ್ನು ಬಂಧಿಸಲಾಗಿದೆ.
ಶೀತಲ್ ಅವರು ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬ ವರದಿ ಮಾಡಿತ್ತು. ಈ ವಾರದ ಆರಂಭದಲ್ಲಿ ಪಾಣಿಪತ್ ಪೊಲೀಸರು ನಾಪತ್ತೆಯಾದ ವ್ಯಕ್ತಿಯ ವರದಿಯನ್ನು ದಾಖಲಿಸಿದ್ದರು. ನಿನ್ನೆ ತಡರಾತ್ರಿ, ಸೋನಿಪತ್ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ನಾಗರಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಶೀತಲ್ (ಸಿಮ್ಮಿ ಎಂದೂ ಕರೆಯಲ್ಪಡುವ) ಪಾಣಿಪತ್ ಮೂಲದವರು. ಜೂನ್ 14 ರಂದು ಮನೆಗೆ ಬಾರದೇ ಇದ್ದರಿಂದ ಆಕೆಯ ಸಹೋದರಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಶೀತಲ್ ಎರಡು ದಿನಗಳ ಹಿಂದೆ ಸುನಿಲ್ ಎಂದು ಗುರುತಿಸಲಾದ ಪುರುಷ ಸಹಚರನೊಂದಿಗೆ ಕಾರಿನಲ್ಲಿ ಹೊಗಿದ್ದರು.
Haryanvi model Sheetal Simmi Chaudhary found dead | Today, Haryana Police will produce a friend of Sheetal, namely Sunil, before the District Court. He was arrested last night in connection with the case: Haryana Police
— ANI (@ANI) June 17, 2025