Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಸ್ರೇಲ್-ಇರಾನ್ ಸಂಘರ್ಷ: ‘ಎಲ್ಲರೂ ತಕ್ಷಣ ಟೆಹ್ರಾನ್ ಅನ್ನು ಖಾಲಿ‌ ಮಾಡಬೇಕು’: ಟ್ರಂಪ್

17/06/2025 7:57 AM

BIG NEWS : ರಾಜ್ಯದ ವೈದ್ಯರು, ಸಿಬ್ಬಂದಿಗಳಿಗೆ ಜು.1 ರಿಂದ ‘ಮೊಬೈಲ್ ಹಾಜರಾತಿ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

17/06/2025 7:55 AM

ಉದ್ಯೋಗವಾರ್ತೆ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ : 6374 ಹುದ್ದೆಗಳಿಗೆ ಅರ್ಜಿ ಆಹ್ವಾನ | RRB Technician Recruitment 2025

17/06/2025 7:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ವೈದ್ಯರು, ಸಿಬ್ಬಂದಿಗಳಿಗೆ ಜು.1 ರಿಂದ ‘ಮೊಬೈಲ್ ಹಾಜರಾತಿ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ ವೈದ್ಯರು, ಸಿಬ್ಬಂದಿಗಳಿಗೆ ಜು.1 ರಿಂದ ‘ಮೊಬೈಲ್ ಹಾಜರಾತಿ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5717/06/2025 7:55 AM

ಬೆಂಗಳೂರು : ಕರ್ನಾಟಕದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನೊಳಗೊಂಡಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕಡತದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ ಬಳಸಲ್ಪಡುತ್ತಿರುವ ಹಾಜರಾತಿ ನಿರ್ವಹಣಾ ವ್ಯವಸ್ಥೆಯು ಮೀಸಲಾದ ಹಾರ್ಡ್ವೇರ್ ಸಾಧನಗಳ ಮೂಲಕ ಆಧಾರ್ ಆಧಾರಿತ ಬಯೋಮೆಟ್ರಿಕ್ ಪ್ರಮಾಣೀಕರಣವನ್ನು ಅವಲಂಭಿಸಿದೆ. ಹಾರ್ಡ್ ವೇರ್. ಸಾಧನಗಳಿಗೆ ಆಗಾಗೆ ನಿರ್ವಹಣೆ, ದುರಸ್ತಿ ಮತ್ತು ಆವರ್ತಕ ಬದಲಾವಣೆಗಳ ಅಗತ್ಯವಿದ್ದು, ಇದು ಇಲಾಖೆಗೆ ಗಣನೀಯ ಪುನರಾವರ್ತಿತ ವೆಚ್ಚಗಳಿಗೆ ಕಾರಣವಾಗಿದೆ. ಬಯೋಮೆಟ್ರಿಕ್ ಸಾಧನಗಳ ಸ್ಥಿರ ಸ್ವರೂಪದಿಂದಾಗಿ ಹಾಜರಾತಿ ಗುರುತಿಸುವಿಕೆಯನ್ನು ನಿರ್ದಿಷ್ಟ ಸ್ಥಳಗಳಿಗೆ ಸೀಮಿತಗೊಳಿಸಿದೆ. ಕ್ಷೇತ್ರ ಸಿಬ್ಬಂದಿ ಮತ್ತು ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಅಸಮರ್ಥತೆಗಳನ್ನು ಸೃಷ್ಟಿಸುತ್ತದೆ. ಈ ವ್ಯವಸ್ಥೆಯ ಸೀಮಿತ ವಿಸ್ತರಣೆ, ಅಂದರೆ ಹೊಸ ಸೌಲಭ್ಯಗಳಿಗೆ ವಿಸ್ತರಿಸಲು ಹಾರ್ಡ್ವೇರ್ ಹೂಡಿಕೆಗಳು: ಮತ್ತು ಭೌತಿಕ ಸ್ವಾಪನಾ ಪ್ರಕ್ರಿಯೆಗಳ ಅಗತ್ಯವಿದೆ. ಇದಲ್ಲದೆ, ಹಾರ್ಡ್ ವೇರ್ ವೈಫಲ್ಯಗಳು ಮತ್ತು ಸಂಪರ್ಕ ಸಮಸ್ಯೆಗಳು ಆಗಾಗೆ, ವ್ಯವಸ್ಥೆಯ ಡೌನ್ಟೈಮ್ಗೆ ಕಾರಣವಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ, 2025-26ನೇ ಸಾಲಿನ ಬಜೆಟ್ ಭಾಷಣದ ಕಂಡಿಕೆ 152(ii)ರಲ್ಲಿ “ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು” ಎಂದು ಘೋಷಿಸಲಾಗಿದೆ. ಅದರಂತೆ ಕರ್ನಾಟಕದ ಎಲ್ಲಾ 12000 ಆರೋಗ್ಯ ಸಂಸ್ಥೆಗಳನ್ನು ಒಳಗೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAMS) ಅನುಷ್ಠಾನಗೊಳಿಸುವುದನ್ನು ಪ್ರಸ್ತಾಪಿಸಲಾಗಿದ್ದು, ವ್ಯವಸ್ಥೆಯು ಆಧಾರ್ ಆಧಾರಿತ ಮುಖ ಪ್ರಮಾಣೀಕರಣ, ಭೌಗೋಳಿಕ ನಿರ್ದಿಷ್ಟಾಂಕಗಳೊಳಗೆ ಕ್ಷೇತ್ರದಲ್ಲಿ ಹಾಜರಾತಿ ಗುರುತಿಸಲು ಸೌಲಭ್ಯವನ್ನು ನೀಡುತ್ತದೆ. ಮೊಬೈಲ್ ಆಧಾರಿತ ಪರಿಹಾರವು ಹಾರ್ಡ್ ವೇರ್ನನ ಅಗತ್ಯವನ್ನು ತೆಗೆದುಹಾಕುತ್ತದೆ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡಲಿದೆ. ಹಾಜರಾತಿ ಮೇಲ್ವಿಚಾರಣೆ ಮತ್ತು ಕಾರ್ಯಬಲ ನಿರ್ವಹಣೆಯನ್ನು ಸುಧಾರಿಸಲಿದೆ ಎಂದು. ಆದ್ದರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕುರಿತಂತೆ ಕೋರಲಾಗಿದೆ.

ಈ ಯೋಜನೆಯು ಸ್ವತಂತ್ರವಾಗಿ ಇ-ಆಡಳಿತ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಲಿದ್ದು, ಆದ್ದರಿಂದ ಕರ್ನಾಟಕದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನೊಳಗೊಂಡಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆಕುಕ 358 ಹೆಚ್ಎಸ್ಹೆಚ್ 2024, ಬೆಂಗಳೂರು, ದಿನಾಂಕ : 12ನೇ ಜುನ್ 2025

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನು ಒಳಗೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ದಿನಾಂಕ : 01/07/2025 ರಿಂದ ಕಡ್ಡಾಯವಾಗಿ ಜಾರಿಗೊಳಿಸಿ ಆದೇಶಿಸಿದೆ.

BIG NEWS: 'Mobile attendance' mandatory for doctors and staff in the state from July 1: Important order from the government!
Share. Facebook Twitter LinkedIn WhatsApp Email

Related Posts

GOOD NEWS : ‘ಭಾಗ್ಯಲಕ್ಷ್ಮಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ‘`ಮೆಚ್ಯೂರಿಟಿ ಹಣ’ ಪಡೆಯಲು ತಪ್ಪದೇ ಈ ಕೆಲಸ ಮಾಡಿ.!

17/06/2025 7:21 AM1 Min Read

BIG NEWS : ರಾಜ್ಯ `ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್’ : ಬ್ಯಾಂಕ್ ಗಳು ನೀಡುವ ಸೌಲಭ್ಯಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

17/06/2025 7:20 AM1 Min Read

GOOD NEWS: ರಾಜ್ಯ ರೈತರಿಗೆ ಮಹತ್ವದ ಮಾಹಿತಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಆಹ್ವಾನ | PM KISAN

17/06/2025 7:05 AM1 Min Read
Recent News

ಇಸ್ರೇಲ್-ಇರಾನ್ ಸಂಘರ್ಷ: ‘ಎಲ್ಲರೂ ತಕ್ಷಣ ಟೆಹ್ರಾನ್ ಅನ್ನು ಖಾಲಿ‌ ಮಾಡಬೇಕು’: ಟ್ರಂಪ್

17/06/2025 7:57 AM

BIG NEWS : ರಾಜ್ಯದ ವೈದ್ಯರು, ಸಿಬ್ಬಂದಿಗಳಿಗೆ ಜು.1 ರಿಂದ ‘ಮೊಬೈಲ್ ಹಾಜರಾತಿ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

17/06/2025 7:55 AM

ಉದ್ಯೋಗವಾರ್ತೆ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ : 6374 ಹುದ್ದೆಗಳಿಗೆ ಅರ್ಜಿ ಆಹ್ವಾನ | RRB Technician Recruitment 2025

17/06/2025 7:46 AM

ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕೆನಡಾಕ್ಕೆ ಆಗಮಿಸಿದ ಪ್ರಧಾನಿ ಮೋದಿ |G-7 Summit

17/06/2025 7:43 AM
State News
KARNATAKA

BIG NEWS : ರಾಜ್ಯದ ವೈದ್ಯರು, ಸಿಬ್ಬಂದಿಗಳಿಗೆ ಜು.1 ರಿಂದ ‘ಮೊಬೈಲ್ ಹಾಜರಾತಿ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5717/06/2025 7:55 AM KARNATAKA 2 Mins Read

ಬೆಂಗಳೂರು : ಕರ್ನಾಟಕದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನೊಳಗೊಂಡಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು…

GOOD NEWS : ‘ಭಾಗ್ಯಲಕ್ಷ್ಮಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ‘`ಮೆಚ್ಯೂರಿಟಿ ಹಣ’ ಪಡೆಯಲು ತಪ್ಪದೇ ಈ ಕೆಲಸ ಮಾಡಿ.!

17/06/2025 7:21 AM

BIG NEWS : ರಾಜ್ಯ `ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್’ : ಬ್ಯಾಂಕ್ ಗಳು ನೀಡುವ ಸೌಲಭ್ಯಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

17/06/2025 7:20 AM

GOOD NEWS: ರಾಜ್ಯ ರೈತರಿಗೆ ಮಹತ್ವದ ಮಾಹಿತಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಆಹ್ವಾನ | PM KISAN

17/06/2025 7:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.