ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಅವರ ಪುತ್ರಿಗೆ ಇಂದು ಪ್ರಕಟವಾದಂತ ನೀಟ್ ಯುಜಿ ಪರೀಕ್ಷೆಯಲ್ಲಿ 444 ಶ್ರೇಣಿಯನ್ನು ಪಡೆದಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಆಗಿ ಜಗದೀಶ್ ಡಿ.ಪಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪುತ್ರಿ ಕೃತಿಕ.ಜೆ ಇಂದು ಪ್ರಕಟವಾದಂತ ನೀಟ್ ಯುಜಿ ಪರೀಕ್ಷೆಯಲ್ಲಿ 444 Rank ಪಡೆದಿದ್ದಾರೆ.
ಕೃತಿಕ.ಜೆ ಅವರಿಗೆ ಚಿಕ್ಕ ವಯಸ್ಸಿನಿಂದಲೇ ವೈದ್ಯಳಾಗುವಂತ ಕನಸಿತ್ತಂತೆ. ಈ ಕಾರಣಕ್ಕೆ ಬಾಲ್ಯದಿಂದಲೂ ವ್ಯಾಸಂಗದಲ್ಲಿ ಮುಂದಿದ್ದರು. ಇಂದು ಪ್ರಕಟವಾದಂತ ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಪುತ್ರಿ ಪಡೆದಿದ್ದು, ಟಾಪ್ ತ್ರಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ ಎಂಬುದಾಗಿ ಹೆಚ್.ಡಿಕೆ ಗನ್ ಮ್ಯಾನ್ ಜಗದೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೇ ಜಗದೀಶ್ ಅವರಿಗೆ ಇಬ್ಬರು ಮಕ್ಕಳು. ಓರ್ವ ಪುತ್ರ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದರೇ, ಪುತ್ರಿ ಕೃತಿಕ ದ್ವಿತೀಯ ಪಿಯುಸಿ ಮುಗಿಸಿ, ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ವ್ಯಾಸಂಗದ ನಿರೀಕ್ಷೆಯಲ್ಲಿದ್ದರು. ಈ ಕನಸು ಇದೀಗ ಈಡೇರಿದಂತೆ ಆಗಿದೆ. ಕೃತಿಕ ಮುಂದಿನ ವ್ಯಾಸಂಗಕ್ಕೆ ನಾವು ನೀವೆಲ್ಲ ಆಲ್ ದಿ ಬೆಸ್ಟ್ ಹೇಳೋಣ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಅಮೇರಿಕಾದಲ್ಲಿ ಭೀಕರ ಗುಂಡಿನ ದಾಳಿ: ಮಾಜಿ ಹೌಸ್ ಸ್ಪೀಕರ್, ಪತಿ ಗುಂಡಿಕ್ಕಿ ಹತ್ಯೆ
BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ