Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನಗಳಲ್ಲಿ ವಿ2ವಿ ಸಂವಹನ ಸಾಧನಗಳನ್ನು ಕಡ್ಡಾಯಗೊಳಿಸಲಿರುವ ಕೇಂದ್ರ ಸರ್ಕಾರ

10/01/2026 9:12 AM

ಗ್ರೀನ್ ಲ್ಯಾಂಡ್ ಅನ್ನು ‘ಕಠಿಣ ಮಾರ್ಗದಲ್ಲಿ’ ತೆಗೆದುಕೊಳ್ಳುವುದಾಗಿ ಟ್ರಂಪ್ ಬೆದರಿಕೆ !

10/01/2026 9:08 AM

SHOCKING : ಹೃದಯವಿದ್ರಾವಕ ಘಟನೆ : 10 ತಿಂಗಳ ಮಗುವಿಗೆ ವಿಷ ಕುಡಿಸಿ, ನೇಣುಬಿಗಿದುಕೊಂಡು ತಾಯಿ ಆತ್ಮಹತ್ಯೆ.!

10/01/2026 9:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸರ್ಕಾರಕ್ಕೆ ಹಣ ಕಟ್ಟದೇ ಕರ್ತವ್ಯ ಲೋಪವೆಸಗಿದ ‘ಸಾರಿಗೆ ಇಲಾಖೆ SDA’ ಸಸ್ಪೆಂಡ್
KARNATAKA

ಸರ್ಕಾರಕ್ಕೆ ಹಣ ಕಟ್ಟದೇ ಕರ್ತವ್ಯ ಲೋಪವೆಸಗಿದ ‘ಸಾರಿಗೆ ಇಲಾಖೆ SDA’ ಸಸ್ಪೆಂಡ್

By kannadanewsnow0909/06/2025 5:34 PM

ಬೆಂಗಳೂರು: ಸಾರಿಗೆ ಇಲಾಖೆಗೆ ಶುಲ್ಕ, ತೆರಿಗೆ ಮತ್ತು ದಂಡದ ರೂಪದಲ್ಲಿ ಜಮೆ ಆಗಬೇಕಿದ್ದಂತ ಮೊತ್ತವನ್ನು ಕಟ್ಟದೇ ಕರ್ತವ್ಯ ಲೋಪವೆಸಗಿದಂತ ದ್ವಿತೀಯ ದರ್ಜೆ ಸಹಾಯಕನನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರದ ಆಯುಕ್ತರು ನಡವಳಿಯನ್ನು ಹೊರಡಿಸಿದ್ದು, ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಛೇರಿಯ ಖಜಾನೆ ವಿಭಾಗದಲ್ಲಿ ದೈನಂದಿನ ಸಂಗ್ರಹವಾಗುವ ಶುಲ್ಕ, ತೆರಿಗೆ ಮತ್ತು ದಂಡಗಳ ಮೊತ್ತವನ್ನು ಅದೇ ದಿನ ಅಥವಾ ಕೆಲಸದ ಅವಧಿಯ ನಂತರದ ದಿನದಂದು ಸರ್ಕಾರದ ಖಜಾನೆಗೆ ಕೆ-2 ಚಲನ್ ಮುಖಾಂತರ ಪಾವತಿಸುವುದು KFC & KTC ಕಾಯ್ದೆಯನ್ವಯ ಕಡ್ಡಾಯವಾಗಿರುತ್ತದೆ. ಆದರೆ 2025ರ ಮೇ ತಿಂಗಳ ದಿನಾಂಕ: 21, 26 ರಿಂದ 31 ರ ಅವಧಿಯ ಒಟ್ಟು 7 ಕರ್ತವ್ಯ ದಿನಗಳ ಖಜಾನೆ ವಸೂಲಾತಿಯ ಒಟ್ಟು ರೂ.16,72,518/- ಸರ್ಕಾರಕ್ಕೆ ಸಂದಾಯ ಮಾಡಿರೋದಿಲ್ಲ.

ಒಟ್ಟು 7 ದಿನಗಳ ಖಜಾನೆ ಸಂಗ್ರಹಣೆ ಮೊತ್ತ ರೂ. 16,72,518/- ನ್ನು ಸರ್ಕಾರಕ್ಕೆ ಪಾವತಿಸದೇ ತಾತ್ಕಾಲಿಕವಾಗಿ ಸರ್ಕಾರದ ರಾಜನ್ಯವು ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಕುರಿತಾಗಿ ಖಜಾನೆ ವಿಷಯ ನಿರ್ವಾಹಕರಾದ ರವಿ ತಾವರಖೇಡಾ ಇವರ ವಿರುದ್ಧ ದಿನಾಂಕ: 08-06-2025 ರಂದು ಕೌಲ್ ಬಜಾರ್ ಪೊಲೀಸ್ ಠಾಣೆ, ಬಳ್ಳಾರಿಯಲ್ಲಿ ಪ್ರಥಮ ವರ್ತಮಾನ ವರದಿ (FIR) ಸಂಖ್ಯೆ: 139/2025 ನ್ನು ಶ್ರೀ ವೀರೇಶ, ಅಧೀಕ್ಷಕರು, ಪ್ರಾದೇಶಿಕ ಸಾರಿಗೆ ಕಛೇರಿ, ಬಳ್ಳಾರಿ ರವರು ದೂರನ್ನು ದಾಖಲಿಸಿರುತ್ತಾರೆ.

ತಮ್ಮ ದೂರಿನಲ್ಲಿ ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ, ಶುಲ್ಕದ ಹಣವನ್ನು ಪಾವತಿಸಿಕೊಂಡು ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಯಡಿ ಜಮೆ ಮಾಡದೇ ಕರ್ತವ್ಯ ಲೋಪವೆಸಗಿ ಸರ್ಕಾರಕ್ಕೆ ಮೋಸ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆಂದು ತಿಳಿದು ಬಂದಿರುತ್ತದೆ ಎಂದು ಮತ್ತು ಸದರಿ ನೌಕರರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಕೋರಿರುತ್ತಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ, ಬಳ್ಳಾರಿ ಮತ್ತು ಖಜಾನೆ ಅಧೀಕ್ಷಕರು, ಪ್ರಾ.ಸಾ.ಕ ಬಳ್ಳಾರಿ ರವರೊಂದಿಗೆ ದೂರವಾಣಿ ಮುಖಾಂತರ ತುರ್ತು ಚರ್ಚಿಸಲಾಗಿ ಅವರು ಈ ಕೆಳಗಿನಂತೆ ವಿವರಿಸಿರುತ್ತಾರೆ.

ಮೇ 2025 ರ ದಿನಾಂಕ: 21 ರಂದು ಸಂಗ್ರಹಿಸಲಾದ ಮೊತ್ತ ಮತ್ತು ದಿನಾಂಕ: 26 ರಿಂದ 31 ರ ಅವಧಿಯ ಒಟ್ಟು 7 ದಿನದ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಿರುವುದಿಲ್ಲ. ಈ ಕುರಿತಾಗಿ ರವಿ ತಾವರಖೇಡಾ, ಖಜಾನೆ ವಿಷಯ ನಿರ್ವಾಹಕರನ್ನು ಪ್ರಶ್ನಿಸಲಾಗಿ ವಿಷಯ ನಿರ್ವಾಹಕರು ಸರ್ಕಾರಕ್ಕೆ ಜಮೆ ಮಾಡಿರುವ ಮೊತ್ತದ ಚಲನ್ ಕುರಿತಾಗಿ ಸ್ಪಷ್ಟವಾಗಿ ವಿವರ ಸಲ್ಲಿಸದೇ ಇಲ್ಲಸಲ್ಲದ ಸಬೂಬನ್ನು ಹೇಳುತ್ತಾ ದಿನಗಳನ್ನು ಕಳೆದಿರುತ್ತಾರೆ. ಈ ಕುರಿತಾಗಿ ತಾವುಗಳು ಮೇಲ್ವಿಚಾರಣಾಧಿಕಾರಿಗಳಾಗಿದ್ದು ತಮಗೆ ನೀಡಿರುವ ಖಜಾನೆ-2, ಎಂ.ಐ.ಎಸ್. ಮುಂತಾದವುಗಳನ್ನು ಸರಿಯಾಗಿ ದೈನಂದಿನ ವಿವರಗಳನ್ನು ಪರಿಶೀಲಿಸದಿರುವುದನ್ನು ಒಪ್ಪಿಕೊಂಡಿರುತ್ತಾರೆ ಮತ್ತು ಈ ಕುರಿತಾಗಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಲೆಕ್ಕ ಪತ್ರ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕಿಯಾದ ಶ್ರೀಮತಿ ರೇಖಾ ರವರು ಸಹ ದೈನಂದಿನ ಸಂಗ್ರಹ ಮತ್ತು ಸರ್ಕಾರಕ್ಕೆ ಜಮೆ ಕುರಿತಾದ ಆಡಿಟ್ ಲೆಕ್ಕ ಪತ್ರವನ್ನು ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರದೇ ಇರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ ಮತ್ತು ಹಿಂದಿನ ದಿನದ ಕಛೇರಿಯ ಖಜಾನೆಯ ಸಂಗ್ರಹಣೆಯ ರಾಜಸ್ವವನ್ನು ಜಮೆ ಮಾಡಲು ಕೆ-2 ತಯಾರಿಸಲು ವಿಷಯ ನಿರ್ವಾಹಕರು, ಅಧೀಕ್ಷಕರು ಮತ್ತು ಡಿ.ಡಿ.ಓ. ಅಧಿಕಾರಿಗಳ ಡಿ.ಎಸ್‌.ಎ. ಕೀ ಮತ್ತು ಲಾಗಿನ್ ಪಾಸ್‌ವರ್ಡ್‌ಗಳ ಅತ್ಯವಶ್ಯವಾಗಿದ್ದು ಈ ಕುರಿತಾಗಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೇಲ್ವಿಚಾರಣಾಧಿಕಾರಿಗಳು ಗಮನ ಹರಿಸದೇ ಕೇವಲ ವಿಷಯ ನಿರ್ವಾಹಕರಿಗೆ ಜವಾಬ್ದಾರಿ ವಹಿಸಿರುವುದು ಅತ್ಯಂತ ಬೇಜವಾಬ್ದಾರಿತನ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.

ರವಿ ತಾವರಖೇಡಾ ರವರು ದಿನಾಂಕ: 07-01-2025 ರಿಂದ ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಛೇರಿಯ ಖಜಾನೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಆ ದಿನದಿಂದ ಇಲ್ಲಿಯವರೆಗೆ ಖಜಾನೆ ಕರ್ತವ್ಯಗಳ ಕುರಿತಾದ ಕೆಲಸಗಳ ತಪಾಸಣೆ ಮತ್ತು ಆಡಿಟ್‌ಗೊಳಪಡಿಸಲು ಒಂದು ಆಂತರಿಕ ಆಡಿಟ್ ತಪಾಸಣಾ ತಂಡ ರಚಿಸಲು ಈ ಮೂಲಕ ಕೋರಲಾಗಿದೆ.

ಸಾರ್ವಜನಿಕರು ಸಾರಿಗೆ ಇಲಾಖೆಗೆ ಪಾವತಿಸಿರುವ ತೆರಿಗೆ, ಶುಲ್ಕ ಮತ್ತು ದಂಡದ ಮೊತ್ತಗಳನ್ನು KFC & KTC ಕಾಯ್ದೆಯನ್ವಯ ಕಡ್ಡಾಯವಾಗಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡುವುದು ಡಿ.ಡಿ.ಓ. ರವರ ಮಹತ್ವದ ಕಾರ್ಯವಾಗಿರುತ್ತದೆ. ಈ ದಿಸೆಯಲ್ಲಿ ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಘಟಿಸಿರುವ ಘಟನೆಯು ಒಂದು ಅತ್ಯಂತ ಘೋರ ಕೃತ್ಯವಾಗಿದ್ದು ಇಂತಹ ಘಟನೆಗಳು ಮುಂಬರುವ ದಿನಗಳಲ್ಲಿ ಸಂಭವಿಸಬಾರದೆಂದು ಸದರಿ ಘಟನೆಯ ಕುರಿತಾಗಿ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದರಿಂದ ಘಟನೆಯ ಕುರಿತಾದ ಪ್ರಮುಖ ಆರೋಪಿತನಾದ ರವಿ ತಾವರಖೇಡಾ ಇತನನ್ನು ಪತ್ತೆ ಹಚ್ಚಿ ತಾತ್ಕಾಲಿಕವಾಗಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆಯಾಗದ ಮೊತ್ತವನ್ನು ಶೀಘ್ರವೇ ವಸೂಲಿಸಿ ಸರ್ಕಾರಕ್ಕೆ ಜಮ ಮಾಡಲು ಕ್ರಮ ಜರುಗಿಸಲು ಕುರಿತಾಗಿ ಕಾರ್ಯೋನ್ಮುಖವಾಗುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬಳ್ಳಾರಿ ರವರ ತಂಡದವರು ಸಮರೋಪಾದಿಯಾಗಿ ಕ್ರಮವಹಿಸಲು ಈಗಾಗಲೇ ಮೌಖಿಕ ಸಲಹೆ ಸೂಚನೆಗಳನ್ನು ನೀಡಿರುವುದರಿಂದ ಆರೋಪಿತ ನೌಕರನ ವಿರುದ್ಧ ಕ್ರಮ ಜರುಗಿಸುವುದು ಅತ್ಯಂತ ಅವಶ್ಯಕವಾಗಿರುವುದರಿಂದ ಸದರಿ ನೌಕರರನ್ನು ತಕ್ಷಣದಿಂದ ಅಮಾನತ್ತಿನಲ್ಲಿರಿಸಲು ಈ ಮೂಲಕ ಕೋರಲಾಗಿದೆ ಹಾಗೂ ಈ ಕುರಿತಂತೆ ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ತಮ್ಮ ಅವಗಾಹನೆಗೆ ಹಾಗೂ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಸಲ್ಲಿಸಲಾಗುವುದೆಂದು ಜಂಟಿ ಸಾರಿಗೆ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರು ಉಲ್ಲೇಖಿತ ಪತ್ರದಲ್ಲಿ ವರದಿಯನ್ನು ಸಲ್ಲಿಸಿರುತ್ತಾರೆ.

ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಗಳು 1957ರ ನಿಯಮ-10(3)ರ ಅಡಿಯಲ್ಲಿ ಈ ಪ್ರಕರಣದ ಕೆಳಕಂಡ ದಾಖಲೆಗಳನ್ನು ಪರಿಶೀಲಿಸಿದೆ:-
> ಜಂಟಿ ಸಾರಿಗೆ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರ ಪತ್ರ ಸಂಖ್ಯೆ: ಜಂಸಾಆ/ಕಲ/ ಸಿಬ್ಬಂದಿ/2025-26, ದಿನಾಂಕ: 09-06-2025.

ಸದರಿ ದಾಖಲೆಗಳಿಂದ ಶ್ರೀ ರವಿ ತಾವರಖೇಡ, ದ್ವಿತೀಯ ದರ್ಜೆ ಸಹಾಯಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬಳ್ಳಾರಿ [ಮೂಲ ಕಛೇರಿ: ಪ್ರಾ.ಸಾ.ಕ, ಧಾರವಾಡ (ಪೂರ್ವ)] ಇವರು ಸರ್ಕಾರಕ್ಕೆ ಜಮೆ ಮಾಡಬೇಕಾಗಿದ್ದ ರಾಜಸ್ವವನ್ನು ಜಮೆ ಮಾಡದೇ ದುರುಪಯೋಗವಾಗಲು ಕಾರಣರಾಗಿ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಆದ್ದರಿಂದ ಸದರಿ ನೌಕರರು ಅವರ ವಿರುದ್ಧದ ಆರೋಪಗಳ ಬಗ್ಗೆ ಸುಗಮ ತನಿಖೆಗೆ ಅಡ್ಡಿ ಉಂಟುಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಸಾಕ್ಷಿ/ ಪುರಾವೆಗಳನ್ನು ನಾಶಗೊಳಿಸುವ ಸಾಧ್ಯತೆಗಳಿರುವುದರಿಂದ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಲೀನ್ ಅನ್ನು ಕೂಡ ವರ್ಗಾಯಿಸುವುದು ಸೂಕ್ತವೆಂದು ಭಾವಿಸಿ, ಮೇಲೆ ವಿವರಿಸಿರುವ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಕಂಡ ಆದೇಶ ಹೊರಡಿಸಿದ್ದೇನೆ.
ಆದೇಶ ಸಂಖ್ಯೆ: ಸಾಆ/ಸಿಬ್ಬಂದಿ-8/ವೈವ-33/2025-26, ದಿನಾಂಕ: 09-06-2025

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ವಸ್ತುಸ್ಥಿತಿ ಹೀಗಿರುವಾಗ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 10(3) ರ ಪಕಾರ ಪರಿಶೀಲಿಸಲಾಗಿರುವ ದಾಖಲೆಗಳಿಂದ, ಸದರಿ ನೌಕರರು ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮಗಳು, 2021ರ ನಿಯಮ-3(1)(i) (ii)(iii), ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಹಾಗೂ ನೌಕರರು ಕರ್ತವ್ಯ ಲೋಪ ಎಸಗಿರುವುದು  ಮನವರಿಕೆಯಾಗಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ-10(1)(ಸಿ) ಮತ್ತು (ಡಿ) ರಡಿಯಲ್ಲಿ ಪುದತ್ತವಾದ ಅಧಿಕಾರವನ್ನು ಚಲಾಯಿಸಿ, ಯೋಗೀಶ್ ಎ.ಎಂ, ಭಾ.ಆ.ಸೇ., ಸಾರಿಗೆ ಆಯುಕ್ತರು ಮತ್ತು ಸಕ್ಷಮ ಪ್ರಾಧಿಕಾರಿಯಾದ ನಾನು, ಶ್ರೀ ರವಿ ತಾವರಖೇಡ, ದ್ವಿತೀಯ ದರ್ಜೆ ಸಹಾಯಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬಳ್ಳಾರಿ [ಮೂಲ ಕಛೇರಿ: ಪ್ರಾ.ಸಾ.ಕ, ಧಾರವಾಡ (ಪೂರ್ವ) ಇವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಹುದ್ದೆಯ ಲೀನ್ ಅನ್ನು ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಕಛೇರಿಯಿಂದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ರಾಮದುರ್ಗ ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಸ್ಥಳಾಂತರಿಸಿದ್ದೇನೆ.

ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಸಂಬಂಧಪಟ್ಟ ಪ್ರಾಧಿಕಾರಿಯ ಅನುಮತಿ ಇಲ್ಲದೇ ಅವರು ಕೇಂದ್ರಸ್ಥಾನವನ್ನು ಬಿಟ್ಟು ತೆರಳುವಂತಿಲ್ಲವೆಂದು ಸೂಚಿಸಿದ್ದಾರೆ.

 

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: AI-ಸಕ್ರೀಯಗೊಳಿಸಿದ ಲಘು ಮೆಷಿನ್ ಗನ್ ಪರೀಕ್ಷೆ ಯಶಸ್ವಿ | AI-enabled light machine guns

ಜೂನ್.9ರಿಂದ ದ್ವಿತೀಯ PUC ಪರೀಕ್ಷೆ-3 ಆರಂಭ: BMTC ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

Share. Facebook Twitter LinkedIn WhatsApp Email

Related Posts

SHOCKING : ಉಪನ್ಯಾಸಕನಿಂದ ಅಪಹಾಸ್ಯ : ಬೆಂಗಳೂರಲ್ಲಿ `ಡೆಂಟಲ್ ವಿದ್ಯಾರ್ಥಿನಿ’ ಆತ್ಮಹತ್ಯೆಗೆ ಶರಣು.!

10/01/2026 8:18 AM1 Min Read

SHOCKING : ಬೆಂಗಳೂರಿನಲ್ಲಿ `ಆಘಾತಕಾರಿ ಕೃತ್ಯ’ : ಹಾಡಹಗಲೇ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ‘ಡೆಲಿವರಿ ಬಾಯ್’.!

10/01/2026 7:48 AM1 Min Read

SHOCKING : ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: `ಡೆಲಿವರಿ ಬಾಯ್’ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ | Watch Video

10/01/2026 7:34 AM1 Min Read
Recent News

ವಾಹನಗಳಲ್ಲಿ ವಿ2ವಿ ಸಂವಹನ ಸಾಧನಗಳನ್ನು ಕಡ್ಡಾಯಗೊಳಿಸಲಿರುವ ಕೇಂದ್ರ ಸರ್ಕಾರ

10/01/2026 9:12 AM

ಗ್ರೀನ್ ಲ್ಯಾಂಡ್ ಅನ್ನು ‘ಕಠಿಣ ಮಾರ್ಗದಲ್ಲಿ’ ತೆಗೆದುಕೊಳ್ಳುವುದಾಗಿ ಟ್ರಂಪ್ ಬೆದರಿಕೆ !

10/01/2026 9:08 AM

SHOCKING : ಹೃದಯವಿದ್ರಾವಕ ಘಟನೆ : 10 ತಿಂಗಳ ಮಗುವಿಗೆ ವಿಷ ಕುಡಿಸಿ, ನೇಣುಬಿಗಿದುಕೊಂಡು ತಾಯಿ ಆತ್ಮಹತ್ಯೆ.!

10/01/2026 9:00 AM

BREAKING : ಭಾರತಕ್ಕೆ ವೆನೆಜುವೆಲಾದ ತೈಲ ರಪ್ತು ಮಾಡಲು ಅಮೆರಿಕ ಸರ್ಕಾರದಿಂದ ಗ್ರೀನ್ ಸಿಗ್ನಲ್.!

10/01/2026 8:51 AM
State News
KARNATAKA

SHOCKING : ಉಪನ್ಯಾಸಕನಿಂದ ಅಪಹಾಸ್ಯ : ಬೆಂಗಳೂರಲ್ಲಿ `ಡೆಂಟಲ್ ವಿದ್ಯಾರ್ಥಿನಿ’ ಆತ್ಮಹತ್ಯೆಗೆ ಶರಣು.!

By kannadanewsnow5710/01/2026 8:18 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾಗಿರುವ ಘಟನೆ ವರದಿಯಾಗಿದೆ. ಬೆಂಗಳೂರು…

SHOCKING : ಬೆಂಗಳೂರಿನಲ್ಲಿ `ಆಘಾತಕಾರಿ ಕೃತ್ಯ’ : ಹಾಡಹಗಲೇ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ‘ಡೆಲಿವರಿ ಬಾಯ್’.!

10/01/2026 7:48 AM

SHOCKING : ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: `ಡೆಲಿವರಿ ಬಾಯ್’ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ | Watch Video

10/01/2026 7:34 AM

ALERT : ಪುರುಷರೇ ಗಮನಿಸಿ : 30 ವರ್ಷದ ಮೇಲೆ ತಪ್ಪದೇ ಈ 8 `ಆರೋಗ್ಯ ಪರೀಕ್ಷೆ’ಗಳನ್ನು ಮಾಡಿಸಿಕೊಳ್ಳಲೇಬೇಕು.!

10/01/2026 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.