Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಧುನಿಕ ಯುದ್ಧಗಳಿಗೆ ಯಾವುದೇ ಕಾಲಮಿತಿ ಇಲ್ಲ – ವಿಸ್ತೃತ ಸಂಘರ್ಷಗಳಿಗೆ ಭಾರತ ಯುದ್ಧಕ್ಕೆ ಸಿದ್ಧವಾಗಿರಬೇಕು: ರಾಜನಾಥ್ ಸಿಂಗ್

27/08/2025 1:55 PM

ನಾಳೆಯಿಂದ ‘K-SET’ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ|K-SET 2025

27/08/2025 1:51 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ

27/08/2025 1:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » RCB ಗೆದ್ದ ನಂತ್ರ ಮೆರವಣಿಗೆಗೆ ಅವಕಾಶ ನೀಡುವಂತೆ ಬಿಜೆಪಿ, ಜೆಡಿಎಸ್ ಕೇಳಿ, ಈಗ ಯೂಟರ್ನ್: ಡಿಕೆ ಸುರೇಶ್ ಕಿಡಿ
KARNATAKA

RCB ಗೆದ್ದ ನಂತ್ರ ಮೆರವಣಿಗೆಗೆ ಅವಕಾಶ ನೀಡುವಂತೆ ಬಿಜೆಪಿ, ಜೆಡಿಎಸ್ ಕೇಳಿ, ಈಗ ಯೂಟರ್ನ್: ಡಿಕೆ ಸುರೇಶ್ ಕಿಡಿ

By kannadanewsnow0909/06/2025 2:48 PM

ಬೆಂಗಳೂರು: “ಆರ್ಸಿಬಿ ಗೆದ್ದ ನಂತರ ಬಿಜೆಪಿ ಹಾಗೂ ದಳದ ನಾಯಕರು ತಂಡದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಎಕ್ಸ್ (ಟ್ವೀಟ್) ಮಾಡಿದ್ದರು. ಆದರೆ ಇಂದು ವರಸೆ ಬದಲಾಯಿಸಿದ್ದಾರೆ. ಬಿಜೆಪಿ ಯೂ ಟರ್ನ್ ಮಾಡುವುದು ಹೊಸದೇನಲ್ಲ” ಎಂದು ನಿಕಟಪೂರ್ವ ಸಂಸದ ಡಿ.ಕೆ.ಸುರೇಶ್ ಅವರು ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಸೋಮವಾರ ಉತ್ತರಿಸಿದರು.

ಬಿಜೆಪಿಯವರು ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಎರಡೂ ಪಕ್ಷಗಳು ಮೆರವಣಿಗೆಗೆ ಒತ್ತಾಯ ಮಾಡಿದ್ದರು. ಕ್ರೀಡಾ ಅಭಿಮಾನಿಗಳಿಗೆ ಅವಮಾನ ಮಾಡುತ್ತಿದ್ದೀರಿ, ನಿಮಗೆ ಮೆರವಣಿಗೆ ನಡೆಸಲು ಆಗುವುದಿಲ್ಲವೇ ಎಂದು ಕೇಳಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಇದೇ ಪ್ರವೃತ್ತಿ ಹೊಂದಿದ್ದಾರೆ. ಜನ ಅವರಿಗೆ ಬಹುಮತ ನೀಡಿಲ್ಲ. ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಆಗಿರುವ ಘೋರ ದುರಂತಗಳ ಪಟ್ಟಿ ನೀಡುತ್ತೇವೆ. ಬಿಜೆಪಿ ನಾಯುಕರಿಗೆ ನೈತಿಕತೆ ಇದ್ದರೆ ಅವರು ಮೊದಲು ರಾಜಿನಾಮೆ ನೀಡಲಿ” ಎಂದು ಹೇಳಿದರು.

ಮುಂಬೈ ದಾಳಿಯಾದಾಗ ಮನಮೋಹನ್ ಸಿಂಗ್ ಅವರು ರಾಜಿನಾಮೆ ನೀಡಿದ್ದರೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಈ ಘಟನೆ ನಂತರ ವಿಲಾಸ್ ರಾವ್ ದೇಶ್ಮುಖ್ ಅವರು ರಾಜಿನಾಮೆ ನೀಡಿದ್ದರು. ಇದನ್ನು ಕುಮಾರಸ್ವಾಮಿ ಅವರು ಮರೆತು ಹೋಗಿದ್ದಾರೆ. ಇವರಿಗೆ ಡಿ.ಕೆ.ಶಿವಕುಮಾರ್ ಅವರನ್ನು ನೆನಪಿಸಿಕೊಳ್ಳದೆ ಊಟ, ನಿದ್ದೆ ಏನೂ ಆಗುವುದಿಲ್ಲ. ಅವರು ಮೊದಲು ಆರೋಗ್ಯದ ಬಗ್ಗೆ ಗಮನವಿಡಲಿ, ಈ ರಾಷ್ಟ್ರದ ಜನರ ಸೇವೆ ಮಾಡಲಿ ಎಂದು ಮನವಿ ಮಾಡುತ್ತೇನೆ” ಎಂದರು.

ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ಳುತ್ತಾನೆ ಎನ್ನುವ ಕುಮಾರಸ್ವಾಮಿ ಪ್ರತ್ಯುತ್ತರದ ಬಗ್ಗೆ ಕೇಳಿದಾಗ, “ಎಲ್ಲರ ಆರೋಗ್ಯವನ್ನು ದೇವರೇ ನೋಡಿಕೊಳ್ಳುವುದು. ಮಂಡ್ಯದ ಜನರ ಆಶೀರ್ವಾದ ಇರಬಹುದು ಕರ್ನಾಟಕದ ಜನರ ಹಾರೈಕೆ ಅಲ್ಲವಲ್ಲ. ಅವರು ಖುಷಿಯಾಗಿದ್ದರೆ ನಮಗೆ ಸಂತೋಷ” ಎಂದು ಹೇಳಿದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐಎ ಗೆ ವಹಿಸಿರುವ ಬಗ್ಗೆ ಕೇಳಿದಾಗ, “ನಮ್ಮ ಪೊಲೀಸರು ಸಮರ್ಥರಿದ್ದಾರೆ. ಬಿಜೆಪಿಯವರು ಉನ್ನತ ತನಿಖೆಗೆ ಒತ್ತಾಯಿಸಿದ ಅನೇಕ ಪ್ರಕರಣಗಳನ್ನು ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಿಬಿಐಗೆ ನೀಡಿದೆ. ಇದರ ಫಲಿತಾಂಶ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕರಾವಳಿ ಭಾಗದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಸರಿಯಲ್ಲ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ” ಎಂದರು.

ಹೈಕಮಾಂಡ್ ಕರೆ ಮೇರೆಗೆ ಡಿ.ಕೆ.ಶಿವಕುಮಾರ್ ಅವರು ದೆಹಲಿ ಭೇಟಿ ನೀಡಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, “ಸತ್ಯಕ್ಕೆ ದೂರವಾದ ಮಾತನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಇದರಲ್ಲಿ ಯಾವುದೇ ಸತ್ಯವಿಲ್ಲ. ಬೆಂಗಳೂರಿನ ಕಸ ವಿಲೇವಾರಿಗೆ ವಿಚಾರವಾಗಿ ಟೆಂಡರ್ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರು ದೆಹಲಿಯಲ್ಲಿ ಇರುವ ಕಸ ವಿಲೇವಾರಿ ಬಗ್ಗೆ ಇರುವ ಹೊಸ ತಂತ್ರಜ್ಞಾನ ವೀಕ್ಷಿಸಲು ಬಿಬಿಎಂಪಿಯ 15 ಜನ ಅಧಿಕಾರಿಗಳ ತಂಡದ ಜೊತೆ ತೆರಳಿದ್ದಾರೆ. ಹೊಸ ರಸ್ತೆ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆಸಲು ದೆಹಲಿಯ ನಗರಾಭಿವೃದ್ದಿ ಇಲಾಖೆಯ ಜೊತೆ ಸಭೆ ನಡೆಸಲು ತಡರಳಿದ್ದಾರೆ” ಎಂದು ಹೇಳಿದರು.

“ಹೈಕಮಾಂಡ್ ಭೇಟಿ ಮಾಡಬೇಕು ಎಂದು ಹೇಳಿಲ್ಲ. ಶಿವಕುಮಾರ್ ಅವರು ದೆಹಲಿಗೆ ಹೋದಂತಹ ಸಂದರ್ಭದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸುವುದು ಸರ್ವೇ ಸಾಮಾನ್ಯ. ತಿಂಗಳಿಗೆ ಎರಡು ಬಾರಿಯಾದರೂ ದೆಹಲಿಗೆ ಭೇಟಿ ನೀಡುತ್ತಾರೆ. ಪಕ್ಷದ ಅಧ್ಯಕ್ಷರಾಗಿ ಅವರಿಗೂ ಬೇರೆ, ಬೇರೆ ಕೆಲಸಗಳು ಇರುತ್ತವೆ. ನನಗೆ ಇರುವ ಮಾಹಿತಿ ಪ್ರಕಾರ ಮಾಧ್ಯಮಗಳಲ್ಲಿ ಬರುತ್ತಿರುವ ಮಾತು ಸುಳ್ಳು” ಎಂದು ತಿಳಿಸಿದರು.

ತುಮಕೂರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಬೇಕು ಎನ್ನುವ ಗೃಹಸಚಿವ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅದು ಸರ್ಕಾರದ ತೀರ್ಮಾನ. ಅವರು ಸರ್ಕಾರದ ಹಿರಿಯ ಸಚಿವರು, ಸಚಿವ ಸಂಪುಟದಲ್ಲಿ, ಮುಖ್ಯಮಂತ್ರಿಗಳ ಬಳಿ ಮಾತನಾಡಿ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಸ್ವಾಗತ ಮಾಡುತ್ತೇವೆ” ಎಂದರು.

ನಾಮನಿರ್ದೇಶಿತ ವಿಧಾನಪರಿಷತ್ ಸದಸ್ಯರ ಪಟ್ಟಿಯನ್ನು ಎಐಸಿಸಿ ತಡೆ ಹಿಡಿದಿದೆ ಎನ್ನುವ ಬಗ್ಗೆ ಕೇಳಿದಾಗ, “ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಎಐಸಿಸಿ ವಿಚಾರ ನನಗೆ ಗೊತ್ತಿಲ್ಲ. ಪಕ್ಷದ ಹಿರಿಯ ಮುಖಂಡರು ಇದನ್ನು ಗಮನಿಸುತ್ತಾರೆ” ಎಂದರು.

ಜೂನ್.9ರಿಂದ ದ್ವಿತೀಯ PUC ಪರೀಕ್ಷೆ-3 ಆರಂಭ: BMTC ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

Watch Video: ಕೇರಳದ ಕರಾವಳಿಯಲ್ಲಿ ಸಿಂಗಾಪುರದ ಹಡಗಿನಲ್ಲಿ ಭೀಕರ ಸ್ಪೋಟ | Kerala coast

Share. Facebook Twitter LinkedIn WhatsApp Email

Related Posts

ನಾಳೆಯಿಂದ ‘K-SET’ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ|K-SET 2025

27/08/2025 1:51 PM4 Mins Read

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ

27/08/2025 1:46 PM1 Min Read

ನಾಡ ಹಬ್ಬ `ದಸರಾ’ ಎಲ್ಲ ಧರ್ಮದವರಿಗೂ ಸೇರಿದ್ದು : DCM ಡಿ.ಕೆ.ಶಿವಕುಮಾರ್ ಸ್ಪಷ್ಟನೆ.!

27/08/2025 1:31 PM1 Min Read
Recent News

ಆಧುನಿಕ ಯುದ್ಧಗಳಿಗೆ ಯಾವುದೇ ಕಾಲಮಿತಿ ಇಲ್ಲ – ವಿಸ್ತೃತ ಸಂಘರ್ಷಗಳಿಗೆ ಭಾರತ ಯುದ್ಧಕ್ಕೆ ಸಿದ್ಧವಾಗಿರಬೇಕು: ರಾಜನಾಥ್ ಸಿಂಗ್

27/08/2025 1:55 PM

ನಾಳೆಯಿಂದ ‘K-SET’ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ|K-SET 2025

27/08/2025 1:51 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ

27/08/2025 1:46 PM

BIG UPDATE : ಜಮ್ಮು & ಕಾಶ್ಮೀರದ `ವೈಷ್ಣೋ ದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ : ಮೃತರ ಸಂಖ್ಯೆ 36 ಕ್ಕೆ ಏರಿಕೆ |WATCH VIDEO

27/08/2025 1:36 PM
State News
KARNATAKA

ನಾಳೆಯಿಂದ ‘K-SET’ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ|K-SET 2025

By kannadanewsnow5727/08/2025 1:51 PM KARNATAKA 4 Mins Read

ಬೆಂಗಳೂರು : ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ…

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ

27/08/2025 1:46 PM

ನಾಡ ಹಬ್ಬ `ದಸರಾ’ ಎಲ್ಲ ಧರ್ಮದವರಿಗೂ ಸೇರಿದ್ದು : DCM ಡಿ.ಕೆ.ಶಿವಕುಮಾರ್ ಸ್ಪಷ್ಟನೆ.!

27/08/2025 1:31 PM
vidhana soudha

ರಾಜ್ಯ ಸರ್ಕಾರದಿಂದ `ಹಿಂದುಳಿದ ವರ್ಗದವರಿಗೆ ಗುಡ್ ನ್ಯೂಸ್’ : ಶಿಕ್ಷಣ, ವಸತಿ ಸೇರಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

27/08/2025 1:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.