ಚಿಕ್ಕಬಳ್ಳಾಪುರ : ವಿಕೇಂಡ್ ಹಿನ್ನೆಲೆಯಲ್ಲಿ ನಂದಿಗಿರಿಧಾಮಕ್ಕೆ ಪ್ರವಾಸಿಗರು ಹರಿದುಬಂದಿದ್ದು, ಪೊಲೀಸ್ ಚೆಕ್ ಪೋಸ್ಟ್ ನಿಂದ ಬೆಟ್ಟದ ಕ್ರಾಸ್ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ನಂದಿಗಿರಿಧಾಮಕ್ಕೆ ಸೂರ್ಯೋದಯ ನೋಡಲು ನೂರಾರು ಕಾರು, ಬೈಕ್ ಗಳಲ್ಲಿ ಪ್ರವಾಸಿಗರು ಬಂದಿದ್ದಾರೆ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ನಂದಿ ಬೆಟ್ಟದ ಮಾರ್ಗ ಮಧ್ಯೆ ಪ್ರವಾಸಿಗರು ಸಿಲುಕಿ ಪರದಾಟ ನಡೆಸಿದ್ದಾರೆ.
ಸದ್ಯ ನಂದಿಗಿರಿಧಾಮದಲ್ಲಿ ಟ್ರಾಫಿಕ್ ಜಾಮ್, ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.