ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಾವಣೆ ಮತ್ತು ಆಯ್ಕೆ ಕುರಿತ ಸೂಚನೆಗಳಿಗೆ ಮಾರ್ಪಾಡು ಮಾಡುವ ಬಗ್ಗೆ.
ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಮೂಲಕ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಉಲ್ಲೇಖಿತ ಸುತ್ತೋಲೆಯನ್ವಯ ನೋಂದಾವಣೆ ಮತ್ತು ಆಯ್ಕೆ ಕುರಿತು ಸೂಚನೆಗಳನ್ನು ನೀಡಲಾಗಿದೆ. ಆದರೆ, ತಾಂತ್ರಿಕ ತೊಂದರೆಯಿಂದಾಗಿ ನಿಗದಿತ ಅವಧಿಯೊಳಗೆ ನೌಕರರು ನೋಂದಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ ಸಾಧ್ಯವಾಗದೇ ಇರುವುದರಿಂದ ಕಾಲಾವಕಾಶದ ಅವಶ್ಯಕತೆ ಇರುತ್ತದೆ. ಆದ್ದರಿಂದ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಮಾರ್ಪಾಡು ಸುತ್ತೋಲೆ ಹೊರಡಿಸಲು ತಮ್ಮಲ್ಲಿ ಕೋರಿದೆ.
ಮಾರ್ಪಾಡು ಮಾಡಬೇಕಾಗಿರುವ ಸೂಚನೆಗಳು
ಸರ್ಕಾರಿ ನೌಕರ ಯೋಜನೆಗೆ ಒಳಪಡಲು ಆಯ್ಕೆಯನ್ನು ವ್ಯಕ್ತಪಡಿಸಲು ಉದ್ದೇಶಿಸಿದಲ್ಲಿ ದಿ:20-05-2025ರೊಳಗೆ | ಘೋಷಣೆಯನ್ನು ತನ್ನ ಮೇಲಾಧಿಕಾರಿಗಳ ಮೂಲಕ ಡಿ.ಡಿ.ಓ. ಗಳಿಗೆ ಸಲ್ಲಿಸತಕ್ಕದ್ದು. ಇಂತಹ ಘೋಷಣೆಯನ್ನು ಸಲ್ಲಿಸುವ ನೌಕರರಿಂದ ಯೋಜನೆಯ ವಂತಿಕೆಯನ್ನು ລຳ-20250 ಮಾಹೆಯಿಂದ ಸ್ವಯಂಚಾಲಿತವಾಗಿ ಹೆಚ್.ಆರ್.ಎಂ.ಎಸ್.ನಲ್ಲಿ ಕಟಾಯಿಸಲಾಗುವುದು.
ಸರ್ಕಾರಿ ನೌಕರ ಯೋಜನೆಗೆ ಒಳಪಡಲು ಆಯ್ಕೆಯನ್ನು ವ್ಯಕ್ತಪಡಿಸಲು ಉದ್ದೇಶಿಸಿದಲ್ಲಿ ದಿ:20-06-2025ರೊಳಗೆ ಘೋಷಣೆಯನ್ನು ತನ್ನ ಮೇಲಾಧಿಕಾರಿಗಳ ಮೂಲಕ ಡಿ.ಡಿ.ಓ. ಗಳಿಗೆ ಸಲ್ಲಿಸತಕ್ಕದ್ದು. ಇಂತಹ ಘೋಷಣೆಯನ್ನು ಸಲ್ಲಿಸುವ ನೌಕರರಿಂದ ಯೋಜನೆಯ ವಂತಿಕೆಯನ್ನು ಜೂನ್-2025ರ ಮಾಹೆಯಿಂದ ಸ್ವಯಂಚಾಲಿತವಾಗಿ ಹೆಚ್.ಆರ್.ಎಂ.ಎಸ್.ನಲ್ಲಿ ಕಟಾಯಿಸಲಾಗುವುದು ಎಂದು ಮಾರ್ಪಾಡು ಮಾಡುವುದು.