ಶಾಂಗೈ: ಚೀನಾದ ಪೂರ್ವ ಶಾಂಡೊಂಗ್ ಪ್ರಾಂತ್ಯದ ರಾಸಾಯನಿಕ ಸ್ಥಾವರದ ಕಾರ್ಯಾಗಾರದಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ಸ್ಫೋಟದ ನಂತರ ತುರ್ತು ತಂಡಗಳು ಗಾವೋಮಿ ನಗರದ ರಾಸಾಯನಿಕ ಕಾರ್ಖಾನೆಗೆ ಧಾವಿಸಿವೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಫೋಟದ ವರದಿಯನ್ನು ಸ್ವೀಕರಿಸಿದ ತಕ್ಷಣ, ತುರ್ತು ನಿರ್ವಹಣಾ ಸಚಿವಾಲಯವು ಸ್ಥಳೀಯ ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು ಅಗ್ನಿಶಾಮಕ ದಳದವರು, ವೈದ್ಯಕೀಯ ತಜ್ಞರು ಮತ್ತು ಕೆಲಸದ ಸುರಕ್ಷತಾ ತಜ್ಞರು ಸೇರಿದಂತೆ ವಿಶೇಷ ಸಿಬ್ಬಂದಿ ಮತ್ತು ಕಾರ್ಯ ತಂಡವನ್ನು ತಕ್ಷಣವೇ ರವಾನಿಸಿತು ಎಂದು ಅದು ತಿಳಿಸಿದೆ. ಒಟ್ಟು 232 ಸ್ಥಳೀಯ ಅಗ್ನಿಶಾಮಕ ದಳದವರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.