ಮೈಸೂರು: ರೈಲ್ವೆ ಕಾಮಗಾರಿ ಹಿನ್ನಲೆಯಲ್ಲಿ ಜೂ.8, 2025ರಂದು ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲು ಹಾಗೂ ಮೈಸೂರು-ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ರದ್ದು ಗೊಳಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಶ್ರೀಧರ್ ಅವರು ಮೈಸೂರು ರೈಲ್ವೆ ವಿಭಾಗದ ಕೃಷ್ಣರಾಜನಗರ ಮತ್ತು ಹೊಸ ಅಗ್ರಹಾರ ರೈಲು ನಿಲ್ದಾಣಗಳ ನಡುವೆ ನಡೆಯಲಿರುವ ಸೇತುವೆ ನಿರ್ವಹಣಾ ಕಾರ್ಯದ ಕಾರಣ, ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
ಸಂಪೂರ್ಣ ರದ್ದು
ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಜೂನ್ 8, 2025 ರಂದು ಸಂಪೂರ್ಣವಾಗಿ ರದ್ದಾಗಲಿದೆ.
ಭಾಗಶಃ ರದ್ದು
ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಜೂನ್ 8, 2025 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆಯಿಂದ ಶಿವಮೊಗ್ಗ ಟೌನ್‌ವರೆಗೆ ಮಾತ್ರ ಸಂಚರಿಸಲಿದೆ.