ದಾವಣಗೆರೆ : ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮರುಕುಂಟೆ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾಗಲೇ ರಕ್ತ ವಾಂತಿ ಮಾಡಿಕೊಂಡು ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾರ್ಮಿಕ ಕೆಂಚಪ್ಪ(52) ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾನೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಕಾಮಗಾರಿ ಕೆಲಸ ಮಾಡುತ್ತಿದ್ದಾಗ ರಕ್ತ ವಾಂತಿಮಾಡಿಕೊಂಡು ಸಾವನ್ನಪ್ಪಿದ್ದಾನೆ.
ಮೃತ ಕೆಂಚಪ್ಪ ಜಗಳೂರಿನ ಘಲ್ಲಾಘಟ್ಟೆ ನಿವಾಸಿಯಾಗಿದ್ದು, ಕೆರೆ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಆತ ರಕ್ತ ವಾಂತಿಮಾಡಿಕೊಂಡು ಮೃತಪಟ್ಟಿದ್ದಾನೆ.