ಬೆಂಗಳೂರು: ರಾಜ್ಯದ ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ, ಕ್ಯಾನ್ಸರ್ ಚಿಕಿತ್ಸೆಗಾಗಿ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಸಮೀಪದ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಲಭವಾಗಿ, ಗುಣಮಟ್ಟದ ಕೀಮೋಥೇರಪಿ ಮತ್ತು ಬೆಂಬಲ ಸೇವೆಗಳನ್ನು ಒದಗಿಸುವ ಉದೇಶದಿಂದ SAST ನೊಂದಯಿತ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ನಂತರ ಮುಂದುವರೆದ ಕೀಮೋಥೆರಪಿ ಚಿಕಿತ್ಸೆಗಾಗಿ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಹಬ್- ಅಂಡ್-ಸ್ಟೋಕ್ ಮಾದರಿಯಲ್ಲಿ ಪ್ರಾರಂಭಿಸಲಾಗುವುದು.
ಹಿನ್ನೆಲೆ
ವಾರ್ಷಿಕವಾಗಿ ಕರ್ನಾಟಕ ರಾಜ್ಯದಲ್ಲಿ ICMR-NCRP 2023 ವರದಿಯ ಪ್ರಕಾರ ಸುಮಾರು 70,000 ಹೊಸ ಕ್ಯಾನ್ಸರ್ ಪ್ರಕರಣಗಳನ್ನು ವರದಿಯಾಗುತ್ತಿದೆ.
ಪ್ರಮುಖ ಕ್ಯಾನ್ಸರ್‌ಗಳು: ಸ್ತನ ಕ್ಯಾನ್ಸರ್ (18%), ಗರ್ಭಕಂಠದ ಕ್ಯಾನ್ಸರ್ (14%), ಬಾಯಿ ಕ್ಯಾನ್ಸರ್ (12%), ಶ್ವಾಸಕೋಶ ಕ್ಯಾನ್ಸರ್ (8%), ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (6%).
ಬಾಯಿಯ ಕ್ಯಾನ್ಸರ್ ಸಂಭವ: 12 ಪುಕರಣಗಳು /1 ಲಕ್ಷ ಜನಸಂಖ್ಯೆಗೆ
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಂಭವ: 35 ಪ್ರಕರಣಗಳು /1 ಲಕ್ಷ ಮಹಿಳೆಯರ ಜನಸಂಖ್ಯೆಗೆ. ಗರ್ಭಕಂಠದ ಕ್ಯಾನ್ಸರ್ ಸಂಭವ: 15 ಪ್ರಕರಣಗಳು /1 ಲಕ್ಷ ಮಹಿಳೆಯರ ಜನಸಂಖ್ಯೆಗೆ.
ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿ, ಬೆಳಗಾವಿ ಮತ್ತು ಮೈಸೂರು ನಗರಗಳಿಗೆ ಕೀಮೋಥೇರಪಿ ಸೇವೆಗಳಿಂದಾಗಿ ಶೇಕಡಾ 60% ರಷ್ಟು ರೋಗಿಗಳು 100 ಕಿ.ಮೀ.ಗಿಂತ ಹೆಚ್ಚು ಪ್ರಯಾಣಿಸುತ್ತಾರೆ.
ಪುನರಾವರ್ತಿತ ಭೇಟಿಗಳ ವೆಚ್ಚ / ಲಾಜಿಸ್ಟಿಕ್ಸ್ ಕಾರಣದಿಂದಾಗಿ ಹೆಚ್ಚಿನ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. (ಶೇಕಡಾ 30% ರಷ್ಟು).
ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳ (DCCC) ಅವಶ್ಯಕತೆ:
ಕ್ಯಾನ್ಸರ್ ಆರೈಕೆಯಲ್ಲಿ ನಗರ-ಗ್ರಾಮೀಣ ಅಸಮಾನತೆಯನ್ನು ಕಡಿಮೆ ಮಾಡುವುದು. ಪರಿಣಾಮಕಾರಿ ಆರೈಕೆ ಮತ್ತು ಸ್ಥಿರ ರೋಗಿಗಳಿಗೆ ಪ್ರಯಾಣ/ಆಸ್ಪತ್ರೆ ವೆಚ್ಚವನ್ನು ಕಡಿಮೆ ಮಾಡುವುದು.
ಚಿಕಿತ್ಸೆಯ ಮುಂದುವರಿಕೆ ತ್ಯಜಿಸುವುದನ್ನು ತಡೆಯುವುದು.
ಹಬ್ ಮತ್ತು ಸೆಕ್ ಮಾದರಿ:
ಡೇ ಕೇರ್ ಕೀಮೋಥೆರಪಿ ಕೇಂದ್ರಗಳಿಗಾಗಿ ಹಬ್-ಅಂಡ್-ಸ್ಟೋಕ್ ಮಾದರಿಯಲ್ಲಿ SAST ನೊಂದಯಿತ ತೃತೀಯ ಹಂತದ ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಸ್ಪಷ್ಟ ಜವಾಬ್ದಾರಿಗಳನ್ನು ವ್ಯಾಖ್ಯಾನಿಸುವ ಮೂಲಕ ಕ್ಯಾನ್ಸರ್ ಆರೈಕೆಯನ್ನು ಖಚಿತಪಡಿಸುವುದು, ಕರ್ನಾಟಕದಲ್ಲಿ, ಇದನ್ನು ತೃತೀಯ ಹಂತದ ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳ ನಡುವಿನ ಒಪ್ಪಂದದ ಮೂಲಕ ಸ್ಥಾಪಿಸಲಾಗಿದೆ. ಪ್ರಸ್ತಾವಿತ ಪಟ್ಟಿಯನ್ನು ಅನುಬಂಧ 1 ರಲ್ಲಿ ಲಗತ್ತಿಸಲಾಗಿದೆ.
ಹಬ್ ಆಸ್ಪತ್ರೆಗಳ ಪಾತ್ರ (ತೃತೀಯ ಕ್ಯಾನ್ಸರ್ ಕೇಂದ್ರಗಳು):-
ಕ್ಲಿನಿಕಲ್ ಸೇವೆಗಳು: ಸಂಕೀರ್ಣ ಚಿಕಿತ್ಸಾ ವಿತರಣೆ, ಕೀಮೋಥೆರಪಿಯನ್ನು ನಿರ್ವಹಿಸುವುದು, ಚಿಕಿತ್ಸೆಗೆ ಸಂಬಂಧಿಸಿದ ತೊಡಕುಗಳನ್ನು ನಿರ್ವಹಿಸುವುದು, ವಿಶೇಷ ರೋಗನಿರ್ಣಯ ಮತ್ತು ಹಂತ, PET-CT, ಆಣಿಕ ಪ್ರೊಫೈಲಿಂಗ್ ಮತ್ತು ಸುಧಾರಿತ ಬಯಾಸ್ಸಿಗಳನ್ನು ನಡೆಸುವುದು. ಸ್ಟೋಕ್ ಕೇಂದ್ರಗಳಿಗೆ ರೋಗಶಾಸ್ತ್ರ ಮತ್ತು ವಿಕಿರಣಶಾಸ್ತ್ರ ಬೆಂಬಲವನ್ನು ಒದಗಿಸುವುದು.
ತರಬೇತಿ ನೀಡುವುದು.
ರೆಫರಲ್ ಮತ್ತು ಟೆಲಿಮೆಡಿಸಿನ್.
ಗುಣಮಟ್ಟದ ಭರವಸೆ ಮತ್ತು ಮೇಲ್ವಿಚಾರಣೆ, ಪ್ರತಿ ವಾರ Medical Oncologist ರವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೋಗಗಳ ತಪಾಸಣೆ ಮಾಡುವುದು.
ಪೋರ್ಟಲ್‌ಗಳನ್ನು ಬಳಸಿ, ಔಷಧಿಗಳನ್ನು ತಯಾರಿಸಿ, ಸೆಕ್ ಕೇಂದ್ರಗಳಿಗೆ ರವಾನಿಸುವುದು ಮತ್ತು ದಾಸ್ತಾನು ಮತ್ತು ಅಗತ್ಯ ಕೀಮೋಥೆರಪಿ ಒದಗಿಸುವುದು.
ಸ್ಪೋಕ್ ಕೇಂದ್ರಗಳ ಪಾತ್ರ (ಜಿಲ್ಲಾ ಡೇ ಕೇರ್ ಕೀಮೋಥೆರಪಿ ಘಟಕಗಳು)
ಔಷಧಿಗಳನ್ನು ರೋಗಿಯ ಆರೈಕೆ: ಕೀಮೋಥೆರಪಿ ಆಡಳಿತ, ಸಹಾಯಕ/ ಉಪಶಾಮನಕಾರಿ ಕೀಮೋ, ಪೂರ್ವ-ಕೀಮೋ ವರ್ಕಪ್, ಮೂಲಭೂತ ಪ್ರಯೋಗಾಲಯ ಪರೀಕ್ಷೆಗಳು (CBC, LFT, RFT) ಮತ್ತು ECG ಮೇಲ್ವಿಚಾರಣೆಯನ್ನು ಒದಗಿಸುವುದು.
ಹಬ್‌ನೊಂದಿಗೆ ಸಮನ್ವಯ: ರೆಫರಲ್ ವ್ಯವಸ್ಥೆ, ವಿಕಿರಣ/ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಗುರುತಿಸಿ ಮತ್ತು ಕೇಂದ್ರಗಳಿಗೆ ವರ್ಗಾಯಿಸಿ, ನೈಜ-ಸಮಯದ ರೆಫರಲ್ ಮಾಡಲಾಗುವುದು.
ಹಬ್ ಕೇಂದ್ರಗಳಿಂದ ಬಂದಂತಹ ಔಷಧಿಗಳನ್ನು ದಾಸ್ತಾನುಗಳನ್ನು ಸ್ವಿಕರಿಸಿ, ಶಿಷ್ಟಾಚಾರದ ರೀತಿ ರೋಗಿಗಳಿಗೆ ಬಳಕೆ ಮಾಡಲಾಗುವುದು.
ಬೆಂಬಲ ಸೇವೆಗಳು: ಉಪಶಾಮನಕಾರಿ ಆರೈಕೆ: ಸಮಾಲೋಚನೆ ಮತ್ತು ಡೇಟಾ ವರದಿ ಮಾಡುವುದು.
ಡೇ ಕೇರ್ ಕೀಮೋಥೆರಪಿ ಕೇಂದ್ರಗಳ ಪ್ರಯೋಜನಗಳು:
ರೋಗಿಗಳಿಗೆ:-
ಕಡಿಮೆ ಪ್ರಯಾಣ: ತಮ್ಮ ಜಿಲ್ಲೆಯೊಳಗಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.
ಕಡಿಮೆ ವೆಚ್ಚಗಳು: OOP ವೆಚ್ಚಗಳಲ್ಲಿ ಶೇಕಡಾ 40% ರಷ್ಟು ಕಡಿತ (ಅಂದಾಜು).
ಸುಧಾರಿತ ಅನುಸರಣೆ: ಸ್ಥಳೀಯ ಬೆಂಬಲ ವ್ಯವಸ್ಥೆಗಳು ಚಿಕಿತ್ಸೆಯಿಂದ ವಂಚಿತರಾಗುವ ಪ್ರಕರಣಗಳ ಕಡಿಮೆಯಾಗುವುದು.
ಆರೋಗ್ಯ ವ್ಯವಸ್ಥೆಗಾಗಿ:
ತೃತೀಯ ಹಂತದ ಆಸ್ಪತ್ರೆಗಳಲ್ಲಿ ಕಾಯ್ದಿರಿಸಿದ ರೋಗಿಗಳ ಪ್ರಮಾಣ ಕಡಿಮೆಯಾಗುವುದು. ಆರಂಭಿಕ ಪತ್ತೆ: ಜಿಲ್ಲಾ ಆಸ್ಪತ್ರೆಗಳಲ್ಲಿ ಆರಂಭಿಕ ಹಂತದಲ್ಲಿ ತಪಾಸಣೆಯನ್ನು ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದಡಿಯಲ್ಲಿ ದಾಖಲಿಸುವುದು.
ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ನೀಡಲಾಗುವ ಸೇವೆಗಳು
ಮುಂದುವರೆದ ಕೀಮೋಥೆರಪಿ ಚಿಕಿತ್ಸೆ.
ನೋವು ನಿರ್ವಹಣೆ ಚಿಕಿತ್ಸೆ,
ಅಪ್ತ ಸಮಾಲೋಚನೆ.
ಜಿಲ್ಲಾ ಆಸ್ಪತ್ರೆಗಳಿಂದ ಟೆಲಿಮೆಡಿಸಿನ್ ಮುಖಾಂತರ ಚಿಕಿತ್ಸೆ.
ಅಗತ್ಯವಿರುವ ಸಿಬ್ಬಂದಿ:
ವೈದ್ಯಕೀಯ ಆಂಕೊಲಾಜಿಸ್ಟ್ ಒಬ್ಬರು (ಭೇಟಿ)
ಕೀಮೋಥೆರಪಿ ಚಿಕಿತ್ಸೆಯಲ್ಲಿ ತರಬೇತಿ ಪಡೆದ 2 ದಾದಿಯರು.
ವೈದ್ಯರು
ಫಾರ್ಮಾಸಿ ಅಧಿಕಾರಿಗಳು
ಅಪ್ತ ಸಮಾಲೋಚಕರು
ರಾಜ್ಯದ ಈ 16 ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರ ಆರಂಭ
ಪರಮೇಶ್ವರ್ ಪ್ರಾಮಾಣಿಕರು, ಯಾವುದೇ ತಪ್ಪು ಮಾಡಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್