ಬೆಂಗಳೂರು: ಕಿರುತೆರೆ ಕಲಾವಿದ ಮನು ಹಾಗೂ ಸಹ ಕಲಾವಿದೆಯ ನಡುವಿನ ತೆರೆಮರೆಯ ಕಿತ್ತಾಟ ಬಟಾ ಬಯಲಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನು ಕರಾಳ ಮುಖ ಈ ಮೂಲಕ ಬಟಾ ಬಯಲಾಗಿದೆ. ಶಾಕಿಂಗ್ ಎನ್ನುವಂತೆ ಎತ್ಯಾಚಾರ ಎಸಗಿರುವಂತ ಮನು, ಎರಡು ಬಾರಿ ಪ್ರಗ್ನೆಂಟ್ ಮಾಡಿದ್ದಾರೆ. ಅಲ್ಲದೇ ಎರಡು ಬಾರಿ ಅಬಾಷನ್ ಕೂಡ ಮಾಡಿರೋ ಮಾಹಿತಿಯನ್ನು ಸಹ ಕಲಾವಿದೆ ತೆರೆದಿಟ್ಟಿದ್ದಾರೆ.
ಈ ಬಗ್ಗೆ ಸಹ ಕಲಾವಿದೆ, ಸಂತ್ರಸ್ತೆ ದೂರಿನಲ್ಲಿ ಮಾಹಿತಿ ನೀಡಿದ್ದು, 2018ರಲ್ಲಿ ಮನು ಹಾಗೂ ಯುವತಿ ಮಧ್ಯೆ ಪರಿಚಯವಾಗಿದೆ. ಯುವತಿಗೆ ಇದೇ ಮನು ಬಾಡಿಗೆ ಮನೆ ಹುಡುಕೊಟ್ಟಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ಕಾಮಿಡಿ ಕಿಲಾಡಿ ಶೋನಲ್ಲಿ ಮನು ಹಾಗೂ ಸಂತ್ರಸ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾಗಿ ಹೇಳಿದ್ದಾರೆ.
ಹೀಗೆ ಯುವತಿಯ ಜೊತೆಗೆ ಆಪ್ತನಾದಂತ ಕಿರುತೆರೆ ಕಲಾವಿದ ಮನು, ಮದುವೆಯಾಗಿ ಒಂದು ಮಗುವಿದ್ದರೂ ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾಗ ಸಂತ್ರಸ್ತ ಯುವತಿಯ ಮೇಲೆ ಅತ್ಯಾಚಾರ ನಡೆಸಿರೋದಾಗಿ ಆರೋಪಿಸಿದ್ದಾರೆ.
ಇನ್ನೂ ನವೆಂಬರ್ 29, 2022ರಂದು ಶಿವಮೊಗ್ಗದ ಶಿಕಾರಿಪುರದಲ್ಲಿನ ಕಾರ್ಯಕ್ರಮಕ್ಕೆ ಮನು ಹಾಗೂ ಯುವತಿ ಒಟ್ಟಾಗಿ ತೆರಳಿದ್ದಾರೆ. ಆ ಕಾರ್ಯಕ್ರಮ ಮುಗಿಸಿ ಸಂಭಾವನೆ ನೀಡೋದಕ್ಕೆ ಸಂತ್ರಸ್ತೆಯನ್ನು ರೂಂಗೆ ಮನು ಕರೆಸಿಕೊಂಡಿದ್ದಾನೆ. ಅಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿರೋದಾಗಿ ಎಫ್ಐಆರ್ ನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.
ಇದಾದ ಬಳಿಕ ಗುಟ್ಟಾಗಿ ಯುವತಿಯನ್ನು ಕಿರುತೆರೆ ಕಲಾವಿದ ಮನು ಮದುವೆಯಾಗಿದ್ದಾನೆ. ಡಿಸೆಂಬರ್.3, 2022ರಂದು ಬಲವಂತವಾಗಿ ತಾಳಿ ಕಟ್ಟಿದ್ದರಂತೆ. ಆ ಬಳಿಕ ಯುವತಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಸಂತ್ರಸ್ತ ಯುವತಿ ಎರಡು ಬಾರಿ ಪ್ರಗ್ನೆಂಟ್ ಆದಾಗಲೂ ಮನು ಗರ್ಭಪಾತ ಮಾತ್ರೆ ತಂದುಕೊಟ್ಟು ಅಬಾಷನ್ ಮಾಡಿಸಿದ್ದ ಧಾರುಣ ಘಟನೆಯನ್ನು ದೂರಿನಲ್ಲಿ ಬಿಚ್ಚಿಟ್ಟಿದ್ದಾರೆ.
ಇಷ್ಟೇ ಅಲ್ಲದೇ ತನ್ನ ಪೋನಿನಲ್ಲಿ ಸಂತ್ರಸ್ತೆಯ ಜೊತೆಗಿನ ಖಾಸಗಿ ವೀಡಿಯೋ ಮಾಡಿಕೊಂಡು, ಯಾರಿಗಾದರೂ ಹೇಳಿದ್ರೇ ಕೊಲೆ ಮಾಡೋದಾಗಿಯೂ ಬೆದರಿಕೆ ಹಾಕಿದ್ದರು. ಮನುಗೆ ಲಕ್ಷಾಂತರ ಹಣವನ್ನು ಕೇಳಿದಾಗಲೆಲ್ಲ ನೀಡಿದ್ದೇನೆ. ಹೀಗಾಗಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ದೂರಿನಲ್ಲಿ ಮನವಿ ಮಾಡಿರೋ ವಿಷಯ ಬೆಳಕಿಗೆ ಬಂದಿದೆ.
ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಸಲೀಂ ಅಧಿಕಾರ ಸ್ವೀಕಾರ, ಸಿಎಂ ಶುಭಾಶಯ
SHOCKING : ಹಾಸನದಲ್ಲಿ ಹೃದಯವಿದ್ರಾವಕ ಘಟನೆ : ಬಾತ್ರೂಂನಲ್ಲೆ ಕುಸಿದು ಬಿದ್ದು ಯುವತಿ ಸಾವು!