ಬೆಂಗಳೂರು: ಸಹ ಕಲಾವಿದೆಯೊಬ್ಬರು ಕಿರುತೆರೆ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಕಿರುತೆರೆ ನಟ ಮಡೆನೂರು ಮನುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಿರುತೆರೆ ಕಲಾವಿದ ಮಡೆನೂರು ಮನು ವಿರುದ್ಧ ಪೊಲೀಸರಿಗೆ ಸಹ ಕಲಾವಿದೆ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದರು. ಈ ದೂರಿನಲ್ಲಿ ಮಡೆನೂರು ಮನು ಎರಡು ಬಾರಿ ಅಬಾಷನ್ ಮಾಡಿಸಿದ್ದಾಗಿ ಉಲ್ಲೇಖಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ದೂರು ಆಧರಿಸಿ ಕಿರುತೆರೆ ಕಲಾವಿದ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ಮಡೆನೂರು ಮನು ವೀಡಿಯೋ ಬಿಡುಗಡೆ ಮಾಡಿದ್ದು, ನಾನು ಅವಳನ್ನು ಜೀವನ ಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಾನು ಅವಳಿಗೆ ಯಾವತ್ತೂ ಮೋಸ ಮಾಡಲ್ಲ ಎಂಬುದಾಗಿ ಹೇಳಿದ್ದಾರೆ.