ಕೊಪ್ಪಳ : ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಹತ್ಯೆಗೈದ ಆಘಾತಕಾರಿ ಘಟನೆ ಕೊಪ್ಪಳದ ಬೂದಗುಂಪ ಗ್ರಾಮದಲ್ಲಿ ನಡೆದಿದೆ.
ಬೂದಗುಂಪ ಗ್ರಾಮದಲ್ಲಿ ಶಿವಪ್ಪ ಎಂಬಾತ ಕೊಡಲಿಯಿಂದ ಕೊಚ್ಚಿ ಪತ್ನಿ ಗಂಗಮ್ಮ ದೊಣ್ಣೆ (38) ಎಂಬುವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಶಿವಪ್ಪ ಪ್ರತಿನಿತ್ಯ ಪತಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಇದರಿಂದ ನಿತ್ಯ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ಜಗಳ ತಾರಕಕ್ಕೇರಿದ್ದು, ರೊಚ್ಚಿಗೆದ್ದ ಶಿವಪ್ಪ ಪತ್ನಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿ ಆಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.