ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ(3ನೇ ಹಂತ)ಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣದ ಉದ್ದೇಶದಿಂದ ಉಚಿತ ಎಲ್.ಪಿ.ಜಿ ವಿತರಣೆ ಮಾಡಲಾಗುತ್ತದೆ.
ಉಜ್ವಲ್ ಯೋಜನೆಯಡಿ ಎಲ್.ಪಿ.ಜಿ ಸಂಪರ್ಕ ಪಡೆಯುವ ಗ್ರಾಹಕರಿಗೆ ಎರಡು ಬರ್ನರ್ ಸ್ಟೌವ್, 14.2 ಕೆ.ಜಿ ಸಿಲಿಂಡರ್ ಮತ್ತು ಎರಡು 5 ಕೆ.ಜಿ ಸಿಲಿಂಡರ್, ಒಂದು ರೆಗ್ಯುಲೇಟರ್, ಒಂದು ಸುರಕ್ಷಾ ಹೋಸ್, ಡಿ.ಜಿ.ಸಿ.ಸಿ ಬುಕ್‍ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಇದುವರೆಗೂ ಎಲ್.ಪಿ.ಜಿ ಅನಿಲ ಸಂಪರ್ಕಗಳನ್ನು ಹೊಂದಿರದ ಕುಟುಂಬದ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಎಲ್.ಪಿ.ಜಿ ವಿತರಕ ಕಂಪನಿಗೆ ಭೇಟಿ ನೀಡಿ ಸೌಲಭ್ಯವನ್ನು ಪಡೆಯಬಹುದು ಮತ್ತು ಕ್ಯೂ.ಆರ್.ಕೋಡ್ ಮೂಲಕ ಯೋಜನೆ ಮಾಹಿತಿ ಪಡೆಯಬಹುದಾಗಿದೆ.
ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಪ್ರಯೋಜನವನ್ನು ಪಡೆಯಲು ಬಯಸಿದರೆ, ನಿಮ್ಮ ಬಳಿ ಕೆಲವು ದಾಖಲೆಗಳು ಇರಬೇಕು. ನಿಮ್ಮ ಬಳಿ ಈ ಅಗತ್ಯ ದಾಖಲೆಗಳು ಇಲ್ಲದಿದ್ದರೆ, ಈ ಸಂದರ್ಭದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಬಹುದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
ಬಿಪಿಎಲ್ ಕಾರ್ಡ್
ಆಧಾರ್ ಕಾರ್ಡ್
ವಯಸ್ಸಿನ ಪ್ರಮಾಣಪತ್ರ
ಮೊಬೈಲ್ ಸಂಖ್ಯೆ
ಪಾಸ್‌ಪೋರ್ಟ್ ಗಾತ್ರದ ಫೋಟೋ
ಬಿಪಿಎಲ್ ಪಟ್ಟಿಯಲ್ಲಿ ಹೆಸರಿನ ಮುದ್ರಣ
ಬ್ಯಾಂಕ್ ಪಾಸ್‌ಬುಕ್‌ನ ಫೋಟೋ ಪ್ರತಿ
ಪಡಿತರ ಚೀಟಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭವನ್ನು ಮಹಿಳೆಯರು ಮಾತ್ರ ಪಡೆಯಬಹುದು. ಪುರುಷರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ನೀವು ಈಗಾಗಲೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿದ್ದರೆ, ನಿಮಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.