ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದಂತ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಾಗರ ಸರ್ಕಾರಿ ನೌಕರರ ಸಂಘದ ಡೊಳ್ಳು ಕುಣಿತ ತಂಡವು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಇಂತಹ ಸಾಧನೆ ಮಾಡಿದಂತ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಡೊಳ್ಳು ಕುಣಿತ ತಂಡಕ್ಕೆ ಅಧ್ಯಕ್ಷ ಸಂತೋಷ್ ಕುಮಾರ್ ಎನ್ ಅಭಿನಂದನೆ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವಂತ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಅವರು, ಶಿವಮೊಗ್ಗ ನಗರದಲ್ಲಿ ಮೇ.18, 19 ಮತ್ತು 20ರ ಇಂದಿನವರೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಯಲ್ಲಿ ಜಾನಪದ ನೃತ್ಯ ಕಲೆ, ಮಲೆನಾಡಿನ ಗಂಡು ಕಲೆಯಾದಂತ ಡೊಳ್ಳು ಕುಣಿತದಲ್ಲಿ ಸಾಗರ ತಾಲೂಕು ನೌಕರರ ಸಂಘದ ತಂಡವು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
ರಾಜ್ಯ ಮಟ್ಟದಲ್ಲಿ ಶಿವಮೊಗ್ಗಕ್ಕೆ ಪ್ರಥಮ ಸ್ಥಾನವನ್ನು ತಂದುಕೊಟ್ಟಂತ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಡೊಳ್ಳು ಕುಣಿತ ತಂಡಕ್ಕೆ ತಾಲ್ಲೂಕಿನ ನೌಕರರ ಪರವಾಗಿ ಅಭಿನಂದನೆ, ಶುಭಾಶಯವನ್ನು ತಿಳಿಸುತ್ತೇನೆ. ಇದೇ ರೀತಿಯಲ್ಲಿ ಮತ್ತಷ್ಟು ಸಾಧನೆಯನ್ನು ನಮ್ಮ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಡೊಳ್ಳು ಕುಣಿತ ತಂಡವು ಮಾಡಲಿ. ದೇಶ ವಿದೇಶಗಳಲ್ಲಿ ಸಾಗರದ ಕೀರ್ತಿಯನ್ನು ಪಸರಿಸಲಿ ಎಂಬುದಾಗಿ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ, ಪದಾಧಿಕಾರಿಗಳ ಪರವಾಗಿ ಆಶಿಸಿದ್ದಾರೆ.
ಮದ್ದೂರು ತಾಲೂಕು ಕಚೇರಿ ಭ್ರಷ್ಟಾಚಾರದ ತವರೂರು: ರೈತ ಮುಖಂಡರ ಗಂಭೀರ ಆರೋಪ
GOOD NEWS: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ: ಆನ್‌ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ