ಬೆಂಗಳೂರು: ಸ್ಟೇಡಿಯಂಗೆ ನುಗ್ಗಿ ಕೊಹ್ಲಿ ಅಪ್ಪಿಕೊಳ್ಳುವುದಾಗಿ ವೀಡಿಯೋವನ್ನು ಇನ್ಸ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಂತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಇದು ಹುಚ್ಚಾಟವಾಗಿದೆ. ಪ್ರಾಂಕ್ ಹೆಸರಿನಲ್ಲಿ ಹೀಗೆ ಹುಚ್ಚಾಟ ಮೆರೆದ್ರೆ ಅಂತವರ ವಿರುದ್ಧವೂ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರ ಪೊಲೀಸರು ಎಚ್ಚರಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ನಗರ ಪೊಲೀಸರು, ಸ್ಟೇಡಿಯಂಗೆ ನುಗ್ಗಿ ಕೊಹ್ಲಿ ಅಪ್ಪಿಕೊಳ್ಳುತ್ತೇನೆಂದು ಇನ್ಟಾಗ್ರಾಮ್ ನಲ್ಲಿ ವೀಡಿಯೋ ಹಾಕಿದ್ದಂತ ಶರಣ್ ಎಂಬಾತನನ್ನು ಬಂಧಿಸಲಾಗಿದೆ. ಅಶೋಕ್ ನಗರ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾಗಿ ತಿಳಿಸಿದೆ.
ಈ ರೀತಿ ಮತ್ತೆ ಯಾರೇ ಮಾಡಿದ್ರೂ ಎಫ್ಐಆರ್ ದಾಖಲಿಸಲು ಸೂಚಿಸಲಾಗಿದೆ. ಹುಚ್ಚಾಟ ಮೆರೆಯುವ ಪುಂಡರಿಗೆ ಬೆಂಗಳೂರು ಪೊಲೀಸರು ಖಡಕ್ ಸಂದೇಶ ನೀಡಿದ್ದಾರೆ.
ಪ್ರಾಂಕ್ ಹೆಸರಿನಲ್ಲಿ ಹುಚ್ಚಾಟ ಮೆರೆಯುವವರ ಮೇಲೂ ಪೊಲೀಸರು ಹದ್ದಿನ ಕಣ್ಣಿಡಲಾಗಿದೆ ಎಂಬುದಾಗಿ ತಿಳಿಸಿದೆ.
BREAKING: ಅಹಮದಾಬಾದ್ ನಲ್ಲಿ ತಿರಂಗ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ | Tiranga Yatra
ಆಪರೇಷನ್ ಸಿಂಧೂರ್: ಪಾಕ್ ಭಯೋತ್ಪಾದಕ ಲಾಂಚ್ ಪ್ಯಾಡ್ ಮೇಲಿನ ದಾಳಿಯ ವೀಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ