ದಕ್ಷಿಣ ಅಮೆರಿಕದ ಮಿಸೌರಿ ಮತ್ತು ಕೆಂಟುಕಿ ರಾಜ್ಯಗಳಲ್ಲಿ ಬೀಸಿದಂತ ಭಾರೀ ಬಿರುಗಾಳಿ ಅಪ್ಪಳಿಸಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿಯ ತೀವ್ರ ಬಿರುಗಾಳಿಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವರದಿಗಳ ಪ್ರಕಾರ ಮಿಸೌರಿಯಲ್ಲಿ ಕನಿಷ್ಠ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ನಿನ್ನೆ ರಾತ್ರಿಯ ಬಿರುಗಾಳಿಗಳಿಗೆ ನಾವು ನಮ್ಮ ಕನಿಷ್ಠ 14 ಜನರನ್ನು ಕಳೆದುಕೊಂಡಿದ್ದೇವೆ. ಆದರೆ ದುಃಖಕರವೆಂದರೆ, ನಾವು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಂತೆ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಬೆಶಿಯರ್ ಹೇಳಿದರು.
ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ನಗರದ ಅಧಿಕಾರಿಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ನಮ್ಮ ನಗರ ಇಂದು ರಾತ್ರಿ ದುಃಖಿಸುತ್ತಿದೆ ಎಂದು ಮೇಯರ್ ಕಾರಾ ಸ್ಪೆನ್ಸರ್ ಶುಕ್ರವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು. “ಜೀವನ ನಷ್ಟ ಮತ್ತು ವಿನಾಶ ನಿಜವಾಗಿಯೂ ಭಯಾನಕವಾಗಿದೆ ಎಂದರು.
BREAKING: ಪಾಕ್ ನ 100 ಕಿ.ಮೀ ಒಳ ನುಗ್ಗಿ ಭಯೋತ್ಪಾದನ ಶಿಬಿರಗಳನ್ನು ಭಾರತೀಯ ಸೇನೆ ಧ್ವಂಸ: ಅಮಿತ್ ಶಾ