ಬಾಗಲಕೋಟೆ: ರಾಜ್ಯದಲ್ಲೊಂದು ಮನಕಲಕುವ ಘಟನೆ ಎನ್ನುವಂತೆ ತಾಳಿ ಕಟ್ಟಿ, ಆರತಕ್ಷತೆಯ ವೇಳೆಯಲ್ಲಿ ವರನಿಗೆ ಹೃದಯಾಘಾತದಿಂದ ಕುಸಿದು ಬಿದ್ದು ಕಲ್ಯಾಣ ಮಂಟಪದಲ್ಲೇ ಸಾವನ್ನಪ್ಪಿರುವಂತ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ತಾಳಿ ಕಟ್ಟಿ, ಆರತಕ್ಷತೆಯ ವೇಳೆಯಲ್ಲಿ ವರ ಪ್ರವೀಣ್ ಕುರ್ನೆಗೆ ಕಲ್ಯಾಣ ಮಂಟಪದಲ್ಲಿ ಹೃದಯಾಘಾತ ಉಂಟಾಗಿದೆ. ಹೀಗಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೇ ಚಿಕಿತ್ಸೆಗೂ ಮುನ್ನಾ ವರ ಪ್ರವೀಣ್ ಕುರ್ನೆ ಸಾವನ್ನಪ್ಪಿದ್ದಾರೆ.
ಇದೀಗ ಕಲ್ಯಾಣ ಮಂಟಪದಲ್ಲೇ ವರ ಪ್ರವೀಣ್ ಕುರ್ನೆ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಕಲ್ಯಾಣ ಮಂಟಪವು ಸೂತಕದ ಮನೆಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
GST ಸಂಗ್ರಹಣೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರಯತ್ನಿಸಿ: ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ