ಬೆಂಗಳೂರು: ಮೇ.18ರವರೆಗೆ ನಡೆಯಲಿರುವ ಸೌಗಂಧಿಕಾ ಬಿಂದುಮತಿ ಅವರ ಏಕವ್ಯಕ್ತಿ ಕಲಾಪ್ರದರ್ಶನಕ್ಕೆ ಹಿರಿಯ ಕಲಾವಿದ ಎ.ಎಂ ಪ್ರಕಾಶ್ ಚಾಲನೆ ನೀಡಿದರು.
ಬೆಂಗಳೂರಿನ ಬನಶಂಕರಿ 2ನೇ ಹಂತದ ಫಿಡಿಲಿಟಸ್ ಗ್ಯಾಲರಿಯಲ್ಲಿ ಏರ್ಪಡಿಸಿರುವ ‘ಸೌಗಂಧಿಕಾ’ ಬಿಂದುಮತಿ ಅವರ ಏಕವ್ಯಕ್ತಿ ಕಲಾಪ್ರದರ್ಶನಕ್ಕೆ ಇಂದು ಹಿರಿಯ ಕಲಾವಿದರಾದ ಎ.ಎಂ.ಪ್ರಕಾಶ್, ನೃತ್ಯ ಕಲಾವಿದರಾದ ನಿರುಪಮಾ-ರಾಜೇಂದ್ರ, ಹಿರಿಯ ದೃಶ್ಯಕಲಾವಿದ ಗಣಪತಿ ಅಗ್ನಿಹೋತ್ರಿ ಮತ್ತು ಫಿಡಿಲಿಟಸ್ ಗ್ಯಾಲರಿಯ ಸಂಸ್ಥಾಪಕರಾದ ಅಚ್ಯುತ್ ಗೌಡ ಅವರು ಚಾಲನೆ ನೀಡಿದರು.
ಈ ಕಲಾ ಪ್ರದರ್ಶನವು ಮೇ 18ರವರೆಗೆ ನಡೆಯಲಿದೆ. ಸೌಗಂಧಿಕಾ ಬಿಂದುಮತಿ ಅವರ ವಿವಿಧ ಬಗೆಯ ಏಕವ್ಯಕ್ತಿ ಕಲಾಪ್ರದರ್ಶನವನ್ನು ನೀವು ಕಾಣಬಹುದು. ಸೋ ಬನಶಂಕರಿಯ 2ನೇ ಹಂತದ ಫಿಡಿಲಿಟಸ್ ಗ್ಯಾಲರಿಗೆ ಭೇಟಿ ನೀಡೋದು ಮರೆಯ ಬೇಡಿ.