ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ನಡೆದಿದ್ದು, ಪಾರ್ಟಿ ವೇಳೆ ಗಲಾಟೆಯಾಗಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 3 ದಿನದ ಹಿಂದೆ ಈ ಘಟನೆ ನಡೆದಿದ್ದು, ವೀರಮಣಿ, ಪವನ್, ಅಜೀಜ್ ಎಂಬುವರು ಪಾರ್ಟಿ ಮಾಡಿದ್ದು, ಇವರು ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ಅಜೀಜ್ ಪಾರ್ಟಿ ಮಾಡುತ್ತಿದ್ದ ವೇಳೆ ಪವನ್ ಜಾಯಿನ್ ಆಗಿದ್ದ ಈ ವೇಳೆ ಮಾತಿಗೆ ಮಾತು ಬೆಳೆದು ಪವನ್ ಹಾಗೂ ಅಜೀಜ್ ನಡುವೆ ಗಲಾಟೆಯಾಗಿದ್ದು, ಈ ವೇಳೆ ಪವನ್ ಅಜೀಜ್ ನನ್ನು ಹತ್ಯೆ ಮಾಡಲಾಗಿದೆ.