ಇಸ್ಲಮಾಬಾದ್: ಭಾರತದ ಆಪರೇಷನ್ ಸಿಂಧೂರ್ ಸಮಯದಲ್ಲಿ ಉಂಟಾದ ಹಾನಿಯ ಪ್ರಮಾಣವನ್ನು ದೃಢಪಡಿಸುವ ಪ್ರಮುಖ ಬೆಳವಣಿಗೆಯೊಂದರಲ್ಲಿ, ಕಳೆದ ವಾರ ಭಾರತ ನಡೆಸಿದ ದಾಳಿಯಲ್ಲಿ ತನ್ನ ಸಶಸ್ತ್ರ ಪಡೆಗಳ 11 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 78 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಅಂತಿಮವಾಗಿ ಒಪ್ಪಿಕೊಂಡಿದೆ.
ಕೊನೆಗೂ ಪಾಕಿಸ್ತಾನ ಸತ್ಯ ಒಪ್ಪಿಕೊಂಡಿದೆ. ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ ಸಾವು, ನಾಗರೀಕರಿಗೆ ಗಾಯವಾಗಿರೋದನ್ನು ಸ್ಪಷ್ಟಪಡಿಸಿದೆ. ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ 11 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಪಾಕ್ ಸೇನೆಯ ಆರು ಸೈನಿಕರು ಮತ್ತು ವಾಯುಪಡೆಯ ಐವರು ಸೇರಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ನಿಖರ ದಾಳಿಯ ಸಮಯದಲ್ಲಿ ಉಂಟಾದ ನಷ್ಟಗಳ ಬಗ್ಗೆ ಇಸ್ಲಾಮಾಬಾದ್‌ನಿಂದ ಬಂದ ಮೊದಲ ಅಧಿಕೃತ ಸ್ವೀಕೃತಿ ಇದು.
ಪಾಕಿಸ್ತಾನದ ಸಾವುನೋವುಗಳ ಪಟ್ಟಿ
ಪಾಕಿಸ್ತಾನ ಸೇನೆ:
ಲ್ಯಾನ್ಸ್ ನಾಯಕ್ ಅಬ್ದುಲ್ ರೆಹಮಾನ್
ಲ್ಯಾನ್ಸ್ ನಾಯಕ್ ದಿಲಾವರ್ ಖಾನ್
ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ
ನಾಯಕ್ ವಕಾರ್ ಖಾಲಿದ್
ಸಿಪಾಯಿ ಮುಹಮ್ಮದ್ ಅದೀಲ್ ಅಕ್ಬರ್
ಸಿಪಾಯಿ ನಿಸಾರ್
11 personnel of the Pakistan Armed Forces made the ultimate sacrifice and embraced martyrdom
The martyrs from the Pakistan Army include:
– Naik Abdul Rehman
– Lance Naik Dilawar Khan
– Lance Naik Ikramullah
– Naik Waqar Khalid
– Sepoy Muhammad Adeel Akbar
– Sepoy Nisar
The… pic.twitter.com/IYkAtI9hmE— Arslan Akbar (@iarslanakbar) May 13, 2025
Pakistan Army soldiers killed in India’s #OperationSindoor as per DG ISPR. pic.twitter.com/jcYm4SVVlJ
— Aditya Raj Kaul (@AdityaRajKaul) May 13, 2025
ಪಾಕಿಸ್ತಾನ ವಾಯುಪಡೆ:
ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್
ಮುಖ್ಯ ತಂತ್ರಜ್ಞ ಮುಹಮ್ಮದ್ ಔರಂಗಜೇಬ್
ಹಿರಿಯ ತಂತ್ರಜ್ಞ ನಜೀಬ್ ಸುಲ್ತಾನ್
ಕಾರ್ಪೋರಲ್ ತಂತ್ರಜ್ಞ ಫಾರೂಕ್
ಹಿರಿಯ ತಂತ್ರಜ್ಞ ಮುಬಾಶರ್
Pakistan Air Force (PAF) Airmen Killed during #OperationSindoor as per DG ISPR. pic.twitter.com/YIbTN1d9QP
— Aditya Raj Kaul (@AdityaRajKaul) May 13, 2025
ಗಡಿಯಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸುವ ಮತ್ತು ಶಾಂತ ಸ್ಥಿತಿಗೆ ಮರಳುವ ಬಗ್ಗೆ ಕೇಂದ್ರೀಕರಿಸಿ ಸೋಮವಾರ ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಮಟ್ಟದ ಮಾತುಕತೆ ನಡೆಸಿದ ಒಂದು ದಿನದ ನಂತರ ಈ ಒಪ್ಪಿಗೆ ಬಂದಿದೆ.