ಬೆಂಗಳೂರು: ಭಾರತದ ನಕ್ಷೆಯನ್ನು ಬಿಜೆಪಿ ತಿರುಚಿದೆ ಎಂಬುದಾಗಿ ಕಾಂಗ್ರೆಸ್ ಅಸಲಿ ಭಾರತ, ಬಿಜೆಪಿ ಭಾರತ ನೋಡಿ ಎಂಬುದಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ಪಕ್ಷವು, ‘ಮಾಡೋದು ಅನಾಚಾರ ಬಾಯಲ್ಲಿ ಭಗವದ್ಗೀತೆ’ ಇದು ಬಿಜೆಪಿಗಾಗಿಯೇ ಇರುವ ನಾಣ್ನುಡಿಯಂತಿದೆ. ಭಾರತದ ಮುಕುಟವನ್ನೇ ಕೈಬಿಟ್ಟು ಕಾಶ್ಮೀರವಿಲ್ಲದ ಭಾರತದ ನಕಾಶೆಯ ಪೋಸ್ಟ್ ಪ್ರಕಟಿಸಿದ್ದೇ ಇದಕ್ಕೆ ಸಾಕ್ಷಿ! ಎಂದಿದೆ.
ತಮ್ಮನ್ನು ಬಿಟ್ಟರೆ ಉಳಿದೆಲ್ಲರೂ ದೇಶದ್ರೋಹಿಗಳು ಎಂಬಂತೆ ಅಪಪ್ರಚಾರ ಮಾಡುತ್ತಾ, ತಮಗೆ ತಾವೇ ದೇಶಪ್ರೇಮಿಗಳೆಂಬ ಸರ್ಟಿಫಿಕೇಟ್ ಕೊಟ್ಟುಕೊಳ್ಳುವ ಬಿಜೆಪಿಗರಿಗೆ ಕಾಶ್ಮೀರ ಭಾರತದಲ್ಲಿದೆಯಾ ಎಂಬುದೇ ತಿಳಿದಿಲ್ಲವೋ ಅಥವಾ ಇದು ಪಾಕ್ ಪರವಾದ ವ್ಯಾಮೋಹವೋ?! ಎಂದು ಪ್ರಶ್ನಿಸಿದೆ.
'ಮಾಡೋದು ಅನಾಚಾರ ಬಾಯಲ್ಲಿ ಭಗವದ್ಗೀತೆ' ಇದು ಬಿಜೆಪಿಗಾಗಿಯೇ ಇರುವ ನಾಣ್ನುಡಿಯಂತಿದೆ.
ಭಾರತದ ಮುಕುಟವನ್ನೇ ಕೈಬಿಟ್ಟು ಕಾಶ್ಮೀರವಿಲ್ಲದ ಭಾರತದ ನಕಾಶೆಯ ಪೋಸ್ಟ್ ಪ್ರಕಟಿಸಿದ್ದೇ ಇದಕ್ಕೆ ಸಾಕ್ಷಿ!ತಮ್ಮನ್ನು ಬಿಟ್ಟರೆ ಉಳಿದೆಲ್ಲರೂ ದೇಶದ್ರೋಹಿಗಳು ಎಂಬಂತೆ ಅಪಪ್ರಚಾರ ಮಾಡುತ್ತಾ, ತಮಗೆ ತಾವೇ ದೇಶಪ್ರೇಮಿಗಳೆಂಬ ಸರ್ಟಿಫಿಕೇಟ್ ಕೊಟ್ಟುಕೊಳ್ಳುವ… pic.twitter.com/SF6PYfouAH
— Karnataka Congress (@INCKarnataka) May 12, 2025
ಇಲ್ಲಿ ಕರ್ನಾಟಕದ ಜಿಲ್ಲಾ, ತಾಲ್ಲೂಕು ವಾರು ಪ್ರವಾಸಿ ಸ್ಥಳಗಳ ಮಾಹಿತಿ ಲಭ್ಯ | Karnataka Explore
PGCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ | PGCET-2025