Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: 2025-26ನೇ ಸಾಲಿನ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

12/05/2025 4:56 PM

ನೂತನ ‘2,286 BMTC ನಿರ್ವಾಹಕ’ರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

12/05/2025 4:44 PM

ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 2000 ಅಂಕಕ್ಕೆ ಏರಿಕೆ, ಹೂಡಿಕೆದಾರರು 15 ಲಕ್ಷ ಕೋಟಿ ಗಳಿಕೆ | Share Market Update

12/05/2025 4:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೂತನ ‘2,286 BMTC ನಿರ್ವಾಹಕ’ರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
KARNATAKA

ನೂತನ ‘2,286 BMTC ನಿರ್ವಾಹಕ’ರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

By kannadanewsnow0912/05/2025 4:44 PM

ಬೆಂಗಳೂರು: ಇಂದು‌ ನೂತನವಾಗಿ ಆಯ್ಕೆಯಾಗಿದ್ದಂತ ಬಿಎಂಟಿಸಿಯ 2,286 ನಿರ್ವಾಹಕರಿಗೆ ನೇಮಕಾತಿ‌‌ ಆದೇಶ ಪತ್ರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿತರಿಸಿದರು.

ಈ ಬಳಿಕ ಮಾತನಾಡಿದಂತ ಅವರು, ನೂತನ 2,286 ಬಿಎಂಟಿಸಿ ನಿರ್ವಾಹಕರಿಗೆ ನೇಮಕಾತಿ ಪತ್ರ ನೀಡಲಾಗುತ್ತಿರುವುದು ಸಂತೋಷದ ಸಂಗತಿ. ಬಸ್ ಅಪಘಾತಗಳಿಗೆ ಕಾರಣರಾದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದರು.

2018 ರಿಂದ ಇಲ್ಲಿಯವರೆಗೂ ಬಿ.ಎಂ.ಟಿ.ಸಿಯಲ್ಲಿ ಯಾವುದೇ ನೇಮಕಾತಿ ಆಗಿರಲಿಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ನೇಮಕಾತಿ ಪೂರ್ಣಗೊಳಿಸುವುದು ಒಂದು ಸವಾಲಿನ ಕೆಲಸವೇ ಸರಿ ಎಂದು ನಾನು ಭಾವಿಸಿದ್ದೇನೆ. ಈಗಾಗಲೇ ನಮ್ಮ ಸರ್ಕಾರ ಬಂದ‌ ಕೂಡಲೇ ನಾಲ್ಕು ಸಾರಿಗೆ ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಚಾಲನೆ‌ ನೀಡಲಾಗಿದೆ ಎಂದರು.

ಕಳೆದ ಎರಡು ವರ್ಷದಲ್ಲಿ ಅತ್ಯಂತ ಪಾರದರ್ಶಕವಾಗಿ 4700 ಹೊಸ ನೇಮಕಾತಿ ಮತ್ತು 1000 ಅನುಕಂಪದ ನೇಮಕಾತಿ ಪೂರ್ಣಗೊಳಿಸಲಾಗಿದೆ. ಉಳಿದ 4300 ನೇಮಕಾತಿಗಳು‌ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಸರ್ಕಾರಿ/ ಖಾಸಗಿ‌ವಲಯಗಳಲ್ಲಿ‌ ‌ನಿರುದ್ಯೋಗ ಸಮಸ್ಯೆ ಮತ್ತು ಹುದ್ದೆ ಕಡಿತ ಜಾರಿಯಲ್ಲಿರುವಾಗ 10000 ನೇಮಕಾತಿ ಪಾರದರ್ಶಕವಾಗಿ ನಡೆಸಿ ಉದ್ಯೋಗ ನೀಡಿರುವುದು. ನಮ್ಮ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತು‌ಪಡಿಸಿದೆ. ಈ ಸಂದರ್ಭದಲ್ಲಿ ನಾನು ನಿಮಗೆಲ್ಲರಿಗೂ ಒಂದು ಕಿವಿ ಮಾತು‌ ಹೇಳಲು ಇಚ್ಛಿಸುತ್ತೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಬಗ್ಗೆ ಅವಲೋಕಿಸಿದಾಗ, ಭಾರತ ದೇಶವು ರಸ್ತೆ ಅಪಘಾತದಲ್ಲಿ ಮೊದಲ ಸ್ಥಾನದಲ್ಲಿದೆ. ಅತೀ ಹೆಚ್ಚು ಅಪಘಾತ, ಸಾವು ನೋವು ದಾಖಲಾಗುತ್ತಿರುವುದು‌ನಮ್ಮ‌ ದೇಶದಲ್ಲಿ ಇದು ಅತ್ಯಂತ ಕಳವಳಕಾರಿ. ಅದನ್ನು ತಡೆಗಟ್ಟಲು ನಮ್ಮ ಸಾರಿಗೆ ಇಲಾಖೆಯಿಂದ ಕೂಡ ( RTO – ROAD Safety Fund) ಮೂಲಕ ಅಭಿಯಾನಗಳನ್ನು‌ ಸಹ ನಡೆಸಲಾಗುತ್ತಿದೆ ಎಂದರು.

ಅದೇ ರೀತಿ ಸಾರಿಗೆ ಸಂಸ್ಥೆಗಳ ಬಸ್ಸುಗಳ ಅಪಘಾತಗಳು ಅಧಿಕವಾಗುತ್ತಿವೆ. ಅಪಘಾತಕ್ಕೆ ಯಾರೇ ಕಾರಣವಿರಬಹುದು, ಆದರೆ ಅಪಘಾತದಿಂದ ನಡೆಯುವ ಸಾವು ನೋವುಗಳಿಗೆ ಯಾವುದೇ ಕಾರಣ/ ಪರಿಹಾರವು ನ್ಯಾಯ ಒದಗಿಸುವುದಿಲ್ಲ. ಅಪಘಾತದಿಂದ ಕಳೆದುಕೊಂಡ‌ ಅಮೂಲ್ಯ ಜೀವಗಳನ್ನು ವಾಪಸ್ಸು ತರಲು ಸಾಧ್ಯವೇ? ಅವರ ಅವಲಂಬಿತರು ಅನುಭವಿಸುವ ನೋವಿಗೆ ಪರ್ಯಾಯವಿದೆಯೇ? ಎಂದರು.

ಕಳೆದ 15 ದಿವಸಗಳ ಹಿಂದೆ ಅಪಘಾತದಲ್ಲಿ ಕಾಲು‌ಕಳೆದುಕೊಂಡ ಚಾಲನಾ ಸಿಬ್ಬಂದಿಯೊಬ್ಬರಿಗೆ ರೂ.25 ಲಕ್ಷ ಪರಿಹಾರ ಹಣವನ್ನು ನಾವು ನೀಡುವಾಗ ನನಗೆ ಅರ್ಥವಾಗಿದ್ದು ಒಂದೇ ವಿಷಯ, ಯಾವುದೇ ಆರ್ಥಿಕ ಸೌಲಭ್ಯವು ಆ ಸಿಬ್ಬಂದಿಗೆ ತನ್ನ ಹಿಂದಿನ ಸಂತೋಷದ ಜೀವನ ತಂದು‌ಕೊಡುವುದಿಲ್ಲ. ಬೇರೆಯವರನ್ನು ನೋಡಿದಾಗ ಅವನಿಗಾಗುವ ಮಾನಸಿಕ‌ ವೇದನೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಸ್ಸು ರಸ್ತೆಯಲ್ಲಿ ಸಂಚರಿಸುವ ದೊಡ್ಡ ವಾಹನ, ಆದ್ದರಿಂದ ನಮ್ಮ ಚಾಲಕರು ಮತ್ತಷ್ಟು ತಾಳ್ಮೆ, ಜಾಗ್ರತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ನಿರ್ವಾಹಕರು ಚಾಲಕರಿಗೆ ವೇಗ ತಗ್ಗಿಸಲು, ಜಾಗ್ರತೆ ವಹಿಸಲು ಮನವರಿಕೆ ಮಾಡಿಕೊಡಬೇಕು. ಕೆಲ ಸಂದರ್ಭಗಳಲ್ಲಿ ಬಸ್ಸುಗಳ ಅಪಘಾತಕ್ಕೆ ಬಸ್ಸುಗಳ ಸ್ಥಿತಿಗತಿಗಳು/ತಾಂತ್ರಿಕ ದೋಷಗಳು ಕಾರಣವಿರಬಹುದು. ಆ ನಿಟ್ಟಿನಲ್ಲಿಯೂ ನಾವು ಗಮನವಹಿಸಬೇಕು ತಾಂತ್ರಿಕ‌ ಇಲಾಖೆಯ ಅಧಿಕಾರಿಗಳು,‌ಮೇಲ್ವಿಚಾರಕ‌ ಸಿಬ್ಬಂದಿಗಳ ಅಜಾಗರೂಕತೆ, ನಿರ್ಲಕ್ಷತೆ ಕಾರಣವಾಗಿರುತ್ತದೆ ಎಂದರು.

ತಾಂತ್ರಿಕ‌ ತೊಂದರೆಗಳಿಗೆ ಇನ್ನು‌ ಮುಂದೆ, ಚಾಲನಾ‌ ಸಿಬ್ಬಂದಿಗಳ ಬದಲಾಗಿ ತಾಂತ್ರಿಕ ಇಲಾಖೆಯ ಅಧಿಕಾರಿಗಳು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರುಗಳನ್ನು ಹೊಣೆಗಾರರನ್ನಾಗಿಸಲಾಗುವುದು. ನಾನು ಈ‌ ಬಗ್ಗೆ ತುಂಬಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಲು‌ ಕಾರಣ, ಇತ್ತೀಚಿನ ದಿನಗಳಲ್ಲಿ ಅಪಘಾತದ ಬಗ್ಗೆ ಭಯ ಮತ್ತು ಸಂವೇದನಾ ಶೀಲತೆ ಇಲ್ಲದಂತಾಗಿರುವುದು. ನೂರು ಅಪಘಾತಗಳಲ್ಲಿ ನನ್ನದೊಂದು ಎಂಬ ಅಸಹನೀಯ ಭಾವನೆ‌ ಚಾಲನಾ ಸಿಬ್ಬಂದಿಗಳಲ್ಲಿ ಇರಬಾರದು. ಅದು ಆಘಾತಕಾರಿ ಎಂಬುದಾಗಿ ಎಚ್ಚರಿಸಿದರು.

ಇನ್ನು ಮುಂದೆ‌ ಅಪಘಾತಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದೆ ಅನ್ಯ ಮಾರ್ಗವಿಲ್ಲದಂತಾಗಿದೆ.‌ ಅಪಘಾತಗಳನ್ನು ತಗ್ಗಿಸಲು ಕಠಿಣ ಕ್ರಮಗಳನ್ನು‌ ಸಹ ಕೆಲವೊಮ್ಮೆ ಜಾರಿಗೊಳಿಸುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಅಗತ್ಯವಾಗಿರುತ್ತದೆ. ಅಪಘಾತಗಳು ಆಕಸ್ಮಿಕವೇ ಆದರೂ ಅದನ್ನು‌‌ ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ತೆಗದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 2000 ಅಂಕಕ್ಕೆ ಏರಿಕೆ, ಹೂಡಿಕೆದಾರರು 15 ಲಕ್ಷ ಕೋಟಿ ಗಳಿಕೆ | Share Market Update

ಇಲ್ಲಿ ಕರ್ನಾಟಕದ ಜಿಲ್ಲಾ, ತಾಲ್ಲೂಕು ವಾರು ಪ್ರವಾಸಿ ಸ್ಥಳಗಳ ಮಾಹಿತಿ ಲಭ್ಯ | Karnataka Explore

Share. Facebook Twitter LinkedIn WhatsApp Email

Related Posts

BREAKING: 2025-26ನೇ ಸಾಲಿನ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

12/05/2025 4:56 PM3 Mins Read

GOOD NEWS : 3 ತಿಂಗಳ ‘ಗೃಹಲಕ್ಷ್ಮೀ’ ಹಣ, ಹಂತ ಹಂತವಾಗಿ ಯಜಮಾನಿಯರ ಖಾತೆಗೆ ಜಮೆ : ಲಕ್ಷ್ಮೀ ಹೆಬ್ಬಾಳ್ಕರ್

12/05/2025 4:03 PM1 Min Read

BREAKING: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಪುತ್ರ ಚಾಮರಾಜ್ ನಿಧನ

12/05/2025 3:52 PM1 Min Read
Recent News

BREAKING: 2025-26ನೇ ಸಾಲಿನ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

12/05/2025 4:56 PM

ನೂತನ ‘2,286 BMTC ನಿರ್ವಾಹಕ’ರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

12/05/2025 4:44 PM

ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 2000 ಅಂಕಕ್ಕೆ ಏರಿಕೆ, ಹೂಡಿಕೆದಾರರು 15 ಲಕ್ಷ ಕೋಟಿ ಗಳಿಕೆ | Share Market Update

12/05/2025 4:32 PM

ಆಪರೇಷನ್ ಸಿಂಧೂರ್: ಇಂದು ರಾತ್ರಿ 8 ಗಂಟೆಗೆ ದೇಶದ ಜನತೆ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ | PM Narendra Modi Speech

12/05/2025 4:25 PM
State News
KARNATAKA

BREAKING: 2025-26ನೇ ಸಾಲಿನ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

By kannadanewsnow0912/05/2025 4:56 PM KARNATAKA 3 Mins Read

ಬೆಂಗಳೂರು: ರಾಜ್ಯ ಸರ್ಕಾರದಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದೆ. ಈ ಸಂಬಂಧ 2025-26ನೇ ಸಾಲಿನ ಸರ್ಕಾರಿ ನೌಕರರ…

ನೂತನ ‘2,286 BMTC ನಿರ್ವಾಹಕ’ರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

12/05/2025 4:44 PM

GOOD NEWS : 3 ತಿಂಗಳ ‘ಗೃಹಲಕ್ಷ್ಮೀ’ ಹಣ, ಹಂತ ಹಂತವಾಗಿ ಯಜಮಾನಿಯರ ಖಾತೆಗೆ ಜಮೆ : ಲಕ್ಷ್ಮೀ ಹೆಬ್ಬಾಳ್ಕರ್

12/05/2025 4:03 PM

BREAKING: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಪುತ್ರ ಚಾಮರಾಜ್ ನಿಧನ

12/05/2025 3:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.