ನವದೆಹಲಿ: ಭಾರತ-ಪಾಕ್ ಕದನ ವಿರಾಮದ ನಂತರ ಜಮ್ಮು ವಿಮಾನ ನಿಲ್ದಾಣ ಮತ್ತೆ ತೆರೆಯಲಾಗಿದೆ. ನಾಳೆ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಳ್ಳಲಿವೆ ಎಂಬುದಾಗಿ ಭಾರತೀಯ ಸೇನೆಯ ಮೂಲಗಳು ತಿಳಿಸಿದ್ದಾವೆ.
ಪರಮಾಣು ಶಸ್ತ್ರಸಜ್ಜಿತ ನೆರೆಯ ರಾಷ್ಟ್ರಗಳ ನಡುವಿನ ಮಿಲಿಟರಿ ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧವಾಗಿ ಸ್ಫೋಟಗೊಳ್ಳುವ ಬೆದರಿಕೆಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಕೆಲವು ದಿನಗಳ ನಂತರ ಜಮ್ಮು ವಿಮಾನ ನಿಲ್ದಾಣ ಮತ್ತೆ ತೆರೆಯಲಾಗಿದೆ.
ಜಮ್ಮು ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಮಂಗಳವಾರ ಪ್ರಾರಂಭವಾಗಲಿವೆ. ಈ ಮೂಲಕ ಜಮ್ಮು ವಿಮಾನ ನಿಲ್ದಾಣವು ಪ್ರಯಾಣಿಕರ ಸಂಚಾರ ಸಾರಿಗೆಗೆ ಮುಕ್ತವಾಗಲಿದೆ.
Operation Sindoor: ಪಾಕ್ ಮೇಲೆ ದಾಳಿಗೆ ಎಲ್ಲಾ ಭಾರತೀಯ ಸೇನಾ ನೆಲೆಗಳು ಸಿದ್ಧ: ಏರ್ ಮಾರ್ಷಲ್ ಎ.ಕೆ. ಭಾರ್ತಿ
ಇಲ್ಲಿ ಕರ್ನಾಟಕದ ಜಿಲ್ಲಾ, ತಾಲ್ಲೂಕು ವಾರು ಪ್ರವಾಸಿ ಸ್ಥಳಗಳ ಮಾಹಿತಿ ಲಭ್ಯ | Karnataka Explore