ನವದೆಹಲಿ: ಭಾರತೀಯ ವಾಯುಪಡೆಯಿಂದ ಪಾಕಿಸ್ತಾನದ ನೂರ್ ಖಾನ್ ಏರ್ ಬೇಸ್ ಧ್ವಂಸಗೊಳಿಸಲಾಗಿದೆ. ಮುಂದಿನ ಆಪರೇಷನ್ ಗೆ ನಾವು ತಯಾರಿದ್ದೇವೆ ಎಂಬುದಾಗಿ ಏರ್ ಮಾರ್ಷಲ್ ಎ.ಕೆ ಭಾರ್ತಿ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಬಿಎಸ್ಎಫ್ ಕೂಡ ಸಾಥ್ ನೀಡಿದೆ. ಬಿಎಸ್ಎಫ್ ಯೋಧರಿಗೆ ಧನ್ಯವಾದಗಳನ್ನು ಸೇನಾಧಿಕಾರಿಗಳು ಹೇಳಿದರು.
ಭಯವಿಲ್ಲದ ಪ್ರೀತಿ ಇರಲು ಸಾಧ್ಯವಿಲ್ಲ. ಪಾಕಿಸ್ತಾನ ಕಿರಾನಾ ಬೆಟ್ಟ, ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಿಲ್ಲ. 3 ಗಂಟೆಗಳಲ್ಲಿ ಪಾಕಿಸ್ತಾನದ 11 ವಾಯು ನೆಲೆಗಳನ್ನು ನಾಶಪಡಿಸಿದ್ದೇವೆ. ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದರು.
ಏರ್ ಡಿಫೆನ್ಸ್ ಸಿಸ್ಟಮ್ ನಿಂದ ಪಾಕಿಸ್ತಾನದ ಡ್ರೋನ್ ನಾಶಪಡಿಸಿದ್ದೇವೆ. ಅತ್ಯಾಧುನಿತ ತಂತ್ರಜ್ಞಾನದ ಕ್ಷಿಪಣಿ ಬಳಸಿ ಉಗ್ರರ ನೆಲೆ ಧ್ವಂಸಗೊಳಿಸಿದ್ದೇವೆ ಎಂದರು.