ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆಯ ಕಾರಣದಿಂದ ಪಾಕ್ ವಾಯುಪ್ರದೇಶ ಬಳಕೆಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಪಾಕಿಸ್ತಾನ ಹಾದು ಹೋಗುವಂತ ವಿಮಾನಗಳು ಬೇರೆಡೆಗೆ ತಿರುಗಿಸಲಾಗಿತ್ತು. ಇಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕಾರಣ, ಪಾಕಿಸ್ತಾನದ ವಾಯುಪ್ರದೇಶವನ್ನು ಬಳಕೆಗೆ ವಿಧಿಸಿದ್ದಂತ ನಿರ್ಬಂಧವನ್ನು ತೆರವುಗೊಳಿಸುವುದಾಗಿ ಪಾಕ್ ಘೋಷಿಸಿದೆ.
ಭಾರತದೊಂದಿಗೆ ಕದನ ವಿರಾಮ ಘೋಷಣೆಯಾದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನವು ಎಲ್ಲಾ ರೀತಿಯ ಸಂಚಾರಕ್ಕಾಗಿ ತನ್ನ ವಾಯುಪ್ರದೇಶವನ್ನು ತೆರೆಯುವುದಾಗಿ ಘೋಷಿಸಿತು. ಈ ಮೂಲಕ ಭಾರತದ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶ ಬಳಕೆಗೆ ವಿಧಿಸಿದ್ದಂತ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.