ನವದೆಹಲಿ: ಇದೀಗ ಬಂದಂತ ಸುದ್ದಿಯಂತೆ ಪಾಕಿಸ್ತಾನ ಸೇನೆಯು ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ. ಇಂತಹ ದಾಳಿಯನ್ನು ಸಮರ್ಥವಾಗಿಯೇ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿ ತಟಸ್ಥಗೊಳಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕ್ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿ ಉಡೀಸ್ ಮಾಡಿದಂತ ಒಂದು ದಿನದ ನಂತ್ರ, ಇದೀಗ ಜಮ್ಮು ವಿಮಾನ ನಿಲ್ದಾಣದ ಮೇಲೆ ಪಾಕಿಸ್ತಾನ ದಾಳಿ ನಡೆಸಿದೆ.
ಜಮ್ಮು-ಕಾಶ್ಮೀರಾದ ಸಾಂಬಾ ವಿಮಾನ ನಿಲ್ದಾಣದ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಪಾಕ್ ಸೇನೆಗೆ ಭಾರತೀಯ ಪಡೆ ಪ್ರತ್ಯುತ್ತರ ನೀಡುತ್ತಿದೆ. ಜಮ್ಮುವಿನ ಏರ್ ಪೋರ್ಟ್ ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದೆ.
#WATCH | Sirens being heard in Akhnoor, Jammu and Kashmir
More details awaited. pic.twitter.com/eiGdyj14Tq
— ANI (@ANI) May 8, 2025