ಶಿವಮೊಗ್ಗ: ಅನಾರೋಗ್ಯದ ಕಾರಣದಿಂದಾಗಿ ಆ ಮಹಿಳೆಗೆ ಪೂಜೆ ಮಾಡಿದ್ರೆ ಸರಿ ಹೋಗುತ್ತೆ ಅಂತ ನಂಬಿಸಿದಂತ ಆಸಾಮಿ ಒಬ್ಬ, ಆಕೆಯ ಕೈಯಲ್ಲಿದ್ದಂತ ಉಂಗುರ, ಕೊರಳಲ್ಲಿದ್ದಂತ ಸರ ಪಡೆದು, ಎಸ್ಕೇಪ್ ಆಗಿದ್ದನು. ಈ ಸಂಬಂಧ ದಾಖಲಾದಂತ ಪ್ರಕರಣ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೀಗಾಗಿ ಸಾಗರದ ಜನರು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನೆಸರ ಗ್ರಾಮದ ವಿನಾಯಕ ಎಂಬುವರ ಮನೆಗೆ ತೆರಳಿದಂತ ಸ್ವಾಮಿಯೊಬ್ಬ, ವಿನಾಯಕ ಅವರ ಪತ್ನಿಗೆ ನಿಮಗೆ ಅನಾರೋಗ್ಯ ಕಾಡುತ್ತಿದೆ. ಆರೋಗ್ಯ ಸುಧಾರಿಸೋದಕ್ಕೆ ಪೂಜೆ ಮಾಡಬೇಕು. 21 ದಿನ ಪೂಜೆ ಮಾಡಿದ್ರೇ ಆರೋಗ್ಯ ಸುಧಾರಿಸುತ್ತದೆ ಎಂಬುದಾಗಿ ಭವಿಷ್ಯ ನುಡಿದ್ದಾನೆ.
ಕಳ್ಳ ಸ್ವಾಮಿಯ ಮಾತು ನಂಬಿದಂತ ವಿನಾಯಕ ಹಾಗೂ ಅವರ ಪತ್ನಿ ಶೈಲಜಾ, ಪೂಜೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ದಿನಾಂಕ 23-03-2025ರ ಮಧ್ಯಾಹ್ನ 2 ಗಂಟೆಗೆ ಪೂಜೆ ಮಾಡೋದಕ್ಕೆ ಸ್ವಾಮೀಜಿ ದಿನಾಂಕ ನಿಗದಿ ಪಡಿಸಿದ್ದಾರೆ.
ಅಂದು ವಿನಾಯಕ-ಶೈಲಜಾ ದಂಪತಿಗಳ ಹೊನ್ನೆಸರ ಮನೆಗೆ ಬಂದಂತ ಸ್ವಾಮೀಜಿ ಪೂಜೆ ಶುರು ಮಾಡಿದ್ದಾರೆ. ನಿಧಾನವಾಗಿ ಪೂಜೆಯ ವೇಳೆಯಲ್ಲಿ ವಿನಾಯಕ ಅವರ ಕೈಯಲ್ಲಿದ್ದಂತ 5 ಗ್ರಾಂ ಉಂಗುರ ಇರಿಸಿ ಅಂದಿದ್ದಾನೆ. ಆ ಬಳಿಕ ಶೈಲಜಾ ಕೊರಳಲ್ಲಿದ್ದಂತ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಹಿಟ್ಟಿನ ಗೊಂಬೆಯಲ್ಲಿ ಇರಿಸಬೇಕು ಅಂತ ಪಡೆದು, ಅದರಲ್ಲಿ ಇಟ್ಟಂತೆ ಮಾಡಿ, ಪೂಜೆ ಶುರು ಮಾಡಿ, ಮಂಕು ಬೂದಿ ಎರಚಿ ಉಂಗುರ, ಮಾಂಗಲ್ಯ ಸರ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ವಿನಾಯಕ ಅವರು ಸ್ವಾಮೀಜಿಯ ವಿರುದ್ಧ ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಸಾರಥ್ಯದಲ್ಲಿ ಪೊಲೀಸರ ತಂಡವು ಸ್ವಾಮೀಜಿ ಬಂಧನಕ್ಕೆ ಕಾರ್ಯಾಚರಣೆಗೆ ಇಳಿದಿದೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ಎಸ್ ಎನ್ ನೇತೃತ್ವದಲ್ಲಿ, ಪಿಎಸ್ಐ ಸಿದ್ದರಾಮಪ್ಪ, ಸಿಹೆಚ್ ಸಿ ಷೇಖ್ ಫೈರೋಜ್ ಅಹಮ್ಮದ್, ಸಿಪಿಸಿ ರವಿಕುಮಾರ್, ಪಿಸಿ ಹನುಮಂತ ಜಂಬೂರ್, ನಂದೀಶ್, ಸಿಪಿಸಿ ಪ್ರವೀಣ್ ಕುಮಾರ್, ಜಿಲ್ಲಾ ತಾಂತ್ರಿಕ ಘಟಕದ ಇಂದ್ರೇಶ್, ವಿಜಯಕುಮಾರ್ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಅಂತಿಮವಾಗಿ ಸಾಗರ ಗ್ರಾಮಾಂತರ ಠಾಣೆ ಪಿಐ ಮಹಾಬಲೇಶ್ವರ ಎಸ್ ಎನ್ ನೇತೃತ್ವದ ತಂಡವು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹೊಂಬ್ಳಿ ಗ್ರಾಮದ ಪೌರೋಹಿತ್ಯ ಕೆಲಸ ಮಾಡುತ್ತಿದ್ದಂತ ಬಸಯ್ಯ ಹಿರೇಮಠ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯಿಂದ ರೂ.3,40,000 ಮೌಲ್ಯದ 33 ಗ್ರಾಂ ತೂಕದ ಮಾಂಗಲ್ಯ ಸರ, 5 ಗ್ರಾಂ ತೂಕದ ಉಂಗುರವನ್ನು ಜಪ್ತಿ ಮಾಡಿದ್ದಾರೆ.
ಸೋ ಸಾಗರದ ಜನರು ಹೀಗೆ ಮನೆಗೆ ಬಂದು ಯಾರಾದರೂ ಪೂಜೆ ಮಾಡಬೇಕು, ಆಭರಣಗಳನ್ನು ಪೂಜೆಗೆ ಇಡಿ, ಹಾಗೆ ಹೀಗೆ ಅಂತ ಹೇಳಿದ್ರೆ ಅದು ಮೋಸವಾಗಿರುತ್ತದೆ. ನಿಮ್ಮ ಆಭರಣ ಕದ್ದು ಪರಾರಿಯಾಗೋ ಕಳ್ಳ ಸ್ವಾಮೀಜಿಗಳು ಆಗಿರುತ್ತಾರೆ. ಎಚ್ಚರಿಕೆ ವಹಿಸುವಂತೆ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಸಾಗರ ತಾಲ್ಲೂಕು ಜನತೆಯಲ್ಲಿ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BREAKING: ಲಾಲು ಪ್ರಸಾದ್ ಯಾದವ್ ಗೆ ಬಿಗ್ ಶಾಕ್: ರೈಲ್ವೆ ಭೂಮಿ ಹಗರಣದಲ್ಲಿ ಕಾನೂನು ಕ್ರಮಕ್ಕೆ ರಾಷ್ಟ್ರಪತಿ ಅನುಮತಿ