ನವದೆಹಲಿ: ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಿಖರವಾಗಿ ಇದೇ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಊಹಿಸಲಾಗದು. ಆದರೇ ಭಾರತೀಯ ಸೇನೆಯ ಕಾರ್ಯಾಚರಣೆ ಮಾತ್ರ ಶ್ಲಾಘನೀಯ, ಪ್ರಶಂಸನೀಯ. ಉಗ್ರರ ನಾಶ ನಿಶ್ಚಿತ ಎಂಬುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ಗುಣಮಟ್ಟ ಸಮಾವೇಶದಲ್ಲಿ ಮಾತನಾಡಿದ ಸಿಂಗ್, ಕಾರ್ಯಾಚರಣೆಯನ್ನು ನಿಖರವಾಗಿ ಕಾರ್ಯಗತಗೊಳಿಸಿದ ನಿಖರತೆ ಊಹಿಸಲಾಗದು ಮತ್ತು ಪ್ರಶಂಸನೀಯವಾಗಿದೆ ಎಂದು ಹೇಳಿದರು.
ಆಪರೇಷನ್ ಸಿಂಧೂರ್ ದಾಳಿಯಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದರು.
#WATCH | Delhi: Defence Minister Rajnath Singh says, "We have always played the role of a responsible nation. We have always been in favour of resolving problems through dialogue. But this does not mean that anyone should take unfair advantage of our patience. If anyone tries to… pic.twitter.com/q6Wy6du94n
— ANI (@ANI) May 8, 2025
ಭಾರತವು ಯಾವಾಗಲೂ ಜವಾಬ್ದಾರಿಯುತ ರಾಷ್ಟ್ರದ ಪಾತ್ರವನ್ನು ವಹಿಸಿದೆ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಪರವಾಗಿದೆ ಎಂದು ಸಿಂಗ್ ಹೇಳಿದರು.
ಯಾರಾದರೂ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನಿಸಿದರೆ, ಅವರು ಕ್ರಮವನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.
#WATCH | Delhi: Defence Minister Rajnath Singh says, "I congratulate the armed forces for the action they took yesterday and the courage and bravery they showed. Terror camps in Pakistan and PoK have been neutralised, it is a matter of pride for us…" pic.twitter.com/rQqOOiy07A
— ANI (@ANI) May 8, 2025
ಆದರೆ ಇದರರ್ಥ ನಮ್ಮ ತಾಳ್ಮೆಯ ಅನ್ಯಾಯದ ಲಾಭವನ್ನು ಯಾರಾದರೂ ಪಡೆಯಬೇಕು ಎಂದಲ್ಲ. ಯಾರಾದರೂ ನಮ್ಮ ತಾಳ್ಮೆಯ ಲಾಭವನ್ನು ಪಡೆಯಲು ಪ್ರಯತ್ನಿಸಿದರೆ, ಅವರು ನಿನ್ನೆಯಂತೆಯೇ ತಕ್ಕ ದಾಳಿಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಭವಿಷ್ಯದಲ್ಲಿಯೂ ಇಂತಹ ಜವಾಬ್ದಾರಿಯುತ ಪ್ರತಿಕ್ರಿಯೆಗೆ ನಾವು ಸಿದ್ಧರಿದ್ದೇವೆ” ಎಂದು ರಕ್ಷಣಾ ಸಚಿವರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.