ನವದೆಹಲಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಡ್ರೋನ್ ದಾಳಿ ನಡೆಸಲಾಗಿದೆ. ಪಾಕ್ ನಗರಗಳಿಗೆ ನುಗ್ಗಿ ಭಾರತದ ಡ್ರೋನ್ ಗಳು ರಾವಲ್ಪಿಂಡಿ ಸ್ಟೇಡಿಯಂ ಧ್ವಂಸಗೊಳಿಸಿದ್ದಾವೆ.
ಭಾರತೀಯ ಸೇನೆಯಿಂದ ಪಾಕಿಸ್ತಾನದ ಆಂಟಿ ಡ್ರೋನ್ ಸಿಸ್ಟಮ್ ಫೇಲ್ ಮಾಡಿದ್ದರೇ, ಪಾಕಿಸ್ತಾನದ ಹಲವು ವಾಯು ರಕ್ಷಣಾ ರಾಡಾರ್ ವ್ಯವಸ್ಥೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಲಾಹೋರ್ ನಲ್ಲಿರುವಂತ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ.
ಒಟ್ಟಾರೆಯಾಗಿ ಪಾಕಿಸ್ತಾನದ ನಗರಗಳಇಗೆ ನುಗ್ಗಿ ಭಾರತದ ಡ್ರೋನ್ ಗಳು ಡ್ಯಾಮೇಜ್ ಗೊಳಿಸಿದ್ದಾವೆ. ಭಾರತದ ದಾಳಿ ತಡೆಯೋಕೆ ಆಗದೇ ಪಾಕಿಸ್ತಾನ ವಿಲವಿಲ ಒದ್ದಾಡುವಂತೆ ಆಗಿದೆ.
BREAKING: ಭಾರತೀಯ ಸೇನೆಯಿಂದ ಡ್ರೋನ್ ದಾಳಿ: ಪಾಕಿಸ್ತಾನದ ರಾವಲ್ಪಿಂಡಿ ಸ್ಟೇಡಿಯಂ ಧ್ವಂಸ | Operation Sindoor