ಕರಾಚಿ : ಪಾಕಿಸ್ತಾನದ ಮೇಲೆ ಬಲೂಚಿಸ್ತಾನ ಬಂಡುಕೋರರು ದಾಳಿ ಮುಂದುವರೆಸಿದ್ದು, ಕಳೆದ 24 ಗಂಟೆಗಳಲ್ಲಿ 21 ಪಾಕ್ ಸೈನಿಕರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
ಬಲೂಚಿಸ್ತಾನ ಸೇನೆ ಕೂಡ ಪಾಕಿಸ್ತಾನಕ್ಕೆ ಶಾಕ್ ನೀಡಿದೆ. ಪಾಕಿಸ್ತಾನಿ ಸೇನಾ ವಾಹನದ ಮೇಲೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ನಡೆಸಿದ ದಾಳಿಯಲ್ಲಿ 12 ಮಂದಿ ಪಾಕಿಸ್ತಾನಿ ಯೋಧರು ಮೃತಪಟ್ಟಿದ್ದಾರೆ.ಪಾಕ್ ಸೈನಿಕರ ದೇಹ ಛಿದ್ರ ಛಿದ್ರವಾಗಿ ಹಾರಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತದ ಆಪರೇಷನ್ ಸಿಂಧೂರ್ ನಂತರ, ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ತನ್ನ 14 ಸೈನಿಕರನ್ನು ಕೊಂದಿದ್ದರಿಂದ ಪಾಕಿಸ್ತಾನ ಸೇನೆಯು ಮತ್ತೊಂದು ನಷ್ಟವನ್ನು ಅನುಭವಿಸಿದೆ. ಬಿಎಲ್ಎ ದಾಳಿಯ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.