ಸಾಗರ : ವಿಶ್ವಕರ್ಮ ಯೋಜನೆಯಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆಯುತ್ತಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಸತೀಶ್ ಅಂಗಡಿ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಂದು ವರ್ಷದ ಹಿಂದೆ ವಿಶ್ವಕವið ಯೋಜನೆ ಚುನಾವಣೆ ಮುನ್ನ ಘೋಷಣೆ ಮಾಡಿತ್ತು. ಆದರೆ ಯೋಜನೆ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳನ್ನು ತರದೆ ಇರುವುದು ಎಲ್ಲೋ ಯೋಜನೆ ಚುನಾವಣಾ ಗಿಮಿಕ್ ಎನ್ನುವ ಅನುಮಾನ ಮೂಡಿಸಲು ಕಾರಣವಾಗಿದೆ ಎಂದರು.
ವಿಶ್ವಕರ್ಮ ಯೋಜನೆ ವ್ಯಾಪ್ತಿಯಲ್ಲಿ ಟೈಲರ್, ಬಡಗಿ ಮತ್ತು ಮೇಸ್ತಿçಗಳನ್ನು ಪರಿಗಣಿಸಿಲ್ಲ. ನಿಜವಾಗಿಯೂ ಈ ವರ್ಗಗಗಳಿಗೆ ಯೋಜನೆ ತೀರ ಅಗತ್ಯವಾಗಿದೆ. ಈ ಕಸುಬು ಮಾಡುತ್ತಿರುವವರು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ನಿಮ್ಮ ಅರ್ಜಿ ತಿರಸ್ಕೃಗೊಂಡಿದೆ. ನಿಮ್ಮ ಉದ್ಯೋಗ ಬದಲಾಯಿಸಿ ಅರ್ಜಿ ಸಲ್ಲಿಸಿ ಎಂದು ಉತ್ತರ ನೀಡುತ್ತಾರೆ. ಆದರೆ ಯೋಜನೆಗಾಗಿ ತಮ್ಮ ಮೂಲವೃತ್ತಿಯನ್ನು ಬದಲಾಯಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಕೆಲವು ಖೊಟ್ಟಿ ದಾಖಲೆ ಸೃಷ್ಟಿಸಿಕೊಂಡು ಫಲಾನುಭವಿಗಳಿಗೆ ಬಂದ ಹಣವನ್ನು ಲಪಟಾಯಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಕೆಲವು ಬ್ಯಾಂಕ್‌ಗಳಲ್ಲಿ ಯೋಜನೆ ಅಡಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದವರನ್ನು ಸತಾಯಿಸಲಾಗುತ್ತಿದೆ. ಅದರಲ್ಲಿಯೂ ಕೆಲವು ಬ್ಯಾಂಕ್‌ಗಳಲ್ಲಿ ಹೊರರಾಜ್ಯದಿಂದ ಬಂದ ಅಧಿಕಾರಿಗಳಿದ್ದು ಕನ್ನಡಭಾಷೆ ಬರುತ್ತಿಲ್ಲ. ಹಿಂದಿ, ಇಂಗ್ಲೀಷ್, ತಮಿಳು, ತೆಲಗು ಮಾತನಾಡುತ್ತಾರೆ. ಇವರ ಭಾಷೆ ಕಾರ್ಮಿಕರಿಗೆ ಅರ್ಥವಾಗುತ್ತಿಲ್ಲ. ಇದರಿಂದ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಕೆಲವು ಬ್ಯಾಂಕ್‌ಗಳಲ್ಲಿ ಬಾಂಡ್ ತರಲು ಹೇಳಿದರೆ ಇನ್ನು ಕೆಲವು ಬ್ಯಾಂಕ್‌ಗಳಲ್ಲಿ ಸಿವಿಲ್ ಕೋರ್ ತನ್ನಿ ಎನ್ನುತ್ತಿದ್ದಾರೆ. ಒಟ್ಟಾರೆ ವಿಶ್ವಕರ್ಮ ಯೋಜನೆ ಬಡ ಕಾರ್ಮಿಕರನ್ನು ಗೋಳಾಡಿಸಲು ಜಾರಿಗೆ ತಂದಂತೆ ಕಾಣುತ್ತಿದೆ. ತಕ್ಷಣ ಸಂಸದರು, ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಅಣ್ಣಪ್ಪ ಮೇಸ್ತಿç ಮಾತನಾಡಿ, ಸಾಗರದಲ್ಲಿ ಕಾರ್ಮಿಕರಿಗೆ ವಿತರಣೆ ಮಾಡಲು ಕಾರ್ಮಿಕ ಕಿಟ್‌ಗಳು ಬಂದಿವೆ. ಆದರೆ ಶಾಸಕರು ಡೇಟ್ ಕೊಡುತ್ತಿಲ್ಲ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಕಿಟ್ ಕೊಡದೆ ಸತಾಯಿಸುತ್ತಿದ್ದಾರೆ. ಸದ್ಯದಲ್ಲಿಯೆ ಮಳೆಗಾಲ ಪ್ರಾರಂಭವಾಗುತ್ತದೆ. ಅಷ್ಟರೊಳಗೆ ಕಿಟ್ ಕೊಟ್ಟರೆ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಮಳೆಗಾಲದಲ್ಲಿ ಕಿಟ್ ಕೊಟ್ಟರೆ ಯಾವುದೇ ಪ್ರಯೋಜನವಾಗುವುದಿಲ್ಲ. ಕಾರ್ಮಿಕರಿಗೆ ಕಿಟ್ ಕೊಡಿ ಎಂದು ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷ ರಾಮಚಂದ್ರ ಮೇಸ್ತ್ರಿ ಮಾತನಾಡಿದರು. ಗೋಷ್ಟಿಯಲ್ಲಿ ಉಮೇಶ್, ಶಂಕರಪ್ಪ, ಕೃಷ್ಣಮೂರ್ತಿ ಹಾಜರಿದ್ದರು.
ಮೋದಿಯವರೇ ಜಾತಿಗಣತಿಗೆ ಮುಂದಾಗಿದ್ದು ರಾಜ್ಯ ಸರ್ಕಾರದ ಮೇಲಿನ ದೊಡ್ಡಭಾರ ತಪ್ಪಿದಂತಾಗಿದೆ: ಶಾಸಕ ಗೋಪಾಲಕೃಷ್ಣ ಬೇಳೂರು