ಬಾಗಲಕೋಟೆ: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ರಾಜ್ಯದಲ್ಲಿ ಬಿಯರ್ ಬೆಲೆಯನ್ನು 10 ರೂ. ಹೆಚ್ಚಳ ಮಾಡಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಾಗಿರುವುದು ನಿಜ. ಆದರೆ ಮಹಾರಾಷ್ಟ್ರ, ಆಂಧ್ರ, ತಮಿಳುನಾಡುಗಿಂತ ದರ ಕಡಿಮೆ ಇದೆ. ಪ್ರೀಮಿಯಂ ಬ್ರಾಂಡ್ ಮದ್ಯದ ದರ ಏರಿಕೆ ಮಾಡಿಲ್ಲ. ಬಿಯರ್‌ಬೆಲೆ ಮಾತ್ರ ಬಾಟಲ್‌ಗೆ 10 ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.
ಗುಣಮಟ್ಟದ ಮದ್ಯ ಪೂರೈಸುವ ಉದ್ದೇಶದಿಂದ ಬೆಲೆ ಹೆಚ್ಚಿಸಿದ್ದೇವೆ. ಎಲ್ಲ ಸರ್ಕಾರಗಳೂ ಮದ್ಯದ ಬೆಲೆ ಏರಿಕೆ ಆಗಿದೆ. ನಮ್ಮ ಸರ್ಕಾರದಲ್ಲೂ ಸ್ವಲ್ಪ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.