ತುಮಕೂರು: ಮಧುಗಿರಿ ಪಟ್ಟಣವನ್ನೇ ಬೆಚ್ಚಿಬೀಳಿಸಿದ ಕೊಲೆ ಪ್ರಕರಣದ 4 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ.50 ಸಾವಿರ ದಂಡವನ್ನು ವಿಧಿಸಿ ಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ: 12-03-2021 ರಂದು ಬೆಳಗ್ಗೆ ಸುಮಾರು 09:15 ಗಂಟೆ ಸಮಯದಲ್ಲಿ ಕೂಲ್ ಹೇರ್ ಸ್ಟೈಲ್ ಕಟಿಂಗ್ ಶಾಪ್ ಎದುರು ಇದೇ ಮಧುಗಿರಿಯ ಗುರುಕಿರಣ್ ಬಿನ್ ಗಂಗಾಧರಪ್ಪ, ಮಧುಗೌಡ ಬಿನ್ ರಂಗಪ್ಪ, ಎಂ.ವಿ. ಧನಂಜಯಾ ಬಿನ್ ವೀರಣ್ಣ ಇವರುಗಳು ಕೂಲ್ ಹೇರ್ ಸ್ಟೈಲ್ ಅಂಗಡಿಯ ಮುಂಭಾಗದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತಿದ್ದ ಮೃತ ಆರ್. ವೀರಭದ್ರಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕೆಳಕ್ಕೆ ಎಳೆದುಕೊಂಡು ಆರೋಪಿ-1 ಗುರುಕಿರಣ್ ಡ್ರಾಗರ್‌ನಿಂದ, 2ನೇ ಆರೋಪಿ ಮಧುಗೌಡ ಬಟನ್ ಚಾಕುವಿನಿಂದ, 3ನೇ ಆರೋಪಿ ಸ್ಟೀಲ್ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ಆರ್.ವಿ ಸ್ವಾಮಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದಿದ್ದಾರೆ.
ಸದರಿ 3 ಜನ ಆರೋಪಿತರಿಗೆ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಚಂದನ್ ಕುಮಾರ್ ಬಿನ್ ರಾಮಪ್ಪ ಇವರುಗಳು ಸಂಚು ರೂಪಿಸಿ ಕೊಲೆ ಮಾಡಿದ್ದು ತನಿಖೆಯಿಂದ ದೃಢಪಟ್ಟ ಮೇರೆಗೆ ಅಂದಿನ ತನಿಖಾಧಿಕಾರಿಯಾದ ಎಂ.ಎಸ್ ಸರ್ದಾರ್ ರವರು ದೋಷಾರೋಪಣಾ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ಹೇಳಿದ್ದಾರೆ.
ಎಸ್. ಸಂಖ್ಯೆ 5029/2021ರಲ್ಲಿ ಕಲಂ 302 ರೆ.ವಿ 120ಬಿ 109 ಕೆ.ವಿ 34 ಭಾರತೀಯ ದಂಡ ಸಂಹಿತೆಯ ರೀತ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಪ್ರಕರಣದ ಅಧಿವಿಚಾರಣೆ ನಡೆಸಿದ ಮಧುಗಿರಿಯ ಮಾನ್ಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ರವರು ಅಭಿಯೋಜನೆಯು ಆರೋಪವನ್ನು ರುಜುವಾತುಪಡಿಸಿದ ಮೇರೆಗೆ ದಿನಾಂಕ: 03-05-2025 ರಂದು ಸದರಿ 4 ಜನ ಅರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಕಲಂ 302, 120ಬಿ, 109 ಕಿವಿ 34 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 50 ಸಾವಿರ ದಂಡ ವಿಧಿಸಿ, ದಂಡದ ಹಣದಲ್ಲಿ ಪರಿಹಾರವಾಗಿ ಮೃತನ ತಂದೆ ರುದ್ರಪ್ಪ, ನಿವೃತ್ತ ಶಿಕ್ಷಕರು ಮತ್ತು ತಾಯಿ ಚನ್ನಬಸಮ್ಮ ಇವರುಗಳಿಗೆ ತಲಾ ರೂ. 50 ಸಾವಿರ ಪರಿಹಾರವಾಗಿ ನೀಡಲು ಆದೇಶ ತೀರ್ಪು ನೀಡಿರುತ್ತಾರೆ ಎಂದಿದ್ದಾರೆ.
ಈ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ. ನಿರಂಜನಮೂರ್ತಿ, ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು ಎಂಬುದಾಗಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಅಲ್ಲವೆಂದು ಸಾಬೀತಾದ್ರೆ, ರಾಜೀನಾಮೆಗೆ ಸಿದ್ಧ: ಛಲವಾದಿ ನಾರಾಯಣಸ್ವಾಮಿ ಸವಾಲ್
Property Law: ತಂದೆಯ ಆಸ್ತಿಯಲ್ಲಿ ಯಾರಿಗೆಲ್ಲ ಪಾಲು ಇದೆ? ಕಾನೂನು ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ