ಕಲಬುರ್ಗಿ: ಸಿಇಟಿ ಪರೀಕ್ಷೆಯ ವೇಳೆಯಲ್ಲಿ ಜನಿವಾರ ತೆಗೆಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ರೈಲ್ವೆ ನೇಮಕಾತಿ ಪರೀಕ್ಷೆ ಮಾರ್ಗಸೂಚಿಯಲ್ಲೂ ಜನಿವಾರ, ತಾಳಿ, ಬಳೆ ತೆಗೆಸುವಂತೆ ಮಾಡಿದ್ದಂತ ಆದೇಶ ವಿವಾದಕ್ಕೆ ಕಾರಣವಾಗಿತ್ತು. ಇದೀಗ ನೀಟ್ ಪರೀಕ್ಷೆಯಲ್ಲೂ ಜನಿವಾರವನ್ನು ಅಧಿಕಾರಿಗಳು ತೆಗೆಸಿರೋದಾಗಿ ತಿಳಿದು ಬಂದಿದೆ.
ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನೀಟ್ ಪರೀಕ್ಷೆಗೆ ತೆರಳಿದ್ದಂತ ಶ್ರೀಪಾದ್ ಪಾಟೀಲ್ ಎಂಬುವರ ಜನಿವಾರವನ್ನು ಅಧಿಕಾರಿಗಳು ತೆಗೆಸಿದ್ದಾಗಿ ಆರೋಪ ಕೇಳಿ ಬಂದಿದೆ.
ನೀಟ್ ಅಭ್ಯರ್ಥಿ ಶ್ರೀಪಾದ್ ಪಾಟೀಲ್ ಅವರಿಗೆ ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಜನಿವಾರ ತೆಗೆಯುವಂತೆ ಸೂಚಿಸಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಜನಿವಾರ ತೆಗೆದು ಪರೀಕ್ಷಾ ಕೇಂದ್ರಕ್ಕೆ ಶ್ರೀಪಾದ್ ಪಾಟೀಲ್ ತೆರೆಳಿದ್ದಾರೆ. ಈ ಮೂಲಕ ಜನಿವಾರ ತೆಗೆದು ನೀಟ್ ಪರೀಕ್ಷೆಯನ್ನು ಅಭ್ಯರ್ಥಿ ಶ್ರೀಪಾದ್ ಪಾಟೀಲ್ ಬರೆದಿರುವುದಾಗಿ ತಿಳಿದು ಬಂದಿದೆ.