ನವದೆಹಲಿ : ಪಹಲ್ಗಾಮ್ ಉಗ್ರ ದಾಳಿಯ ಬೆನ್ನಲ್ಲೇ ಪಾಕಿಸ್ತಾನವು ಭಾರತಕ್ಕೆ ಮತ್ತೆ ಅಣುಬಾಂಬ್ ಬೆದರಿಕೆ ಹಾಕಿದ್ದು, ನಮ್ಮ ವಿಷಯಕ್ಕೆ ಬಂದ್ರೆ ಅಣುಬಾಂಬ್ ಹಾಕುತ್ತೇವೆ ಎಂದು ಪಾಕ್ ರಾಯಭಾರಿ ಮೊಹಮ್ಮದ್ ಖಾಲಿದ್ ಜಮಾಲಿ ವಾರ್ನಿಂಗ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಮ್ಮ ವಿಷಯಕ್ಕೆ ಬಂದ್ರೆ ಸಂಖ್ಯಾಬಲ ನಮಗೆ ಲೆಕ್ಕಕ್ಕಿಲ್ಲ, ಸಾಂಪ್ರಾದಯಿಕ ಪರಮಾಣ ಎರಡೂ ಶಕ್ತಿಯನ್ನು ಬಳಸುತ್ತವೆ. ಜನರ ಬೆಂಬಲದೊಂದಿಗೆ ಸಶಸ್ತ್ರ ಪಡೆ ಪ್ರತಿಕ್ರಿಯೆ ನೀಡಲಿದೆ.
ಪೂರ್ಣ ಶಕ್ತಿ ಮತ್ತು ಸಾಮರ್ಥ್ಯದೊಂದಿಗೆ ಪ್ರತಿಕ್ರಿಯಿಸುತ್ತೇವೆ ಎಂದು ಹೇಳಿದ್ದಾರೆ.