ರಾಜ್ಯ ಸರಕಾರಿ ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳಲ್ಲಿ ಒದಗಿಸುವ “ಸಂಬಳ ಪ್ಯಾಕೇಜ್”ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು ಮತ್ತು ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ, ನೌಕರರಿಗೆ ಕಡ್ಡಾಯಗೊಳಿಸಿ, ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು ಜಿಲ್ಲೆಯಲ್ಲಿನ ಪ್ರತಿ ಸರಕಾರಿ ನೌಕರ ಸಂಬಳ ಪ್ಯಾಕೇಜ್ ಖಾತೆ ಹೊಂದಿ, ಅದರ ಪ್ರಯೋಜನ ಪಡೆಯಬೇಕು. ಆದ್ದರಿಂದ ಜಿಲ್ಲೆಯ ಎಲ್ಲ ಇಲಾಖೆಗಳು ಜಿಲ್ಲಾ ಮುಖ್ಯಸ್ಥರು ತಮ್ಮ ಇಲಾಖೆಯ ಜಿಲ್ಲಾ, ತಾಲೂಕು, ಗ್ರಾಮಮಟ್ಟದಲ್ಲಿರುವ ಡಿ.ಡಿ.ಓ ಗಳ ಮೂಲಕ ಪ್ರತಿ ನೌಕರನ ವೇತನ ಪಾವತಿ ಖಾತೆ ಸಂಬಳ ಪ್ಯಾಕೇಜ್ ಖಾತೆ ಆಗಿರುವದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅವರ ವೇತನ ಖಾತೆಯು ಸಂಬಳ ವೇತನ ಖಾತೆ ಆಗಿರದಿದ್ದಲ್ಲಿ ತಾವೇ ಖುದ್ದು ಮುತುವರ್ಜಿ, ಜವಾಬ್ದಾರಿ ವಹಿಸಿ ಮಾಡಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಪ್ರತಿ ಸರಕಾರಿ ನೌಕರನಿಗೆ ಸಂಬಳ ಪ್ಯಾಕೇಜ್ ಖಾತೆ ಮತ್ತು ಪಿ.ಎಂ.ಜೆ.ಜೆ.ಬಿ.ವೈ ಹಾಗೂ ಪಿ.ಎಂ.ಎಸ್.ಬಿ.ವೈ ವಿಮೆ ಮಾಡಿಸಿರುವ ಬಗ್ಗೆ ಈ ಜ್ಞಾಪನಾ ಪತ್ರದೊಂದಿಗೆ ಕಳಿಸಿರುವ ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ತಮ್ಮ ಇಲಾಖೆಯ ಜಿಲ್ಲಾ ಮುಖ್ಯಸ್ಥರ ಮೂಲಕ ಮೇ 10, 2025 ರ ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಎನ್‍ಐಸಿ ಕಚೇರಿಯಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಯೋಜನೆಯ ನೊಡಲ್ ಅಧಿಕಾರಿಗಳಾದ ಪ್ರಭುದೇವ ಎನ್.ಜಿ, ಲೀಡ್ ಬ್ಯಾಂಕ್ ಮ್ಯಾನೇಜರ(9483517730), ಡಾ.ಸುರೇಶ ಹಿರೇಮಠ, ವಾರ್ತಾ ಸಹಾಯಕ ಅಧಿಕಾರಿ, ವಾರ್ತಾ ಇಲಾಖೆ(9538076619), ರಾಜೀವ ಚಡಚಾಳ, ಜಿಲ್ಲಾ ಎನ್.ಐ.ಸಿ ಅಧಿಕಾರಿ (9482552254) ಮತ್ತು ಸಂಬಳ ಪ್ಯಾಕೇಜ್ ಖಾತೆ ಬ್ಯಾಂಕರ್ಸಗಳಾದ ಆರ್.ಚಿನ್ನಾರಾವ್, ಬ್ಯಾಂಕ ಆಫ್ ಬರೋಡಾ ಹುಬ್ಬಳ್ಳಿ ಕೇಂದ್ರ ಕಚೇರಿ (8123533037), ಶಿವಾನಂದ ಎ, ಕೆನರಾ ಬ್ಯಾಂಕ್ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ (9886198813), ಎಂ.ಎಸ್.ಭಟ್, ಎಸ್.ಬಿ.ಐ ಹುಬ್ಬಳ್ಳಿ ಕೇಂದ್ರ ಕಚೇರಿ (7022963640) ಅವರನ್ನು ಸಂಪರ್ಕಿಸಬಹುದು.
ಪ್ರತಿ ಇಲಾಖೆಯ ಜಿಲ್ಲಾ ಮುಖ್ಯಸ್ಥರು ತಮ್ಮ ಸಿಬ್ಬಂದಿಗಳ ವೇತನ ಖಾತೆ ವಿವರವನ್ನು ಸಂಬಳ ಪ್ಯಾಕೇಜ್ ಖಾತೆ ಆಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಆಯಾ ಬ್ಯಾಂಕ್ ಇಮೇಲ್‍ಗಳಾದ 1) ಹುಬ್ಬಳ್ಳಿಯ ಎಸ್.ಬಿ.ಐ ಬ್ಯಾಂಕ್‍ನ ಆಡಳಿತ ಕಚೇರಿಯ ಇಮೇಲ್ agmcsptl.aohubban@sbi.co.in 2) ಹುಬ್ಬಳ್ಳಿಯ ಕೆನರಾ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ಇಮೇಲ್ firohbi@canaraback.com 3) ಹುಬ್ಬಳ್ಳಿಯ ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿಯ rbdm.hubli@bankofbaroda.com ಗಳಿಗೆ ಕಳಿಸಿ ಪರಿಶೀಲಿಸಿಕೊಳ್ಳಬಹುದು.
ಮಾಹಿತಿ ಸಲ್ಲಿಸಲು ನಿಗದಿಗೊಳಿಸಿದ ಮೇ 10, 2025 ರೊಳಗೆ ಎಲ್ಲ ಇಲಾಖೆಗಳು ಸರಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆಗಳ ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.