ಶಿವಮೊಗ್ಗ: ನಿನ್ನೆಯ ಬುಧವಾರದಂದು ಐಸಿಎಸ್ಸಿ 10ನೇ ತರಗತಿಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಈ ಪರೀಕ್ಷೆಯಲ್ಲಿ ಸಾಗರದ ರಾಧಾಕೃಷ್ಣ ಪಬ್ಲಿಕ್ ಶಾಲೆಯ ನಿಸರ್ಗ.ಬಿ ಶೇ.96.8ರಷ್ಟು ಅಂಕಗವನ್ನು ಗಳಿಸಿ, ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ರಾಧಾಕೃಷ್ಣ ಶಾಲೆಯ ವಿದ್ಯಾರ್ಥಿಗಳು ಈ ಬಾರಿಯ ಐಸಿಎಸ್ಸಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ನಿನ್ನೆ ಪ್ರಕಟವಾದಂತ ಐಸಿಎಸ್ಸಿ 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ನಿಸರ್ಗ.ಬಿ ಶೇ.96.8ರಷ್ಟು ಅಂಕ ಗಳಿಸಿದ್ದಾರೆ.
ಅಂದಹಾಗೇ ನಿಸರ್ಗ.ಬಿ ಅವರು ಸಾಗರದ ಮೆಸ್ಕಾಂ ವಿಭಾಗದಲ್ಲ ಆಡಳಿತ ಮತ್ತು ಸಿಬ್ಬಂದಿ ಶಾಖೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವಂತ ಭಾಸ್ಕರ್.ಆರ್ ಮತ್ತು ಸವಿತಾ ದಂಪತಿಗಳ ಪುತ್ರಿಯಾಗಿದ್ದಾರೆ.
ನಿಸರ್ಗ ಅವರು ಐಸಿಎಸ್ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.96.8 ಅಂಕಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಕ್ಕೆ, ರಾಧಾಕೃಷ್ಣ ಶಾಲೆಯ ಪ್ರಾಂಶುಪಾಲಕರು, ಶಿಕ್ಷಕ ವೃಂದ, ತಂದೆ ಭಾಸ್ಕರ್.ರ್ ಅವರ ಮೆಸ್ಕಾಂ ಸಿಬ್ಬಂದಿಗಳು ಶ್ಲಾಘಿಸಿ, ಅಭಿನಂದನೆ ತಿಳಿಸಿದ್ದಾರೆ.
ಫೈರಿಂಗ್ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಮುತ್ತಪ್ಪ ರೈ ಪುತ್ರ ರಿಕ್ಕಿಗೆ ಪೊಲೀಸರ ನೋಟಿಸ್
ಕರ್ನಾಟಕದ ಹಿರಿಮೆಗೆ ಮತ್ತೊಂದು ಗರಿ: ಹಣಕಾಸು ನಿರ್ವಹಣೆ, ಅಭಿವೃದ್ಧಿ, ಆಡಳಿತದಲ್ಲಿ ದೇಶದಲ್ಲೇ 3ನೇ ಸ್ಥಾನ