ಬೆಂಗಳೂರು: ಯುದ್ಧ ಬೇಡ, ಯುದ್ಧದಿಂದ ಯಾರೂ ಉದ್ದಾರ ಆಗಿಲ್ಲ. ಯುದ್ಧ ಮಾಡುವುದರಿಂದ ನಮ್ಮ ಸೈನಿಕರೇ ಸಾಯೋದು ಎಂಬುದಾಗಿ ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಸ್ಯಾಂಡಲ್ ವುಡ್ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಂತ ಉಗ್ರರ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ. ಉಗ್ರರು ಪಹಲ್ಗಾಮ್ ಗೆ ಹೇಗೆ ಬಂದ್ರು? ಹೀಗೆಲ್ಲಾ ಆಗಿದ್ದರ ಹಿಂದಿನ ನ್ಯೂನ್ಯತೆ ಏನು ಅನ್ನೋದನ್ನು ತಿಳಿದುಕೊಳ್ಳಬೇಕು ಎಂದರು.
ನಾನು ಈ ಹಿಂದೆ ಉಪೇಂದ್ರ ಜೊತೆಗಿನ ಒಂದು ಸಿನಿಮಾ ಸಂದರ್ಭದಲ್ಲಿ ಕಾಶ್ಮೀರ ಹೋಗಿ ಬಂದಿದ್ದೇನೆ. ಆ ಸಂದರ್ಭದಲ್ಲಿ ನಮ್ಮ ಶೂಟಿಂಗ್ ಗೆ ಕಾಶ್ಮೀರದಲ್ಲಿ ಪುಲ್ ಸೆಕ್ಯೂರಿಟಿ ನೀಡಿದ್ದರು ಎಂದು ಹೇಳಿದರು.
ಪಹಲ್ಗಾಮ್ ದಾಳಿಯ ಪ್ರತೀಕವಾಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದಂತ ಅವರು, ನಾನು ಯುದ್ಧ ಮಾಡುವುದನ್ನು ಇಷ್ಟ ಪಡಲ್ಲ. ಯುದ್ಧ ಮಾಡೋದರಿಂದ ಯಾರೂ ಉದ್ದಾರ ಆಗಲ್ಲ. ಎಲ್ಲದಕ್ಕೂ ಯುದ್ಧವೇ ಉತ್ತರವಲ್ಲ. ನಮ್ಮ ಸೈನಿಕರೇ ಸಾಯೋದು. ನಾವು ನಾಯಕನ್ನು ಎಲೆಕ್ಟ್ ಮಾಡೋದು ನಮ್ಮ ರಕ್ಷಣೆ ಮಾಡೋದಕ್ಕೆ ಅಂತ. ಇನ್ನೊಂದು ಬಾರಿ ಈ ತರ ನಡೆಯದೇ ಇರೋ ಹಾಗೆ ರಕ್ಷಣಾತ್ಮಕ ಕ್ರಮಗಳನ್ನು ವಹಿಸಬೇಕು. ಅದನ್ನು ಬಿಟ್ಟು ಯುದ್ಧನೇ ಪರಿಹಾರವಲ್ಲ ಎಂದರು.
ಅಟ್ಟಾರಿ-ವಾಘ್ ಗಡಿ ಬಂದ್ ಮಾಡಿದ ಪಾಕಿಸ್ತಾನ: ಭಾರತದಿಂದ ಗಡಿಪಾರಾದ ನಾಗರಿಕರಿಗೆ ಪ್ರವೇಶ ನಿರಾಕರಣೆ